ಪಿಚ್ಚರ್ stories ಪಿಚ್ಚರ್ UPDATE

ಅತಿದೊಡ್ಡ ಲೈಫ್‌ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್ಪೋ ಇದೀಗ ನಿಮ್ಮ ಮುಂದೆ

ಅತಿದೊಡ್ಡ ಲೈಫ್‌ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್ಪೋ ಇದೀಗ ನಿಮ್ಮ ಮುಂದೆ
  • PublishedMarch 4, 2026

ಪ್ರತೀ ವರ್ಷ ಸಾವಿರಾರು, ಲಕ್ಷಾಂತರ ಬೆಂಗಳೂರಿಗರನ್ನು ಸೆಳೆಯುತ್ತಾ ಬಂದಿರುವ ಮಹಾಮೇಳ ಈ ವರ್ಷ ಮತ್ತೆ ಸಿಲಿಕಾನ್ ಸಿಟ್ಟಿಗೆ ಮರಳಿದೆ. ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್​ಪೋ 2026 ಮೇಳ ನಡೆಯಲಿದೆ. ಅರಮನೆ ಮೈದಾನದಲ್ಲಿ ಮಾರ್ಚ್ 6ರಿಂದ ಮೂರು ದಿನಗಳ ಕಾಲ ನಡೆಯುವ ಈ ಮೆಗಾ ಎಕ್ಸ್​ಪೋದಲ್ಲಿ ಹೊಚ್ಚ ಹೊಸ ಫ್ಯಾಷನ್, ವಾಹನಗಳು, ಗೃಹೋಪಕರಣಗಳನ್ನು ಕಾಣಬಹುದು.
ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಿಂದಿನ ಆವೃತ್ತಿಯ ಮೇಳಗಳಿಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಪ್ರತೀ ಎಕ್ಸ್​ಪೋದಲ್ಲೂ ಸಾವಿರಾರು ಜನರು ಆಗಮಿಸಿ, ಲಾಭ ಪಡೆದಿದ್ದಾರೆ. ಕುಟುಂಬದವರು, ವೃತ್ತಿಪರರು ಮತ್ತು ಹೊಸ ಫ್ಯಾಷನ್ ಮತ್ತು ಗ್ಯಾಜೆಟ್​ಗಳ ಪ್ರೇಮಿಗಳು ಎಲ್ಲರಿಗೂ ಹೇಳಿ ಮಾಡಿಸಿದಂತಹ ಪ್ಲಾಟ್​ಫಾರ್ಮ್ ಇದು. ಈ ಎಕ್ಸ್​ಪೋದಲ್ಲಿ ಆಕರ್ಷಣೀಯ ಎನಿಸುವ ಡಿಸ್ಕೌಂಟ್​ಗಳು, ಡೀಲ್​ಗಳು ನಿಮಗಾಗಿ ಲಭ್ಯ ಇರುತ್ತವೆ

Written By
Kannada Picchar

Leave a Reply

Your email address will not be published. Required fields are marked *