ಅದು ಫೇಮ್ ಅಲ್ಲ, ಶೇಮ್; ಕೃಷ್ಣ ಮಿಲನಾ ವಿರುದ್ಧ ಗೀತಾ ಭಾರತಿ ಕಿಡಿ
ಸಿನಿಮಾಕ್ಕೆ ಜೀವ ತುಂಬೋದೆ ಡೈಲಾಗ್ ಗಳು ಆದ್ರೆ ಇತ್ತಿಚೀಗೆ ಬರ್ತಿರೋ ಸಿನಿಮಾಗಳ ಪೈಕಿ ಒಬ್ಬರನ್ನ ವ್ಯಂಗ್ಯ ಮಾಡೋದು ಆಡಿ ಕೊಳ್ಳುವುದು ಅಷ್ಟೆ ಯಾಕೆ ಅವರ ದೇಹ ರಚನೆ ಕುರಿತು ಮಾತಾಡೋದೆ ಟ್ರೆಂಡ್ ಆಗಿ ಬಿಟ್ಟಿದೆ.. ಆ ಒಂದು ಡೈಲಾಗ್ ಫೇಮಸ್ ಆಯ್ತು ಅಂದರೆ, ಅದು ಕೇವಲ ಕಾಮಿಡಿ ಆಗಿದ್ರಿಂದ ಮಾತ್ರ ಅಲ್ಲ. ಜನರು ಅದನ್ನು ಇನ್ನೊಬ್ಬರನ್ನ ಹಾಸ್ಯ ಮಾಡಲು ಬಳಸಿದ ಕಾರಣವೂ ಇದೆ.. ಅದು ಫೇಮ್ ಅಲ್ಲ, ಅದು ಶೇಮ್ ಎಂದು ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಾತಿಗೆ ಕಿಡಿಕಾರಿದ್ದಾರೆ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಕಿಡಿಕಾರಿದ್ದಾರೆ..
ನಟಿ ಗೀತಾ ಭಾರತಿ ಭಟ್ ಲವ್ ಮಾಕ್ಟೇಲ್ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಸಿನಿಮಾದಲ್ಲಿನ ಹೂ ತರಹ ಇದ್ಲು, ಹೂಕೋಸು ತರಹ ಆಗೋದ್ಲು ಡೈಲಾಗ್ ಜನಪ್ರಿಯವಾಯ್ತು. ಆದರೆ, ಈ ಡೈಲಾಗ್ ಮತ್ತು ಸೀನ್‌ಗಳಿಂದ ತಮಗೆ ಬಾಡಿ ಶೇಮಿಂಗ್ ಅನುಭವ ಆಯ್ತು ಎಂದು ಗೀತಾ ಹೇಳಿಕೊಂಡಿದ್ದರು. ಈ ಬಗ್ಗೆ ಸಿನಿಮಾದ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ರಿಯಾಕ್ಟ್ ಮಾಡಿದ್ದರು. ಇದೀಗ ಮತ್ತೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ವಿರುದ್ದ ಗೀತಾ ಸಿಡಿಮಿಡಿಗೊಂಡಿದ್ದಾರೆ.
ನಾನು ಮೊದಲು ಬಾಡಿ ಶೇಮಿಂಗ್ ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದು ಹೇಳುತ್ತಿರುವವರಿಗೆ ಒಂದು ಸ್ಪಷ್ಟನೆ. ಆ ಸೀರಿಯಲ್ಲಿನ ಕಥೆ ಒಬ್ಬ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ನಿಜವಾದ ಸಮಸ್ಯೆಗಳ ಬಗ್ಗೆ ಇತ್ತು. ಉದ್ದೇಶ ಅವಳನ್ನ ಹಾಸ್ಯ ಮಾಡುವುದು ಅಲ್ಲ. ಸಮಾಜ ಅವಳನ್ನ ಹಾಸ್ಯದ ವಿಷಯವಾಗಿಸಿದರೂ ಕೂಡ ಅವಳ ಬಲ, ದಯೆ ಮತ್ತು ಮಾನವೀಯತೆಯನ್ನ ತೋರಿಸುವುದು. ಆ ನೋವನ್ನ ತೋರಿಸುವುದು ಬಾಡಿ ಶೇಮಿಂಗ್ ಅನ್ನೋ ಹಾಸ್ಯದ ಹೆಸರಿನಲ್ಲಿ ಬೆಂಬಲಿಸುವುದು ಒಂದೇ ಅಲ್ಲ. ಆ ಒಂದು ಡೈಲಾಗ್ ಫೇಮಸ್ ಆಯ್ತು ಅಂದ್ರೆ, ಅದು ಕೇವಲ ಕಾಮಿಡಿ ಆಗಿದ್ದರಿಂದ ಮಾತ್ರ ಅಲ್ಲ. ಜನರು ಅದನ್ನ ಇನ್ನೊಬ್ಬರನ್ನ ಹಾಸ್ಯ ಮಾಡಲು ಬಳಸಿದ ಕಾರಣವೂ ಹೌದು. ಅದು ಫೇಮ್ ಅಲ್ಲ, ಅದು ಶೇಮ್ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಗೀತಾ ಭಾರತಿ ಭಟ್ ಪೋಸ್ಟ್ ಮಾಡಿಕೊಂಡಿದ್ದಾರೆ
ಇನ್ನೂ.. ಈ ಪಾತ್ರವನ್ನ ತೆಗೆದುಕೊಂಡಿದ್ದು ನನ್ನ ತಪ್ಪು. ಮುಂದೆ ಹಾಸ್ಯ ಅಥವಾ ಪದಗಳ ಹೆಸರಿನಲ್ಲಿ ಬಾಡಿ ಶೇಮಿಂಗ್ ಮಾಡುವಂತಹ ಪಾತ್ರಗಳನ್ನ ನಾನು ಮತ್ತೆ ಮಾಡುವುದಿಲ್ಲ. ಇದು ಕೇವಲ ಒಂದು ಕ್ಯಾರೆಕ್ಟರ್ ಎಂದು ಹೇಳುವಂಥರಿಗೆ ಒಂದು ಪ್ರಶ್ನೆ, ಇಂತಹ ಕ್ಯಾರೆಕ್ಟರ್ಸ್ ಮೂಲಕ ನಾವು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೇವೆ? ಸೃಜನಶೀಲತೆ ಮತ್ತು ಹಾಸ್ಯದ ಹೆಸರಿನಲ್ಲಿ ಇನ್ನೊಬ್ಬರನ್ನ ಹಾಸ್ಯ ಮಾಡುವುದಾ? ಎಂದು ಗೀತಾ ಭಾರತಿ ಭಟ್ ಪ್ರಶ್ನೆ ಮಾಡಿದ್ದಾರೆ
ಅದೇನೆ ಇರಲಿ.. ಅವರವರ ದೇಹ ಅವರವರ ಇಷ್ಟ ನಿಮ್ಗೆ ಪಾತ್ರ ಸೆಲೆಕ್ಟ್ ಆಗೋದಕ್ಕಿಂತ ಮುಂಚೆ ಹೇಳಿರ್ಲಿಲ್ವಾ..? ಇಂತಹ ಪಾತ್ರ ಯಾಕೆ ಆರಿಸಿಕೊಳ್ಬೇಕಿತ್ತು ಅಂತೆಲ್ಲ ಕಮೆಂಟ್ ಮಾಡಿದ್ರೆ ಗೀತಾ ಪರವೂ ಒಂದಷ್ಟು ಜನ ಬ್ಯಾಟ್ ಬೀಸಿದ್ದಾರೆ..