ಫಾರ್ಮ್ಸ್ ಕೈ ಸೇರಿದ ಟಾಕ್ಸಿಕ್ ಅಂತರರಾಷ್ಟ್ರೀಯ ವಿತರಣಾ ಹಕ್ಕು!
ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಪವರ್ಫುಲ್ ಸ್ಟೋರಿ, ವಂಡರ್ಫುಲ್ ಟೆಕ್ನಿಷಿಯನ್ಸ್, ಅದ್ಭುತ ತಾರ ಬಳಗದ ಜತೆಗೆ ಗೀತು ಮೋಹನ್ ದಾಸ್ ಎನ್ನುವ ಪ್ಯಾಶನೆಟ್ ನಿರ್ದೇಶಕಿಯೊಂದಿಗೆ ಬರುತ್ತಿರುವ ಸಿನ್ಮ ಈಗಾಗಲೇ ಹಲವಾರು ರೆಕಾರ್ಡ್ ಗಳನ್ನ ಉಡೀಸ್ ಮಾಡಿದೆ.
ಟಾಕ್ಸಿಕ್ ಸಿನಿಮಾದ ಒಂದೊಂದು ಅಪ್ಡೇಟ್ ಕೂಡ ಸಖತ್ ವೈರಲ್ ಆಗುತ್ತಿದೆ. ಸಿನಿಮಾ ತಂಡ ಇಲ್ಲಿಯವರೆಗೆ ಕಿಯಾರ, ನಯನತಾರ, ಹುಮಾ ಖುರೇಶಿ, ತಾರಾ ಸುತರಿಯ ಹಾಗೂ ರುಕ್ಮಿಣಿ ವಸಂತ ಅವರ ಫಸ್ಟ್ ಲುಕ್ ಮತ್ತು ಪಾತ್ರದ ಹೆಸರಿನ ರಿವಿಲ್ ಕೂಡ ಒಳ್ಳೆಯ ಪ್ರತಿಕ್ರಿಯೆಯನ್ನ ಗಳಿಸಿತು. ಎಲ್ಲದಕ್ಕಿಂತ ಹೆಚ್ಚಾಗಿ ಯಶ್ ಅವರ ರಾಯ ಪಾತ್ರದ ಪರಿಚಯದ ವಿಡಿಯೋ ಅಂತೂ ಸೋಶಿಯಲ್ ಮೀಡಿಯಾ ಬ್ಲಾಸ್ಟ್ ಆಗುವಂತೆ ಇತ್ತು.
ಇದೆಲ್ಲದರ ಮಧ್ಯೆ ಚಿತ್ರ ತಂಡ ಇದೀಗ ಹೊಸ ಅಪ್ಡೇಟ್ ನೀಡಿದೆ ಅದುವೇ ಟಾಕ್ಸಿಕ್ ಓವರ್ ಸೀಸ್ ವಿತರಣೆಯನ್ನು ಫಾರ್ಮ್ಸ್ ಎನ್ನುವ ಸಂಸ್ಥೆಗೆ ನೀಡಿದೆ.ಈ ಸಂಸ್ಥೆಯು ಮುಂಚೆ ಕೆಜಿಎಫ್ ಅನ್ನು ಮಿಡಲ್ ಈಸ್ಟ್ ಪ್ರದೇಶದಲ್ಲಿ ವಿತರಿಸಿದ್ದರು.ಈಗ ಟಾಕ್ಸಿಕ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಸ್ಟ್ರಿಬ್ಯೂಟ್ ಮಾಡಲಿದ್ದಾರೆ.
ಇದರ ಹಿಂದೆ ಬಂದಿದ್ದ ಅಪ್ಡೇಟ್ ಪ್ರಕಾರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ದಿಲ್ ರಾಜು ಮಾಲೀಕತ್ವದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಸಿನಿಮಾ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.
ಇಷ್ಟಕ್ಕೆ ಈ ರೇಂಜ್ ಗೆ ಟಾಕ್ಸಿಕ್ ಅಬ್ಬರಿಸುತ್ತಿದ್ರೆ ಇನ್ನು ಟೀಸರ್ ಮತ್ತೆ ಟ್ರೈಲರ್ ಬಂದಾಗ ಹೆಂಗ್ ಇರ್ಬೇಡ ಅಂತಿದ್ದಾರೆ ಯಶ್ ಅಪ್ಪಟ್ಟ ಅಭಿಮಾನಿಗಳು.ಏನೇ ಆಗ್ಲಿ ಯಶ್ ಅವರು ಹೇಳಿರೋದನ್ನ ಮಾಡ್ತಾರೆ ಅನ್ನೋದು ಎಲ್ರಿಗೂ ಗೊತ್ತಿದೆ. ಈವಾಗ ಸದ್ಯಕ್ಕೆ ಯಶ್ ಅವರ ಈ ಸಾಧನೆನ ನೋಡಿ ನೆನಪಿಗೆ ಬರೋದು ಒಂದೇ ಮಾತು” watch out guys, ಕನ್ನಡ ಇಂಡಸ್ಟ್ರಿ ಬೇರೆ ಲೆವೆಲ್ ಗೆ ಹೋಗುತ್ತೆ “