ರುಕ್ಮಿಣಿಯನ್ನು ಹೊಗಳಿದ ರಶ್ಮಿಕಾ…!
ಜನ ಚಿತ್ರ ಮಂದಿರಗಳಿಗೆ ಬರ್ತಿಲ್ಲ….ನಟರಿಗೆ ಪ್ರೋತ್ಸಾಹ ಸಿಗ್ತಿಲ್ಲ….ಎಂದೆಲ್ಲಾ ಮಾತುಗಳನ್ನ ಹುಸಿಯಾಗಿಸಿದ್ದು ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ. ಸೆಪ್ಟೆಂಬರ್ 25 ರಂದು ಕರ್ನಾಟಕದಲ್ಲಿ ರಿಲೀಸ್ ಆದ ಪ್ರೇಮದ ಊರಲಿ ಇದೀಗ 50 ಕೋಟಿಗಿಂತ ಅಧಿಕ ಗಳಿಕೆಯ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದೆ.
ಇದೀಗ ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಯಾವುದೇ ಕನ್ನಡ ಸಿನಿಮಾ ರಿಲೀಸ್ ಆದರು ರಶ್ಮಿಕಾ ಪ್ರೋತ್ಸಾಹಿಸುವುದಿಲ್ಲ ಎನ್ನುವ ವಿಚಾರವಾಗಿ ಟ್ರೋಲ್ಗೆ ಗುರಿಯಾಗುವ ನಟಿ ಈ ಬಾರಿ ಪ್ರೇಮದ ಊರಲಿ ಚಿತ್ರದ ಗುಣಗಾನ ಮಾಡಿದ್ದಾರೆ.
ರುಕ್ಮಿಣಿ ನಟನೆಗೆ ಸಾನ್ವಿ ಫಿದಾ!
ಹೀಗೆ ಹೊಗಳು ಮೂಲ ಕಾರಣ ಸಿನಿಮಾದ ನಾಯಕಿ ತಪಸ್ವಿನಿ ಪುನಚ್ಚ. ಹೌದು,ಪ್ರೇಮದ ಊರಲಿ ರುಕ್ಮಿಣಿಯಾಗಿ ಎಲ್ಲರ ಮನಗೆದ್ದಿರುವ ತಪಸ್ವಿನಿ,ಮೂಲತಃ ಕೊಡಗಿನ ಹುಡುಗಿ. ರಶ್ಮಿಕಾ ಮಂದಣ್ಣ ಕೂಡ ಕೊಡಗಿನವರಾಗಿರುವ ಕಾರಣ ತಪಸ್ವಿನಿಯವರ ನಟನೆ ನೋಡಿ ಖುಷಿ ಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸದ್ಯಕ್ಕೆ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಸಿನಿಮಾದ ಎಲ್ಲಾ ಪಾತ್ರಗಳು ಜನರ ಮನ ಗೆದ್ದಿದ್ದು, ತನ್ನ ಮುಗ್ದತೆಯಿಂದ ರುಕ್ಮಿಣಿ ಪಾತ್ರ ಸಿನಿ ಪ್ರಿಯರ ಮನ ಗೆಲ್ಲುತ್ತಿದೆ.ಜೊತೆಗೆ ಈ ಸಿನಿಮಾದಲ್ಲಿ ರಂಗಾಯಣ ರಘು & ತಪಸ್ವಿನಿಯವರ ಕಾಂಬಿನೇಶನ್ ಜನಗಳಿಗೆ ಬಹಳಷ್ಟು ಇಷ್ಟವಾಗಿದೆ. ಇದ್ರೆ ಈ ರೀತಿಯ ಮಾವ -ಸೊಸೆ ಇರಬೇಕಪ್ಪ ಅನ್ನುವಷ್ಟು ಜನಕ್ಕೆ ಹತ್ತಿರವಾಗಿದೆ.