ಐಎಂಡಿಬಿ ಲೂ ಯಶ್ ‘ಟಾಕ್ಸಿಕ್’ ಹವಾ!
ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ನಟ ಎಂದರೆ ಯಶ್. ಕೆಜಿಎಫ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ನೀಡಿದ್ದ ಯಶ್ ಇಡೀ ವಿಶ್ವವೇ ಕನ್ನಡ ಸಿನಿಮಾ ರಂಗವನ್ನು ತಿರುಗಿ ನೋಡುವಂತೆ ಮಾಡಿದ ವ್ಯಕ್ತಿ.ಕೆಜಿಎಫ್ ಚಾಪ್ಟರ್ 2 ಆದ ಬಳಿಕ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಜನರಿಗಿತ್ತು. ಅದಕ್ಕೆ ‘ಟಾಕ್ಸಿಕ್’ ಎನ್ನುವ ಚಿತ್ರದ ಮೂಲಕ ಉತ್ತವನ್ನ ಕೊಟ್ಟಿದ್ರು.
ಇಡೀ ಭಾರತವೇ ಈ ಚಿತ್ರ ಬಿಡುಗಡೆಗೆ ಕಾಯುತ್ತಿದೆ. ಮಾರ್ಚ್ 19 ರಂದು ತೆರೆಯ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಈ ಚಿತ್ರವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶಿಸುತ್ತಿದ್ದಾರೆ. ಇದೀಗ ಸಿನಿಮಾವು ಐಎಂಡಿಬಿ ಯಲ್ಲಿ ತೆರೆ ಕಾಣಲಿರುವ ಬಹು ನಿರೀಕ್ಷಿತ ಹೊಸ ಸಿನಿಮಾ ಮತ್ತು ಶೋ ಪಟ್ಟಿಯಲ್ಲಿ ಬರೋಬ್ಬರಿ 28.6% ಇಂದ ಮೊದಲನೇ ಸ್ಥಾನದಲ್ಲಿದೆ.
ಈಗಾಗಲೇ ಚಿತ್ರತಂಡದಿಂದ ಸಿನಿಮಾದಲ್ಲಿರುವ ಮಹಿಳಾ ನಟಿಮಣಿಗಳ ಪಾತ್ರದ ಹೆಸರು ಹಾಗೂ ಲುಕ್ ಬಿಡುಗಡೆ ಹೊಂದಿದೆ. ಜೊತೆಗೆ ಯಶ್ ಅವರ ಪಾತ್ರದ ಪರಿಚಯವು ಆಗಿದೆ. ಇವಿಷ್ಟು ಅಪ್ಡೇಟ್ ಗಳು ಜನರಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.