‘ಟಾಕ್ಸಿಕ್’ ಇಂಗ್ಲಿಷ್ ಟ್ರೈಲರ್ ಇಂದು ಬಿಡುಗಡೆ…!
‘ಟಾಕ್ಸಿಕ್’ ಆಗಸ್ಟ್ 26 ರಂದು ಚರಿತ್ರೆ ಬರೆಯಲು ಸಜ್ಜಾಗಿದೆ. ಒಂದು ಕಡೆ ಗೀತು ಮೋಹನ್ ದಾಸ್ ನಿರ್ದೇಶನ, ಮತ್ತೊಂದು ಕಡೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಮಹಾನ್ ಕಲಾವಿದರ ನಟನೆಗೆ ಬಹಳಷ್ಟು ಜನ ಈ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಒಂದು ರೀತಿ ಇಡೀ ವಿಶ್ವವೇ ಟಾಕ್ಸಿಕ್ ಸಿನಿಮಾಗಾಗಿ ಎದುರು ನೋಡುತ್ತಿದೆ.
ಈಗಾಗಲೇ ಸಿನಿಮಾದ ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಕಂಡು ಧೂಳೆಬ್ಬಿಸ್ಸಿತ್ತು. ಸಿನಿಮಾದ ಟ್ರೈಲರ್ ಕಂಡ ಯಶ್ ಅಭಿಮಾನಿಗಳು ಇಂಗ್ಲಿಷ್ ಟ್ರೈಲರ್ ಯಾವಾಗ ಬಿಡುಗಡೆ ಕಾಣುತ್ತದೆ ಎಂದು ಕಾಯುತ್ತಿದ್ದರು. ಆದ್ರೆ ಇದೀಗ ಸಿನಿಮಾ ತಂಡ ಈ ಪ್ರಶ್ನೆಗೆ ಉತ್ತರ ನೀಡಿದೆ.
ಯಸ್. ಯಶ್ ಸಿನಿಮಾವೆಂದರೆ ಪ್ರತಿ ಬಾರಿ ನಿರೀಕ್ಷೆ ಹೆಚ್ಚಿರುತ್ತದೆ.ಇದು ಕೆಜಿಎಫ್ ನಿಂದ ಮಾತ್ರವಲ್ಲ ಇದರ ಮುಂಚಿತವಾಗಿಯು ಅವರ ಸಿನಿಮಾಗಳ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮಟ್ಟ ಹೆಚ್ಚಿರುತ್ತಿತ್ತು. ಆ ನಿರೀಕ್ಷೆಗೆ ತಕ್ಕನಾದ ಸಿನಿಮಾಗಳನ್ನು ಯಶ್ ನೀಡುತ್ತಿದ್ದರು. ಹಾಗಾಗಿ ಪ್ರೇಕ್ಷಕರಿಗೆ ಇಂಗ್ಲಿಷ್ ಟ್ರೈಲರ್ ಹೇಗೆ ಮೂಡಿ ಬಂದಿರಬಹುದು ಎನ್ನುವ ಕುತೂಹಲವಿತ್ತು. ಇದೀಗ ಸಿನಿಮಾ ತಂಡ ಇಂದು ಟಾಕ್ಸಿಕ್ ಚಿತ್ರದ ಇಂಗ್ಲಿಷ್ ವರ್ಷನ್ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ. ಇಂದು ರಾತ್ರಿ 8.30ಕ್ಕೆ ಇಂಗ್ಲಿಷ್ ಟ್ರೈಲರ್ ರಿಲೀಸ್ ಆಗಲಿದ್ದು, ಯಾವ ರೀತಿ ಬಂದಿರಬಹುದು ಎನ್ನುವ ಕುತೂಹಲಕ್ಕೆ ನಾಂದಿ ಹಾಡಲಿದೆ.