ಪಿಚ್ಚರ್ stories ಪಿಚ್ಚರ್ UPDATE

OTTಗೆ ಲಗ್ಗೆ ಇಡಲಿದೆ ಲ್ಯಾಂಡ್​​ಲಾರ್ಡ್ ಚಿತ್ರ; ಯಾವಾಗ?

OTTಗೆ ಲಗ್ಗೆ ಇಡಲಿದೆ ಲ್ಯಾಂಡ್​​ಲಾರ್ಡ್ ಚಿತ್ರ; ಯಾವಾಗ?
  • PublishedMarch 9, 2026

For web

ದುನಿಯಾ ವಿಜಯ್ ರಚಿತಾ ರಾಮ್ ರಾಜ್ ಬಿ ಶೆಟ್ಟಿ ಅವರ ಲ್ಯಾಂಡ್​​ಲಾರ್ಡ್ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಜಡೇಶ್ ಕೆ ಹಂಪಿ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಗಳಿಸಿತ್ತು. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿದ್ದವು. ಕ್ರಾಂತಿಕಾರಿ ಕತೆಯನ್ನು ಹೊಂದಿದ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆದ ಈ ಸಿನಿಮಾ ಒಟಿಟಿಯಲ್ಲಿಯೂ ಸಹ ಪ್ರೇಕ್ಷಕರನ್ನು ಸೆಳೆಯುವುದೇ ಎಂಬುದು ಕುತೂಹಲ ಮೂಡಿಸಿದೆ.
ಹೌದು.. ಜನವರಿ 23ರಂದು ಚಿತ್ರಮಂದಿರಗಳಲ್ಲಿ ಲ್ಯಾಂಡ್​ಲಾರ್ಡ್ ಸಿನಿಮಾ ಬಿಡುಗಡೆ ಆಗಿತ್ತು. ಜಾತಿ ಪದ್ಧತಿ, ಜೀತ ಪದ್ಧತಿಗಳ ವಿರುದ್ಧ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾನಲ್ಲಿ ದುನಿಯಾ ವಿಜಯ್ ಭಿನ್ನ ರೀತಿಯ ಪಾತ್ರದಲ್ಲಿ ನಟಿಸಿದ್ದರು. ವಯಸ್ಸಾದ ಆದರೆ ಖಡಕ್ ಆದ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದರು. ನಾಯಕಿ ಪಾತ್ರದಲ್ಲಿ ನಟಿಸಿದ್ದ ರಚಿತಾ ರಾಮ್ ಸಹ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದು ವಿಶೇಷವಾಗಿತ್ತು. ದುನಿಯಾ ವಿಜಯ್ ಪುತ್ರಿ ರಿತನ್ಯ ಸಹ ಈ ಸಿನಿಮಾನಲ್ಲಿ ಮಹತ್ವದ ಪಾತ್ರದಲ್ಲಿ ನಟಿಸಿದ್ದರು. ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ನಟಿಸಿದ್ದರು.
ಅಂದಹಾಗೆ.. ಲ್ಯಾಂಡ್​​ಲಾರ್ಡ್ ಸಿನಿಮಾವು ಜೀ5 ಒಟಿಟಿಯಲ್ಲಿ ಮಾರ್ಚ್ 13 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಯುಗಾದಿ ಹಬ್ಬದ ವೇಳೆಗೆ ಅಂದರೆ ಮಾರ್ಚ್ 18ರ ವೇಳೆಗೆ ಈ ಸಿನಿಮಾ ಒಟಿಟಿಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಾಗ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ದೊರೆತಿತ್ತು, ಖುದ್ದು ಸಿಎಂ ಸಿದ್ದರಾಮಯ್ಯ ಅವರು ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ, ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಹಂಚಿಕೊಂಡಿದ್ದರು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ ಇತ್ತ ಸಲಗನ ಫ್ಯಾನ್ಸ್ ಮತ್ತೊಮ್ಮೆ ಲ್ಯಾಂಡ್ ಲಾರ್ಡ್ ಒಟಿಟಿಲಿ ನೋಡಲು ಉತ್ಸುಕರಾಗಿದ್ದಾರೆ..

Written By
Kannada Picchar

Leave a Reply

Your email address will not be published. Required fields are marked *