ʼಲ್ಯಾಂಡ್ ಲಾರ್ಡ್ʼ : ಸಿನಿಮಾ ಅಂದ್ರೆ ಹಿಂಗ್ ಇರ್ಬೇಕು!
ಪಕ್ಕ ಹಳ್ಳಿ ಸೊಗಡಿನ ಸಿನಿಮಾ ಆಗಿರೋ ‘ಲ್ಯಾಂಡ್ ಲಾರ್ಡ್’ ಇಂದು ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ. ಇದು ಅಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎನ್ನುವ ಸಾರಾಂಶವನ್ನು ಹೊಂದಿರುವ ಸಿನಿಮಾ. ಸಿನಿಮಾ ಪ್ರಿಯರು ಮೊನ್ನೆಯಷ್ಟೇ ಬಿಡುಗಡೆಯಾದ ಟ್ರೈಲರ್ ನೋಡಿ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಬ್ಲಾಕ್ ಬಸ್ಟರ್ ಎನ್ನುವ ರಿವ್ಯೂ ಕೊಟ್ಟಿದ್ದರು. ಇದೀಗ ಚಿತ್ರ ರಾಜ್ಯದಾದ್ಯಂತ ಬಿಡುಗಡೆ ಕಾಣಿದೆ.
‘ಲ್ಯಾಂಡ್ ಲಾರ್ಡ್’ ಸಿನಿಮಾದ ಕಥೆ ಒಂದು ಮಣ್ಣಿನ ಕಥೆ 80-90ನೇ ಶತಮಾನದಲ್ಲಿ ನಡೆಯುತ್ತಿದ ಅಧಿಕಾರ, ಆಡಳಿತದ ಸುತ್ತ ಸುತ್ತುವ ಸಿನಿಮಾ ಇದಾಗಿದ್ದು,ಕೋಲಾರದ ಭಾಷೆಯ ಬಳಕೆ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಕಥೆ ಎಂದರೆ ಈ ರೀತಿ ಇರಬೇಕು ಎನ್ನುವುದನ್ನು ಲ್ಯಾಂಡ್ ಲಾರ್ಡ್ ಚಿತ್ರ ತಂಡ ತೋರಿಸಿದೆ.
ಬಹಳ ದೊಡ್ಡ ಕಲಾ ಬಳಗವನ್ನು ಹೊಂದಿರುವ ಚಿತ್ರ ಇದಾಗಿದ್ದು,ಉಮಾಶ್ರೀ ಅವರ ನಟನೆಗೆ ಜನ ಫಿದಾ ಆಗಿದ್ದಾರೆ,ಸಲಗ ವಿಜಯ್ ಅವರ ರಾಚಯ್ಯನ ಪಾತ್ರವಾಗಿರಬಹುದು, ರಚಿತಾ ರಾಮ್ ಅವರ ಖಡಕ್ ನಟನೆ ಒಂದು ಕಡೆ ರೋಮಾಂಚನವನ್ನು ಹೆಚ್ಚಿಸಿದ್ರೆ.ಇತ್ತ ಕಡೆ ರಾಜ್ ಬಿ ಶೆಟ್ಟಿಯವರು ವಿಲನ್ ಪಾತ್ರವಂತೂ ಅಲ್ಟಿಮೇಟ್, ಭಾವನಾ ರಾವ್ ಅವರು ಕೂಡ ಅವರ ಉಳಿದ ಸಿನಿಮಾಗಳಿಗಿಂತ ಇದರಲ್ಲಿ ಬಹಳ ವಿಭಿನ್ನವಾಗಿ ಮಿಂಚಿದ್ದಾರೆ. ರಿತನ್ಯ ಅವರ ಡೆಬ್ಯು ಸಿನಿಮಾವಾಗಿದ್ದರು ನಟನೆ ಮಾತ್ರ ಅದ್ಭುತ. ಒಟ್ಟಿನಲ್ಲಿ ಎಲ್ಲಾ ನಟರು ಅವರ ಕ್ಯಾರೆಕ್ಟರ್ ಅನ್ನು ಜೀವಿಸಿದ್ದಾರೆ.ಸ್ವಾಮಿಯವರ ಕ್ಯಾಮೆರ ವರ್ಕ್ ಬಗ್ಗೆ ಮಾತೆ ಇಲ್ಲ.ಚಿತ್ರದ ಪ್ರತಿ ಫ್ರೇಮ್ ಕೂಡ ಅದ್ಭುತವಾಗಿ ಬಂದಿದೆ.
ಸಿನಿಮಾ ನೋಡಿರುವ ವೀಕ್ಷಕರು,“ಒಂದೊಂದು ಸೀನ್ ಕೂಡ ಬೆಂಕಿ ತರ ಇತ್ತು, ಇಂತಹ ಸಿನಿಮಾ ಬೇಕು ರೀ”, ” ಹಿಸ್ಟರಿ ಗ್ಯಾರಂಟಿ “,“ಕಥೆ, ಆಕ್ಟಿಂಗ್, ನಿರ್ದೇಶನ ಎಲ್ಲಾ ಸಖತ್ ಆಗಿದೆ “ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಒಟ್ಟ್ನಲ್ಲಿ ಎಲ್ಲವು ಪರ್ಫೆಕ್ಟ್.ಪವರ್ಫುಲ್ ಕಥೆ, ಮೈಂಡ್ ಬ್ಲೋಯಿಂಗ್ ಆಕ್ಟಿಂಗ್,ಎಲ್ಲದರ ಸಮ್ಮಿಶ್ರಣ ಈ ಲ್ಯಾಂಡ್ ಲಾರ್ಡ್.