new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ ಜೋಗಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್!

ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ ಜೋಗಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್!
  • PublishedMarch 27, 2026

ಕನ್ನಡ ಸಿನಿ ರಂಗದ ಸ್ಟಾರ್ ಡೈರೆಕ್ಟರ್ ಆಗಿರುವ ಜೋಗಿ ಪ್ರೇಮ್ ಹಾಗೂ ಕ್ರೇಜಿ ಕ್ವೀನ್ ಎಂದೇ ಪ್ರಖ್ಯಾತಿ ಹೊಂದಿರುವ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಅವರು ತಮ್ಮ ಸಿನಿ ಪಯಣದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದ್ದಾರೆ. ಯಸ್, ತಮ್ಮ ಹೊಸ ನಿರ್ಮಾಣ ಸಂಸ್ಥೆ ‘ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್’ ಅನ್ನು ಘೋಷಿಸಿದ್ದಾರೆ.ಶ್ರೀ ರಾಮನವಮಿಯ ದಿನದಂದು ವಿಡಿಯೋ ಬಿಡುವ ಮೂಲಕ ಈ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಹೊಸ ಪ್ರತಿಭೆಗಳಿಗೆ ವೇದಿಕೆ

ಈ ಬ್ಯಾನರ್ ಅನ್ನು ದೊಡ್ಡ ಸಿನಿಮಾಗಳ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಶುರುಮಾಡಲಾಗಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹೊಸ ಬ್ಯಾನರ್, ಮೊದಲ ಚಿತ್ರ

ಸದ್ಯಕ್ಕೆ ಈ ಬ್ಯಾನರ್ ನ ಮೊದಲ ಚಿತ್ರವನ್ನು ಪ್ರೇಮ್ ತಮ್ಮ ಶಿಷ್ಯರಾಗಿರುವ ಮಂಜುನಾಥ್ ಬಿ.ಎಸ್ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಹೊಸ ಸಿನಿಮಾಗೆ ‘ಏಕ ಲವ್ ಯಾ’ ಸಿನಿಮಾದಿಂದ ಕರುನಾಡಿಗೆ ಪರಿಚಿತವಾದ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರು ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ.ಇನ್ನು ಈ ಸಿನಿಮಾವನ್ನು ಇತ್ತೀಚೆಗೆ ಸದ್ದು ಮಾಡಿದ ‘ರಕ್ಕಸಪುರದೋಳ್’ ಸಿನಿಮಾವನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ಖ್ಯಾತ ಛಾಯಾಗ್ರಾಹಕ ವಿಲಿಯಂ ಡೇವಿಡ್ ಛಾಯಾಗ್ರಹಣೆಯನ್ನು ಮಾಡುತ್ತಿದ್ದು,ಹೊಸ ಪ್ರತಿಭೆ ರೋಮಿಯೋ ಚಿತ್ರದ ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದಾರೆ.ಇನ್ನು ಚಿತ್ರದ ಟೈಟಲ್ ಜೊತೆಗೆ ಉಳಿದ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲಿ ಹಂಚಿಕೊಳ್ಳಲಿದೆ.

Written By
Kannada Picchar

Leave a Reply

Your email address will not be published. Required fields are marked *