ರಾಜಮೌಳಿ ವಾರಣಾಸಿಯಲ್ಲೂ ಕಿಚ್ಚ ಸುದೀಪ್ ಇದು ನಿಜನಾ..?
ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಎಸ್.ಎಸ್. ರಾಜಮೌಳಿ ನಿರ್ದೇಶನದ ವಾರಣಾಸಿ ಚಿತ್ರಕ್ಕೆ ಕಿಚ್ಚ ಸೇರಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಗ್ತಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಏಪ್ರಿಲ್ನಲ್ಲಿ ಸುದೀಪ್ 15 ದಿನಗಳ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಹೌದು.. ಸುದೀಪ್ ವಾರಣಾಸಿ ಸಿನಿಮಾದಲ್ಲಿ ನಟಿಸುತ್ತಾರೆ ಅಂತ ಈ ಹಿಂದೆ ಪುಕಾರೆದ್ದಿತ್ತು.. ಈ ವರದಿ ಬಗ್ಗೆ ರಾಜಮೌಳಿ ಆಗಲಿ, ಸುದೀಪ್ ಆಗಲಿ ಅಧಿಕೃತವಾಗಿ ಹೇಳಿಲ್ಲ. ಈಗ ಕೇಳಿ ಬರಿತ್ತಿರುವ ಹೊಸ ಮಾಹಿತಿ ಅಂದರೆ ಸುದೀಪ್ ಏಪ್ರಿಲ್ನಲ್ಲಿ 15 ದಿನಗಳ ಶೂಟ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ಹೇಳಲಾಗ್ತಿದೆ.. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಅವರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿದೆ.
ಇನ್ನು, ಸದ್ಯಕ್ಕಂತೂ ಈ ಬಗ್ಗೆ ಅವರು ಮಾಹಿತಿ ನೀಡುವುದು ಅನುಮಾನವೇ ಎನ್ಮಲಾಗಿದೆ ಮಾರ್ಕ್ ನಂತರ ಕಿಚ್ಚ ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ..