ತಂದೆಯಾಗುತ್ತಿರುವ ಖುಷಿ ಸುದ್ದಿ ಹಂಚಿಕೊಂಡ ಡಾಲಿ ಧನಂಜಯ್!
ಸಿನಿಮಾಗಳಲ್ಲಿ ಖಡಕ್ ಹಾಗೂ ಪವರ್ಫುಲ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಡಾಲಿ ಧನಂಜಯ್ ಅವರು ಇದೀಗ ತಮ ಜೀವನದ ಹೊಸ ಹೊಸ್ತಿಲಲ್ಲಿದ್ದಾರೆ. ಅವರು ಕಳೆದ ವರ್ಷ ಫೆಬ್ರವರಿ 16ರಂದು ಡಾಕ್ಟರ್ ಧನ್ಯತಾ ಅವರನ್ನು ವಿವಾಹವಾಗಿದ್ದರು. ಇದೀಗ ಈ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಹೌದು. ತೆರೆಯ ಮೇಲೆ ನಾಯಕನಾಗಿ, ಖಳನಾಯಕನಾಗಿಯೂ ಮಿಂಚುವ ಡಾಲಿ ಧನಂಜಯ, ತಾವು ತಂದೆಯಾಗುತ್ತಿರುವ ವಿಷಯವನ್ನು ಸ್ವತಃ ಸುಳಿವು ನೀಡುವುದರ ಮೂಲಕ ಹಂಚಿಕೊಂಡಿದ್ದಾರೆ. ʼಉದಯ ಕನ್ನಡಿಗ 2025ʼ ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದಂತಹ ಧನಂಜಯ್ ಅವರು ಎರಡು ಗುಲಾಬಿಯಲ್ಲಿ ಒಂದು ಗುಲಾಬಿಯನ್ನು ತನ್ನ ಮಡದಿಗೆ ನೀಡುವುದಾಗಿ ಇನ್ನೊಂದು ಗುಲಾಬಿಯನ್ನು “ಸದ್ಯದಲ್ಲೇ ಇನ್ನೊಂದು ಜೀವ ಜೊತೆ ಆಗ್ತಿದೆ ಅದಕ್ಕೆ” ಎನ್ನುವ ಮೂಲಕ ತಂದೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಡಾಲಿ ಧನಂಜಯ್ ಅವರ ಅಭಿಮಾನಿಗಳು ಅವರಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭ ಕೋರಿದ್ದಾರೆ.