ನನ್ ಆಹಾರ ನನ್ ಇಷ್ಟ :ಡಾಲಿ ಧನಂಜಯ
ಡಾಲಿ ಧನಂಜಯ ಅವ್ರು ನಾನ್ ವೆಜ್ ಸೇವನೆ ಮಾಡಿರುವ ವಿಷಯ ಬಹಳ ಚರ್ಚೆಗೆ ಗ್ರಾಸ್ತವಾಗಿತ್ತು.ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಧನಂಜಯ ‘ನನ್ನ ಆಹಾರ ನನ್ನ ಆಯ್ಕೆ,ನನ್ನ ಬಳಿ ಬಂದು ನೀವು ಏನ್ ತಿಂತೀರಿ ಅಂತ ಕೇಳಿದ್ರೆ ನಾನು ಖುಷಿ ಇಂದಾನೆ ಹೇಳ್ತಿನಿ’ ಜೊತೆಗೆ ‘ನಾನ್ ವೆಜ್ ಕದ್ದು ಮುಚ್ಚಿ ತಿನ್ಬೇಕು ಅನ್ನೋಕೆ ಅದೇನು ಕ್ರೈಂ ಅಲ್ಲ’ ಅಂತ ಹೇಳಿದ್ದಾರೆ.
ಇದರ ಒಟ್ಟಿಗೆ ಅವರನ್ನು ಮುಂಚೆ ಬಿಯರ್ ಬಾಯ್ ಅಂತ ಅವ್ರ ಸ್ನೇಹಿತರು ಕರಿಯುತ್ತಿದ ವಿಚಾರವನ್ನು ಹೇಳಿಕೊಂಡಿರುವ ಅವ್ರು ನಾನ್ ಬಿರಿಯಾನಿ ತಿನ್ನೋದಿಕಿಂತ ನಮ್ಮನ ಆಳ್ತಿರೋ ಲೀಡರ್ಸ್ ಎಷ್ಟು ಕೋಟಿ ಕೋಟಿ ತಿಂತಿದ್ದಾರೆ ಅನ್ನೋದನ್ನ ಪ್ರಶ್ನೆ ಮಾಡ್ಬೇಕು ಎಂದು ಹೇಳಿದ್ದಾರೆ.