new updates News ಅಸಲಿ ಪಿಚ್ಚರ್ । Movie Review ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಟಾಕ್ಸಿಕ್’ ನಾಡಿಯಾ ಪಾತ್ರಕ್ಕೆ ಕಿಯಾರಾ ಆಯ್ಕೆಯಾಗಿದ್ದು ಇದೇ ಕಾರಣಕ್ಕೆ!

‘ಟಾಕ್ಸಿಕ್’ ನಾಡಿಯಾ ಪಾತ್ರಕ್ಕೆ ಕಿಯಾರಾ ಆಯ್ಕೆಯಾಗಿದ್ದು ಇದೇ ಕಾರಣಕ್ಕೆ!
  • PublishedMarch 31, 2026

‘ಟಾಕ್ಸಿಕ್’ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾದ ಪಾತ್ರಗಳು ಫಸ್ಟ್ ಲುಕ್ ಇಂದಾನೆ ಸದ್ದು ಮಾಡಿತ್ತು.ಆ ಪಾತ್ರಗಳಲ್ಲಿ ನಾಡಿಯಾ ರೋಲ್ ಕೂಡ ಅಷ್ಟೇ ಸದ್ದು ಮಾಡಿತ್ತು. ಬಾಲಿವುಡ್ ಬೆಡಗಿ ಕಿಯಾರ ಅಡ್ವಾಣಿ ನಿರ್ವಹಿಸಿರುವ ಈ ಪಾತ್ರಕ್ಕೆ ಕಿಯಾರ ಅವ್ರು ಹೇಗೆ ಆಯ್ಕೆ ಆದರು ಎನ್ನುವ ಕುತೂಹಲ ಸಿನಿ ಪ್ರಿಯರಿಗಿತ್ತು. ಈ ಪ್ರಶ್ನೆಗಳಿಗೆ ಉತ್ತರಿಸಿರುವ ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಕಿಯಾರ ಅವರನ್ನು ಹಾಡಿ ಹೊಗಳಿದ್ದಾರೆ.

ಯಸ್, ವರ್ಲ್ಡ್ ಕ್ಲಾಸ್ ಸಿನಿಮಾ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್ ಕಿಯಾರ ನಾಡಿಯ ಪಾತ್ರಕ್ಕೆ ಆಯ್ಕೆ ಮಾಡಿದ್ದು ಮೂರು ಕಾರಣಕ್ಕೆ ಎಂದು ಹೇಳಿದ್ದಾರೆ. ಆ ಮೂರು ಕಾರಣವೆಂದರೆ ನಾಡಿಯ ರೋಲ್ ಗೆ ಬೇಕಾಗಿರುವ ಮೃದುತ್ವ & ಆವೇಶ ಎರಡು ಕಿಯಾರ ನಟನೆಯಲ್ಲಿದೆ. ಆಕೆಯ ರಿಯಾಲಿಸ್ಟಿಕ್ ನಟನೆ ಅದ್ಭುತ. ಜತೆಗೆ ಆಕೆಯ ಶಿಸ್ತು, ಪ್ರಾಮಾಣಿಕತೆ ನನಗೆ ಇಷ್ಟವಾಯಿತು ಹಾಗಾಗಿ ನಾಡಿಯ ಪಾತ್ರಕ್ಕೆ ಆಕೆನೆ ಸೂಕ್ತ ಅನಿಸಿತು ಎಂದು ನಿರ್ದೇಶಕಿ ಗೀತು ಮೋಹನ್ ದಾಸ್ ಹಂಚಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *