ಸೀನಿಯರ್ಸ್ ಬಗ್ಗೆ ಯಶ್ ಏನಂದ್ರು? ಕಿಚ್ಚನ ಟ್ವೀಟ್ ಗೆ ಸ್ವಿಟ್ ರಿಪ್ಲೈ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ರಾಯ ಇಂಟ್ರೋಡಕ್ಷನ್ ವೀಡಿಯೋ ಅನ್ನು ಜನವರಿ 8 ರಂದು ಚಿತ್ರತಂಡ ಬಿಡುಗಡೆ ಮಾಡಿತ್ತು.ಈ ಸಂಧರ್ಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯ ಮೂಲಕ “ಶುಭಾಶಯಗಳು… @TheNameIsYash ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕಾಗುತ್ತದೆ.ನೀವು ಇಟ್ಟಿರುವ ಈ ಹೊಸ ಹೆಜ್ಜೆಯು, ನಿಮ್ಮ ಗುರಿಯನ್ನು ತಲುಪಲು ಸಹಕಾರಿಯಾಗಲಿ ಎಂದು ಹಾರೈಸುತ್ತೇನೆ.ಒಳ್ಳೆಯದಾಗಲಿ!” ಎಂದು ವಿಶ್ ಮಾಡಿದ್ದರು.
ಇದಕ್ಕೆ ಯಶ್ ಅವರು “ಧನ್ಯವಾದಗಳು, ಸರ್. ನಿಮ್ಮನ್ನುಒಳಗೊಂಡಂತೆ ನನ್ನ ಸೀನಿಯರ್ಸ್ ಅವರಿಂದ ನಾನು ಕಲಿತಿರುವ ಒಂದು ವಿಷಯವೆಂದರೆ,ಏಕಾಗ್ರತೆ,ಪ್ರಾಮಾಣಿಕತೆ ಹಾಗು ಧೈರ್ಯದೊಂದಿಗೆ ಕೆಲಸವನ್ನುಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದೆಂದು” ಎಂದು ರಿಪ್ಲೈ ಮಾಡಿದ್ದಾರೆ.
ಕನ್ನಡ ಸಿನಿ ರಂಗದ ಇಬ್ಬರು ದೊಡ್ಡ ಕಲಾವಿದರ ಈ ಸ್ವೀಟ್ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,ಯಶ್ ಅವರ ವಿನಯದ ಉತ್ತರ ಹಾಗು ಸುದೀಪ್ ಅವರ ಬೆಂಬಲವನ್ನು ಕಂಡ ನೆಟ್ಟಿಗರು,ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಬಾಂಧವ್ಯವನ್ನು ನೋಡುವುದೇ ಒಂದು ರೀತಿ ಖುಷಿ ಎಂದು ಹಂಚಿಕೊಂಡಿದ್ದಾರೆ.