ಒಂದೇ ದಿನ ಆಕಾಶ್, ಡೆವಿಲ್ ರೀ-ರಿಲೀಸ್.. ಕಾಂಪಿಟೇಶನ್ ಜೋರು..?
ಪವರ್ ಸ್ಟಾರ್ ಪುನೀತ್ ಅಭಿನಯದ ಆಕಾಶ್ ಚಿತ್ರ ರೀ ರಿಲೀಸ್ ಆಗುತ್ತಿದೆ. ಅಂದಿಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆ ಕಂಡಿತ್ತು ಭರ್ಜರಿಯಾಗಿ ಚಿತ್ರಮಂದಿರಗಳಲ್ಲಿ ಓಡಿತ್ತು.. ಮಾರ್ಚ್-13 ರಂದು ಈ ವಾರ ಬರ್ತಿರೋ ಆಕಾಶ್ ಜೊತೆಗೆ ಡೆವಿಲ್ ಚಿತ್ರವೂ ರೀ-ರಿಲೀಸ್ ಆಗುತ್ತಿದೆ ಎನ್ನಲಾಗಿದೆ..
ಪುನೀತ್ ರಾಜ್‌ಕುಮಾರ್ ಅಭಿನಯದ ಆಕಾಶ್ ಚಿತ್ರ ಹೆಚ್ಚಿನ ಥಿಯೇಟರ್ ಅಲ್ಲಿಯೇ ತೆರೆ ಕಾಣುತ್ತಿದೆ. ಹೆಚ್ಚು ಕಡಿಮೆ 80 ರಿಂದ 100 ಥಿಯೇಟರ್ ಅನ್ನುವ ಮಾತು ಕೂಡ ಇದೆ.. ಕಳೆದ ಒಂದು ತಿಂಗಳಿನಿಂದಲೇ ಈ ಚಿತ್ರದ ಪ್ರಚಾರ ಶುರು ಆಗಿದೆ. ಸಿನಿಮಾದ ಪ್ರಮುಖ ದೃಶ್ಯಗಳನ್ನ ಟೀಸರ್ ರೀತಿಯೇ ಬಿಟ್ಟಿದ್ದಾರೆ ಸಿನಿಮಾದಲ್ಲಿ ನಟಿಸಿದ ಕಿಶೋರ್, ಆಶಿತಾ, ಚಿತ್ರದ ನಿರ್ದೇಶಕ ಮಹೇಶ್ ಬಾಬು, ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯಕ್, ಗಾಯಕ ಕುನಾಲ್ ಗಾಂಜಾವಾಲಾ ಹೀಗೆ ಇನ್ನು ಅನೇಕರು ಈ ಸಿನಿಮಾದ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆ ವಿಡಿಯೋಗಳು ಚಿತ್ರವನ್ನ ಪ್ರಮೋಟ್ ಮಾಡಿವೆ.
ಜೊತೆಗೆ ಆಕಾಶ್ ಎದುರು ಇನ್ನೂ ಒಂದು ಚಿತ್ರ ರಿಲೀಸ್ ಆಗುತ್ತಿದೆ. ಅದು ರೀ-ರಿಲೀಸ್ ಆಗುತ್ತಿದೆ. ಈ ಒಂದು ಸುದ್ದಿ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಅಂದ್ಹಾಗೆ ಆ ಚಿತ್ರ ಈಗಾಗಲೇ ಹೇಳಿದಂತೆ ಡೆವಿಲ್ ಚಿತ್ರವೇ ಆಗಿದೆ. ದರ್ಶನ್ ಅಭಿನಯದ ಡೆವಿಲ್ ಚಿತ್ರ ಡಿಸೆಂಬರ್-11, 2025 ರಂದು ರಿಲೀಸ್ ಆಗಿದೆ. ಈ ಚಿತ್ರದ ದೊಡ್ಡಮಟ್ಟದಲ್ಲಿ ರಿಲೀಸ್ ಆಗಿತ್ತು.
ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಅಲ್ಲಿ ತೆರೆಗೆ ಬರ್ತಿದೆ. ಆದರೆ, ಈ ಸಿನಿಮಾ ಅದೆಷ್ಟು ಥಿಯೇಟರ್ ಅಲ್ಲಿ ಬರ್ತಿದೆ ಅನ್ನೋ ಮಾಹಿತಿಯನ್ನ ಡೈರೆಕ್ಟರ್ ಮಿಲನಾ ಪ್ರಕಾಶ್ ಎಲ್ಲೂ ಹೇಳಿಕೊಂಡಿಲ್ಲ. ಪ್ರೊಡಕ್ಷನ್‌ನ ಅಧಿಕೃತ ಪೇಜ್ ಅಲ್ಲೂ ಎಲ್ಲೂ ಏನೂ ಇಲ್ಲ
ಒಟ್ನಲ್ಲಿ.. ಇಬ್ಬರೂ ಸೂಪರ್ ಹಿಟ್ ಹೀರೊಗಳ ಸಿನಿಮಾ ಬರುತ್ತಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡ್ಬೇಕು..