new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರಕ್ಕಸಪುರದೋಳ್ ಸಿನ್ಮಾಗೆ ಫುಲ್ ಫಿದಾ!

ರಕ್ಕಸಪುರದೋಳ್ ಸಿನ್ಮಾಗೆ  ಫುಲ್ ಫಿದಾ!
  • PublishedFebruary 5, 2026

‘ರಕ್ಕಸಪುರದೋಳ್’ ಈಗಾಗಲೇ ತನ್ನ ಅದ್ಭುತ ಟೀಸರ್ ಹಾಗೂ ಟ್ರೈಲರ್ ಗಳಿಂದ ಸದ್ದು ಮಾಡುತ್ತಿರುವ ಸಿನಿಮಾ. ರವಿ ಸಾರಂಗ ಅವರ ನಿರ್ದೇಶನದಲ್ಲಿ ಸಿನ್ಮ ಮೂಡಿದ್ದು, ಸಾಹಸ ನಿರ್ದೇಶಕ ರವಿವರ್ಮಾ ಅವರ ನಿರ್ಮಾಪಣೆಯಾಗಿದೆ. ರಾಜ್ ಬಿ ಶೆಟ್ಟಿಯವರ ಮುಖ್ಯ ಭೂಮಿಕೆಯಲ್ಲಿ ಬರುತ್ತಿರುವ ರಕ್ಕಸಪುರದೋಳ್ ರಾಜ್ ಅವರ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಸಿನಿಮಾವಾಗಿದೆ.ಇದೀಗ ಸಿನಿಮಾದ ಮೊದಲ ಪ್ರೀಮಿಯರ್ ಶೋ ನಿನ್ನೆ ಮೈಸೂರಿನ ನಡೆದಿದ್ದು. ಚಿತ್ರಕ್ಕೆ ಅದ್ಭುತವಾದ ಪ್ರತಿಕ್ರಿಯೆ ದೊರೆತಿದೆ.

ನಿನ್ನೆ ಪ್ರೀಮಿಯರ್ ಶೋ ನಲ್ಲಿ ಸಿನಿಮಾ ನೋಡಿದ ಸಿನಿ ಪ್ರಿಯರು “ರಾಜ್ ಬಿ ಶೆಟ್ಟಿಯವರು ಪರಿಪೂರ್ಣವಾದ ನಟ ಅಂತ ಮತ್ತೊಮ್ಮೆ ಪ್ರೋವ್ ಮಾಡಿದ್ದಾರೆ,ಈ ಸಿನಿಮಾನ ಥಿಯೇಟರ್ ಅಲ್ಲೆ ಬಂದು ನೋಡಿ ಫೀಲ್ ಮಾಡ್ಬೇಕು.ಸಖತ್ ಎಂಗೇಜಿಂಗ್ ಆಗಿದೆ ಸಿನ್ಮ ಬನ್ನಿ ಥೀಯೇಟರ್ ಅಲ್ಲೇ ಬಂದು ನೋಡಿ” ಎಂದೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪ್ರತಿಕ್ರಿಯೆಯನ್ನು ಕೇಳಿರುವ ನೆಟ್ಟಿಗರು ಸಿನಿಮಾ ಬಿಡುಗಡೆಯ ತನಕ ಕಾಯಲು ಸಾಧ್ಯವಾಗುತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ‘ರಕ್ಕಸಪುರದೋಳ್’ ಕುತೂಹಲ ಹೆಚ್ಚಿಸಿದೆ.

Written By
Kannada Picchar

Leave a Reply

Your email address will not be published. Required fields are marked *