ಬಲರಾಮನ ದಿನಗಳು ಸಿನ್ಮಾ ಹಾಡುಗಳ ಕಮಾಲ್!
ವಿನೋದ್ ಪ್ರಭಾಕರ್ ಮತ್ತು ಪ್ರಿಯ ಆನಂದ್ ನಾಯಕ ನಾಯಕಿಯಾಗಿ ನಟಿಸುತ್ತಿರುವ ‘ಬಲರಾಮನ ದಿನಗಳು’ ಸಿನಿಮಾದ ಹಾಡುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾವನ್ನು ಕೆ. ಎಂ ಚೈತನ್ಯ ಅವರು ನಿರ್ದೇಶನ ಮಾಡಿದ್ದು ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.ಆದರೆ ಸಿನಿಮಾ ಬಿಡುಗಡೆಗೂ ಮೊದಲೇ ಚಿತ್ರದ ಹಾಡುಗಳಿಂದ ಸಾಮಾಜಿಕ ಜಾಲತಾಣವನ್ನು ಟೇಕ್ ಓವರ್ ಮಾಡಿರುವ ಬಲರಾಮನ ದಿನಗಳು ಇದುವರೆಗೆ ಚಿತ್ರದ ಎರಡು ಹಾಡುಗಳನ್ನ ರಿಲೀಸ್ ಮಾಡಿದೆ.
ಮೊದಲನೇ ಹಾಡಾಗಿರುವ ಶುರು ಶುರು ಬ್ಯೂಟಿಫುಲ್ ಲವ್ ಸಾಂಗ್ ಆಗಿದ್ದು, ರಿಲೀಸ್ ಆದ ದಿನದಿಂದ ಕರ್ನಾಟಕದ ಜನರ ಮನಸ್ಸು ಗೆದ್ದಿದೆ.ಈಗ ಇತ್ತೀಚಿಗಷ್ಟೇ ಬಿಡುಗಡೆಯಾದ ಮತ್ತೊಂದು ಪವರ್ ಪ್ಯಾಕ್ಡ್ ಸಾಂಗ್ ‘ ಟಾ ಟಾ ಟಾ’ ಅಂತೂ ಎಲ್ಲರ ಮೊಬೈಲ್ ನಲ್ಲಿ ಸದ್ದು ಮಾಡುತ್ತಿದೆ. ಈ ಹಾಡು ಮಿಲಿಯನ್ ಗಟ್ಟಲೆ ವ್ಯೂಸ್ ಪಡೆದಿದ್ದು ‘ ಮಾಸ್ ಸಾಂಗ್ ಆಫ್ ದಿ ಇಯರ್’ ಎನ್ನುವ ಮಾತು ಸಿನಿಮಾ ಪ್ರಿಯರಿಂದ ಕೇಳಿ ಬರುತ್ತಿದೆ.
ಈ ಹಾಡನ್ನು ಸಂತೋಷ್ ನಾರಾಯಣ್ ಅವ್ರು ಸಂಗೀತ ನಿರ್ದೇಶನ ಮಾಡಿ ಹಾಡಿದ್ದು ಇನ್ನೊಂದು ರೀತಿಯ ವಿಶೇಷ. ಗ್ಲೋಬಲ್ ಲೆವೆಲ್ ನಲ್ಲಿ ಮನ್ನಣೆ ಪಡೆದಿರುವ ಭಾರತದ ಟಾಪ್ ನಿರ್ಮಾಪಕ, ಸಂಗೀತ ನಿರ್ದೇಶಕ ಹಾಗೂ ಗಾಯಕ. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ‘ಅಟ್ಟಕತ್ತಿ ‘,’ಕಬಾಲಿ ‘,’ದಸರಾ’ ಹೀಗೆ ಅನೇಕ ತಮಿಳು ಸಿನ್ಮಾ ಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂತಹ ಅದ್ಬುತ ವ್ಯಕ್ತಿ ಹಾಡಿರುವ ಸಾಂಗ್ ಎಂದು ತಿಳಿದ ಕನ್ನಡಿಗರು ಸಾಂಗ್ ಗೇ ಫುಲ್ ಫಿದಾ ಆಗಿದ್ದಾರೆ.
ಇದರ ಜತೆಗೆ ಸಾಂಗ್ ನಲ್ಲಿ ವಿನೋದ್ ಪ್ರಭಾಕರ್ ಅವರ ಡಾನ್ಸ್ ನೋಡಿದ ಜನರು. ವಿನೋದ್ ಅವರನ್ನು ಇಷ್ಟು ಎನರ್ಜಿಟಿಕ್ ಹಾಡಿಗೆ ಡಾನ್ಸ್ ಮಾಡುತ್ತಿರುವುದನ್ನು ನೋಡಿದ ಸಿನಿಮಾ ಪ್ರಿಯರು ವಿನೋದ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಹಾಡಿನಲ್ಲಿರುವ ತಮಟೆ ಬೀಟ್, ಬಳಸಿಕೊಂಡಿರುವ ಸೆಟ್ ಎಲ್ಲವು ಜನಗಳ ಮನವನ್ನು ಯಶಸ್ವಿಯಾಗಿ ಗೆಲ್ಲುತ್ತಿದೆ. ಸಾಂಗ್ ಬಿಡುಗಡೆಯಾಗಿ ಕೇವಲ ಮೂರೇ ದಿನಕ್ಕೆ ಈ ರೀತಿಯ ಕ್ರೇಜ್ ಆದ್ರೆ ಇನ್ನು ಸಿನ್ಮ ಯಾವ ರೇಂಜ್ ಗಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.