new updates News ಪಿಚ್ಚರ್ stories ಪಿಚ್ಚರ್ UPDATE

ಸುದೀಪ್, ಶಿವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದ ಗಿಲ್ಲಿ, ನಟರು ಏನಂದ್ರು..?

ಸುದೀಪ್, ಶಿವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದ ಗಿಲ್ಲಿ, ನಟರು ಏನಂದ್ರು..?
  • PublishedJanuary 21, 2026

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ತಮ್ಮ ಗೆಲುವಿನ ನಂತರ ಕುಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಹಾಗೂ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡಿಕೊಂಡಿದ್ದಾರೆ.. ಈ ಇಬ್ಬರೂ ಕೂಡ ಗಿಲ್ಲಿ ಬದುಕಿಗೆ ದಾರಿ ಕಂಡು ಕೊಟ್ಟವರು ಇಬ್ಬರೂ ತಾರೆಯರ ಶುಭ ಹಾರೈಕೆಯಿಂದ ಗಿಲ್ಲಿ ಸಂತೋಷವಾಗಿದ್ದಾರೆ.

ಹೌದು.. ಇತ್ತೀಚೆಗೆ ತಮ್ಮ ಹುಟ್ಟೂರಲ್ಲಿ ರ್ಯಾಲಿ ಮಾಡಿದ್ದರು. ಆ ಬಳಿಕ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಈಗ ಶಿವರಾಜ್​​​ಕುಮಾರ್ ಹಾಗೂ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇಬ್ಬರೂ ಗಿಲ್ಲಿ ಬದುಕಿಗೆ ದಾರಿ ದೀಪ ಆದವರು.

ಯೆಸ್.. ಶಿವಣ್ಣಾಗೆ ಗಿಲ್ಲಿ ಮೊದಲೇ ಪರಿಚಯ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಶಿವರಾಜ್​​ಕುಮಾರ್ ಜಡ್ಜ್ ಸ್ಥಾನದಲ್ಲಿ ಇದ್ದರು. ಸ್ಪರ್ಧಿಯಾಗಿ ತೆರಳಿದ್ದ ಗಿಲ್ಲಿ ಅವರು ಎಲ್ಲರನ್ನೂ ರಂಜಿಸಿದ್ದರು. ಆಗಲೇ ಶಿವರಾಜ್​​ಕುಮಾರ್​​ಗೆ ಗಿಲ್ಲಿ ಇಷ್ಟ ಆಗಿದ್ದರು. ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿರುವಾಗ ಶಿವಣ್ಣ ಶುಭ ಹಾರೈಸಿದ್ದರು. ಗಿಲ್ಲಿನೇ ಗೆಲ್ಲೋದು ಎಂದು ಹೇಳಿದ್ದರು. ಹೊರ ಬಂದ ಬಳಿಕ ಗಿಲ್ಲಿಗೆ ಈ ವಿಷಯ ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಶಿವಣ್ಣ ಹಾಗೂ ಗೀತಕ್ಕನ ಭೇಟಿ ಮಾಡಿದ್ದಾರೆ.

ಇನ್ನೂ.. ಸುದೀಪ್ ಅವರನ್ನೂ ಗಿಲ್ಲಿ ಭೇಟಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರೋವಾಗ ಎಲ್ಲ ವಿಷಯಗಳನ್ನು ಸುದೀಪ್ ಮನಬಿಚ್ಚಿ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಗಿಲ್ಲಿ ಹೋಗಿ ಸುದೀಪ್​​ನ ಭೇಟಿ ಮಾಡಿದ್ದಾರೆ.

ಒಟ್ನಲ್ಲಿ.. ಜನರ ಅಭಿಪ್ರಾಯದಂತೆ ಗಿಲ್ಲಿನೇ ವಿನ್ ಆಗಿದ್ದು, ಒಳ್ಳೊಳ್ಳೆ ಸಿನಿಮಾ ಮಾಡಿ ಇನ್ನು ಹೆಚ್ಚಿನ ಯಶಸ್ಸು ಗಿಲ್ಲಿಗೆ ಸಿಗಲಿ ಅನ್ನೋದೆ ಎಲ್ಲರ ಹಾರೈಕೆ ಆಗಿದೆ..

Written By
Kannada Picchar

Leave a Reply

Your email address will not be published. Required fields are marked *