ಬಾಕ್ಸ್ ಆಫೀಸ್ ನಲ್ಲಿ ‘KD’ ಘರ್ಜನೆ
ಶೋ ಮ್ಯಾನ್ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ KD :ದಿ ಡೆವಿಲ್ ನಿನ್ನೆ ರಾಜ್ಯದಾದ್ಯಂತ ಬಿಡುಗಡೆ ಕಂಡಿತು. ಧ್ರುವ ಸರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ರಮೇಶ್ ಅರವಿಂದ್, ರವಿಚಂದ್ರನ್, ಕಿಚ್ಚ ಸುದೀಪ್, ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ಎಲ್ಲಾ ಘಟಾನುಗಟಿ ನಟರಿದ್ದು,ಎಲ್ಲರ ಅಭಿನಯವನ್ನು ಜನ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ.
ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ KD ಅಬ್ಬರ
ಬಿಡುಗಡೆಯಾದ ಒಂದು ದಿನದಲ್ಲೇ ಬರೋಬ್ಬರಿ 27.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ KD ಎರಡನೇ ದಿನವೂ ಯಶಸ್ವಿಯಾಗಿ ಓಡುತ್ತಿದ್ದೆ.