new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ UPDATE ಪುಕಾರ್ ಪುಕಾರ್ । Gossips

ದೊಡ್ಮನೆಲಿ ಕಾವ್ಯ ಹವಾ ಈ ಬಾರಿ ಮಹಿಳಾ ವಿನ್ನರ್ ಆಗೋದು ಪಕ್ಕಾ…!

ದೊಡ್ಮನೆಲಿ ಕಾವ್ಯ ಹವಾ ಈ ಬಾರಿ ಮಹಿಳಾ ವಿನ್ನರ್ ಆಗೋದು ಪಕ್ಕಾ…!
  • PublishedSeptember 24, 2026

ಬಿಗ್‌ಬಾಸ್ ಕನ್ನಡ ಸೀಸನ್ 13ರ ಎರಡು ವಾರಗಳ ಜರ್ನಿಯಲ್ಲಿ ಕಾವ್ಯಾ ಗೌಡ ತಮ್ಮದೇ ರೀತಿಯಲ್ಲಿ ಗಮನ ಸೆಳೆದಿದ್ದಾರೆ. ಕ್ಯೂಟ್ ರಿಯಾಕ್ಷನ್‌ಗಳು, ಫನ್ನಿ ಮಾತುಗಳು, ಡ್ಯಾನ್ಸ್, ಟಾಸ್ಕ್‌ನಲ್ಲಿನ ಎನರ್ಜಿ, ಸಣ್ಣಪುಟ್ಟ ಜಗಳಗಳು, ಫ್ಲರ್ಟಿಂಗ್‌ಗೆ ಕೊಟ್ಟ ಉತ್ತರಗಳು, ಮನೆಯವರ ಜೊತೆಗಿನ ಫನ್ ಹಾಗೂ ತಮ್ಮ ನಿಲುವನ್ನು ನೇರವಾಗಿ ಹೇಳುವ ಸ್ವಭಾವ—ಹೀಗೆ ಕಾವ್ಯಾ ಅವರ ಹಲವು ಶೇಡ್‌ಗಳು ಈ ಎರಡು ವಾರಗಳಲ್ಲಿ ಕಾಣಿಸಿಕೊಂಡಿವೆ.

ಟಾಸ್ಕ್ ಅಂದ್ರೆ ಕಾವ್ಯಾ ಹಿಂದೆ ಸರಿಯಲ್ಲ!

ಟಾಸ್ಕ್ ವಿಚಾರಕ್ಕೆ ಬಂದರೆ ಕಾವ್ಯಾ ತಮ್ಮ ಬೆಸ್ಟ್ ಕೊಡಬೇಕು ಅನ್ನೋ ಮನಸ್ಥಿತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಗೇಮ್‌ನಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುವುದರ ಜೊತೆಗೆ, ಆಟದ ಸಂದರ್ಭದಲ್ಲಿ ಎದುರಾಳಿಗಳ ಜೊತೆ ವಾದವಾದರೂ ಮತ್ತೆ ಗೇಮ್‌ನತ್ತ ಗಮನ ಹರಿಸಿದ್ದಾರೆ.

ಟಾಸ್ಕ್‌ನಲ್ಲಿ ಕಾವ್ಯಾ ಅವರನ್ನು ಎತ್ತಿಕೊಂಡು ಮೂರು ರೌಂಡ್ ಸುತ್ತಿಸಿದಾಗ ತಾಂಡವ್ ಲವರ್ ಥರ ಆಕ್ಟ್ ಮಾಡಿದ್ದು ಫುಲ್ ಫನ್ ಮೂಮೆಂಟ್ ಆಗಿತ್ತು. ಮತ್ತೊಂದೆಡೆ ಮನೆಯವರು ಟಾಸ್ಕ್ ವಿಚಾರದಲ್ಲಿ ಜೋರಾಗಿ ವಡೆಯುತಿದ್ದಾಗ ಕಾವ್ಯಾ “ರಿಯಲ್ ಆಗಿ ವಡೆಯುತಿದ್ದರೇ ನನ್ ಮಕ್ಕಳು” ಎಂದು ಹೇಳಿದ್ದು ಕೂಡ ಅವರ ಕ್ಯೂಟ್ ಎಕ್ಸ್‌ಪ್ರೆಷನ್‌ಗೆ ಮತ್ತೊಂದು ಉದಾಹರಣೆ.

ಸಂಗೀತಾ ಜೊತೆ ಕ್ಯೂಟ್ ಡ್ಯಾನ್ಸ್, ಹಾಡಿನಲ್ಲಿ “ಹೆಣ್ಮಕ್ಳೇ ಸ್ಟ್ರಾಂಗ್ ಗುರು” ಎಂಬ ಮಾತಿಗೆ muscles ತೋರಿಸಿದ ರಿಯಾಕ್ಷನ್—ಟಾಸ್ಕ್‌ಗಳ ಮಧ್ಯೆಯೂ ಕಾವ್ಯಾ ಅವರ ಫನ್ ಸೈಡ್ ಕಾಣಿಸಿಕೊಂಡಿದೆ.

ಕ್ಯೂಟ್ ಕಾವ್ಯಾ… ಫುಲ್ ಎಂಟರ್‌ಟೈನರ್ ಕೂಡ!

ಕಾವ್ಯಾ ಅವರ ದೊಡ್ಡ ಪ್ಲಸ್ ಎಂದರೆ ಅವರ ರಿಯಾಕ್ಷನ್‌ಗಳು. ಯಾರಾದರೂ ಏನಾದರೂ ಹೇಳಿದಾಗ ತಕ್ಷಣ ಸ್ಮೈಲ್, ಕನ್‌ಫ್ಯೂಷನ್, ಶಾಕ್ ಅಥವಾ ಸಣ್ಣ ಆಕ್ಷನ್ ಮೂಲಕ ಪ್ರತಿಕ್ರಿಯಿಸುವ ಕಾವ್ಯಾ, ಮನೆಯ ಹಲವು ಕ್ಷಣಗಳನ್ನು ಫನ್ ಆಗಿಸಿದ್ದಾರೆ.

ತಾಂಡವ್ ಅವರ “ಬ್ರ್ಯಾಂಡ್ ಅಂಬಾಸಿಡರ್” ಎಂದು ಸುದೀಪ್ ಕಿಚಾಯಿಸಿದಾಗ ಕಾವ್ಯಾ ಕೊಟ್ಟ ಕ್ಯೂಟ್ ರಿಯಾಕ್ಷನ್, ನಂತರ “ಬ್ರ್ಯಾಂಡ್ ಅಂಬಾಸಿಡರ್, ಯು ಆರ್ ಸೇಫ್” ಎಂದಾಗ ಕೈ ಮುಗಿದು ಕರ್ನಾಟಕ ಜನತೆಗೆ ಥ್ಯಾಂಕ್ಸ್ ಹೇಳಿದ್ದು—ಎರಡನೇ ವಾರದ ಫನ್ ಮೂಮೆಂಟ್‌ಗಳಲ್ಲಿ ಒಂದಾಗಿತ್ತು.

ಇನ್ನು ಸುದೀಪ್ ಅವರು ಕಾಕ್‌ರೋಚ್ ಆಕ್ಷನ್ ತೋರಿಸಿದಾಗ ಕಾವ್ಯಾ ನಕ್ಕ ರೀತಿ, ಸ್ವೀಟ್ ಬಾಕ್ಸ್‌ನಲ್ಲಿ “ಖಾರ ಸ್ವೀಟ್” ಬಗ್ಗೆ ಚರ್ಚೆ ಮಾಡಿದ ರೀತಿ, ಸಣ್ಣ ಸಣ್ಣ ಮಾತುಗಳಿಗೂ ಕೊಡುವ ರಿಯಾಕ್ಷನ್‌ಗಳು ಕಾವ್ಯಾ ಅವರ ಎಂಟರ್‌ಟೈನರ್ ಸೈಡ್ ತೋರಿಸಿವೆ.

ಕ್ಯೂಟ್ ಸ್ಮೈಲ್ ಬದಿಗಿಟ್ಟು… ಖಡಕ್ ಮಾತು!

ಕಾವ್ಯಾ ಕೇವಲ ನಗುತ್ತಾ ಇರುವ ಸ್ಪರ್ಧಿ ಅಲ್ಲ ಅನ್ನೋದನ್ನೂ ಈ ಎರಡು ವಾರಗಳು ತೋರಿಸಿವೆ.

ಧನುಷ್ ಜೊತೆಗಿನ “ಕಂಟೆಂಟ್” ವಿಚಾರದಲ್ಲಿ ಕಾವ್ಯಾ ತಮ್ಮ ನಿಲುವನ್ನು ನೇರವಾಗಿ ಹೇಳಿದರು.

“ಕಂಟೆಂಟ್ ಬೇಕು ಅಂದ್ರೆ ಬೇರೆ ಅವ್ರ ಇಟ್ಕೋ, ನನ್ನತ್ರ ಬೇಡ.”

ನಂತರ, “ನನಗೆ ಇಂಟರೆಸ್ಟ್ ಇಲ್ಲ, ಐ ಆ್ಯಮ್ ನಾಟ್ ಇಂಟರೆಸ್ಟೆಡ್ ಟು ಟಾಕ್ ಟು ಯು” ಎಂದು ಸ್ಪಷ್ಟವಾಗಿ ಹೇಳಿದ ಕಾವ್ಯಾ, ಸಾರಿ ಕೇಳಿದ ನಂತರವೂ ತಮ್ಮ ಅಸಮಾಧಾನವನ್ನು ಮುಚ್ಚಿಟ್ಟುಕೊಳ್ಳಲಿಲ್ಲ.

“ಐ ಡೋಂಟ್ ಅಪ್ರಿಷಿಯೇಟ್ ಇಟ್… ನನಗೆ ಬೇಡ, ನಾನು ಅಪ್ರಿಷಿಯೇಟ್ ಮಾಡಲ್ಲ” ಎಂದು ಹೇಳುವ ಮೂಲಕ ತಮ್ಮ ಗಡಿ ಮತ್ತು ನಿಲುವನ್ನು ನೇರವಾಗಿ ವ್ಯಕ್ತಪಡಿಸಿದರು. ಮಂಜು ಜೊತೆಗಿನ ಜಗಳ… ಕಾವ್ಯಾ ಮತ್ತೊಂದು ಶೇಡ್!

ಎರಡನೇ ವಾರದಲ್ಲಿ ಮಂಜು ಜೊತೆಗಿನ ಕಾವ್ಯಾ ಅವರ ಮಾತಿನ ಚಕಮಕಿ ಕೂಡ ಗಮನಾರ್ಹವಾಗಿತ್ತು.

ಮತ್ತೆ ಮತ್ತೆ ತಮ್ಮ ಜೊತೆ ಜಗಳಕ್ಕೆ ಬರುತ್ತಿದ್ದ ಮಂಜುಗೆ ಕಾವ್ಯಾ, “ನಿನ್ನ ಜೊತೆ ಮಾತಾಡೋಕೆ ನನಗೆ ಇಂಟರೆಸ್ಟ್ ಇಲ್ಲ, ಎನರ್ಜಿಯೂ ಇಲ್ಲ. ಸುಮ್ಮನೆ ಇರಿಟೇಟ್ ಮಾಡ್ಬೇಡ” ಎಂದು ಖಡಕ್ ಆಗಿ ಹೇಳಿದರು.

“ನನ್ನ ಹತ್ರ ಮಾತಾಡೋ ಅರ್ಹತೆ ನಿನಗಿಲ್ಲ” ಎಂಬ ರೀತಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಕಾವ್ಯಾ, ಮಂಜು ತಮ್ಮನ್ನು “ವೇಸ್ಟ್ ಕ್ಯಾಂಡಿಡೇಟ್” ಎಂದು ಕರೆದಾಗ, “ನೀನೇನು ದೊಡ್ಡ ಸಾಧನೆ ಮಾಡಿ ಬಂದಿದ್ದೀಯಾ?” ಎಂದು ಪ್ರಶ್ನಿಸಿದರು.

ಈ ಜಗಳದ ವಿಚಾರ ಸುದೀಪ್ ಅವರ ಮುಂದೆ ಬಂದಾಗಲೂ ಕಾವ್ಯಾ ಸೈಲೆಂಟ್ ಆಗಿ ಕುಳಿತು, ಸುದೀಪ್ ಮಂಜುಗೆ ಕ್ಲಾಸ್ ತೆಗೆದುಕೊಳ್ಳುವುದನ್ನು ಗಮನಿಸಿದರು.

ಸುದೀಪ್ ಅವರು “ಕಾವ್ಯಾ ತಮ್ಮ ಒರಿಜಿನಲ್ ಕ್ಯಾರೆಕ್ಟರ್‌ನ್ನೇ ಮರೆತಿದ್ದಾರೆ” ಎಂದು ಮಂಜುಗೆ ಹೇಳಿದಾಗ, ಕಾವ್ಯಾ ಕ್ಯೂಟ್ ಆಗಿ “ಹೌದು ಸರ್” ಎಂದಿದ್ದು ಮತ್ತೊಂದು ಗಮನಾರ್ಹ ಕ್ಷಣ.

“ಜಗಳದ ಕ್ಯಾಪ್ಟನ್” ಎಂದಾಗ ಕ್ಯೂಟ್ ರಿಯಾಕ್ಷನ್!

ಜಗಳದ ವಿಚಾರದಲ್ಲೂ ಕಾವ್ಯಾ ಅವರ ರಿಯಾಕ್ಷನ್ ಗಮನ ಸೆಳೆಯಿತು.ಸುದೀಪ್ ಅವರು ಜಗಳಕ್ಕೆ ಕಾವ್ಯಾ ಅವರನ್ನು ಕ್ಯಾಪ್ಟನ್ ಮಾಡೋಣ ಎಂದಾಗ ತಕ್ಷಣ “ನೋಓಓ!” ಎಂದರು. ಆದರೆ ಮಂಜುಗೆ ಜಗಳ ನಿಲ್ಲಿಸುವ ಕ್ಯಾಪ್ಟನ್ ಎಂದು ಹೇಳಿದಾಗ ನಕ್ಕು ಕೈ ಎತ್ತಿ ಸಮ್ಮತಿ ಸೂಚಿಸಿದರು.ಅದೇ ರೀತಿ “ದುಷ್ಟರನ್ನು ಮಟ್ಟ ಹಾಕು” ಎಂಬ ಮಾತಿಗೆ ಕಿರಣ್ ಶಾಸ್ತ್ರಿ ಮಟ್ಟ ಹಾಕಿದರು ಎಂಬ ಮಾತು ಬಂದಾಗ ಕಾವ್ಯಾ ಚಪ್ಪಾಳೆ ತಟ್ಟಿ ನಕ್ಕಿದ್ದು ಕೂಡ ಫನ್ ಮೂಮೆಂಟ್ ಆಗಿತ್ತು.

ನನ್ನ ಅಭಿಪ್ರಾಯ ಹೇಳೋಕೆ ಅವಕಾಶ ಕೊಡಿ!”

ಮನೆಯೊಳಗಿನ ಹಲವು ವಿಚಾರಗಳಲ್ಲಿ ಕಾವ್ಯಾ ತಮ್ಮ ಮಾತನ್ನು ಹೇಳುವುದಕ್ಕೆ ಅವಕಾಶ ಬೇಕು ಎಂಬ ನಿಲುವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.“ನಮ್ಮ ಒಪಿನಿಯನ್ ಹೇಳಬೇಕಾದ್ರೆ ರೆಸ್ಪೆಕ್ಟ್ ಕೊಡಿ” ಎಂಬ ರೀತಿಯಲ್ಲಿ ಮಾತನಾಡಿದ ಕಾವ್ಯಾ, ತಮ್ಮ ಮಾತನ್ನು ಮಧ್ಯದಲ್ಲೇ ನಿಲ್ಲಿಸಿದಾಗ ಪ್ರಶ್ನೆ ಮಾಡಿರುವ ಸಂದರ್ಭಗಳೂ ಇವೆ.“ಯಾಕೆ ಮಾತಾಡೋಕೆ ಬಿಡಲ್ಲ?” ಎಂದು ಪ್ರಶ್ನಿಸುವುದರಿಂದ ಹಿಡಿದು, ತಮ್ಮ ಮಾತನ್ನು ಪೂರ್ಣವಾಗಿ ಹೇಳಲು ಪ್ರಯತ್ನಿಸುವವರೆಗೆ ಕಾವ್ಯಾ ಅವರ ಈ ಶೇಡ್ ಕೂಡ ಎರಡು ವಾರಗಳಲ್ಲಿ ಸ್ಪಷ್ಟವಾಗಿದೆ.

ಫ್ಲರ್ಟಿಂಗ್‌ಗೆ ಕ್ಯೂಟ್ ರಿಯಾಕ್ಷನ್!

ತಡವ್ ಮತ್ತು ಜಗನ್ ಫ್ಲರ್ಟಿಂಗ್ ಮಾಡಿದಾಗ ಕಾವ್ಯಾ ಕೊಟ್ಟ ರಿಯಾಕ್ಷನ್‌ಗಳು ಮತ್ತೊಂದು ಫನ್ ಎಲಿಮೆಂಟ್.“ನಿನ್ನ ಕಣ್ಣು ಚೆನ್ನಾಗಿದೆ…” ಎಂಬ ಕಾಂಪ್ಲಿಮೆಂಟ್‌ಗೆ ಕಾವ್ಯಾ ಕೊಟ್ಟ ಕ್ಯೂಟ್ ಪ್ರತಿಕ್ರಿಯೆಯಿಂದ ಹಿಡಿದು, ತಡವ್ ಕಾವ್ಯಾ ಅವರನ್ನು ಕಿಚಾಯಿಸುವ ಸಂದರ್ಭಗಳವರೆಗೆ ಅವರ ರಿಯಾಕ್ಷನ್‌ಗಳು ಮನೆಯೊಳಗಿನ ಮನರಂಜನೆಯ ಭಾಗವಾಗಿವೆ.

ಇನ್ನು ಸುದೀಪ್ ಮುಂದೆ ಕಾವ್ಯಾ ಅವರನ್ನು “ಬ್ರ್ಯಾಂಡ್ ಅಂಬಾಸಿಡರ್” ಎಂದು ಪದೇಪದೇ ಕಿಚಾಯಿಸಿದಾಗಲೂ ಕಾವ್ಯಾ ನಗುತ್ತಾ, ನಾಚಿಕೊಳ್ಳುತ್ತಾ ಕೊಟ್ಟ ರಿಯಾಕ್ಷನ್‌ಗಳು ಗಮನ ಸೆಳೆದಿವೆ.

ಮನೆಯ ಕೆಲಸದಿಂದ ಎಲಿಮಿನೇಷನ್‌ವರೆಗೆ… ನೇರ ಮಾತು

ಅಡುಗೆ, ಕ್ಲೀನಿಂಗ್ ಮತ್ತು ಮನೆಯ ಕೆಲಸದ ವಿಚಾರದಲ್ಲೂ ಕಾವ್ಯಾ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿದ್ದಾರೆ.ಗಗನ್ ಜೊತೆ ಕ್ಲೀನಿಂಗ್ ವಿಚಾರದಲ್ಲಿ ವಾದವಾದರೂ ನಂತರ ಅದನ್ನು ಕೂಲ್ ಆಗಿ ಹ್ಯಾಂಡಲ್ ಮಾಡಿದರು. ಅಡುಗೆ ಮನೆಯ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳುವುದರ ಜೊತೆಗೆ, ಮನೆಯವರ ಕೆಲಸದ ಬಗ್ಗೆ ಕೂಡ ನೇರವಾಗಿ ಮಾತನಾಡಿದ್ದಾರೆ.ಎಲಿಮಿನೇಷನ್ ಮತ್ತು ನಾಮಿನೇಷನ್ ವಿಚಾರದಲ್ಲೂ ಯಾರದ್ದೇ ಮಾತಾಗಲಿ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಕಾವ್ಯಾ, ಒಪ್ಪದ ವಿಚಾರದಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಪ್ರಶ್ನೆ ಮಾಡಿದ್ದಾರೆ.

ಎರಡು ವಾರಗಳಲ್ಲಿ ಕಾವ್ಯಾ ಅವರ ಹಲವು ಶೇಡ್‌ಗಳು!

ಎರಡು ವಾರಗಳ ಜರ್ನಿಯನ್ನು ನೋಡಿದರೆ ಕಾವ್ಯಾ ಅವರಲ್ಲಿ ಒಂದೇ ರೀತಿಯ ವ್ಯಕ್ತಿತ್ವ ಕಾಣಿಸುವುದಿಲ್ಲ.

ಒಂದು ಕಡೆ ಕ್ಯೂಟ್ ಸ್ಮೈಲ್… ಇನ್ನೊಂದು ಕಡೆ ಖಡಕ್ ಮಾತು.

ಒಂದು ಕಡೆ ಡ್ಯಾನ್ಸ್ ಮತ್ತು ಫನ್… ಇನ್ನೊಂದು ಕಡೆ ಟಾಸ್ಕ್‌ನಲ್ಲಿ ಫೈಟ್.

ಒಂದು ಕಡೆ ಮನೆಯವರ ಜೊತೆ ನಗು… ಇನ್ನೊಂದು ಕಡೆ ಇಷ್ಟವಾಗದ ಮಾತಿಗೆ ನೇರ ಉತ್ತರ.

ಒಂದು ಕಡೆ ಸಣ್ಣ ವಿಚಾರಕ್ಕೂ ಕ್ಯೂಟ್ ರಿಯಾಕ್ಷನ್… ಇನ್ನೊಂದು ಕಡೆ ತಮ್ಮ ನಿಲುವಿನ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ.

ಮೊದಲ ಎರಡು ವಾರಗಳಲ್ಲಿ ಕಾವ್ಯಾ ಅವರ ಈ ವಿಭಿನ್ನ ಶೇಡ್‌ಗಳು ಒಂದರ ಹಿಂದೆ ಒಂದರಂತೆ ಹೊರಬಂದಿವೆ. ಎಂಟರ್‌ಟೈನರ್ ಆಗಿ ಫನ್ ಮೂಮೆಂಟ್‌ಗಳನ್ನು ನೀಡುವುದರ ಜೊತೆಗೆ, ಟಾಸ್ಕ್‌ನಲ್ಲಿ ಸ್ಪೋರ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುವ ಕಾವ್ಯಾ ಅವರ ಮತ್ತೊಂದು ಮುಖವೂ ಪದೇಪದೇ ಕಾಣಿಸಿಕೊಂಡಿದೆ.

ಕ್ಯೂಟ್ ಸ್ಮೈಲ್‌ನಿಂದ ಖಡಕ್ ಮಾತಿನವರೆಗೆ—ಎರಡು ವಾರಗಳಲ್ಲಿ ಕಾವ್ಯಾ ತೋರಿಸಿದ ಈ ವಿಭಿನ್ನ ಶೇಡ್‌ಗಳೇ ಅವರ ಜರ್ನಿಯ ಹೈಲೈಟ್‌ಗಳಾಗಿವೆ.

Written By
Kannada Picchar

Leave a Reply

Your email address will not be published. Required fields are marked *