ಕಿರಣ್ ರಾಜ್ ‘ರಾನಿ’ ಸಿನಿಮಾ ಇದೀಗ ಒಟಿಟಿಯಲ್ಲಿ
ಕಿರುತೆರೆ ಲೋಕದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಾಯಕ ನಟರಲ್ಲಿ ಕಿರಣ್ ರಾಜ್ ಒಬ್ಬರು.ಕನ್ನಡತಿಯಲ್ಲಿ ಹರ್ಷ ಆಗಿ ಜನರ ಮನ ಕದ್ದಿದ್ದ ಕಿರಣ್ ಸದ್ಯಕ್ಕೆ ಜೀ ಕನ್ನಡದ ಕರ್ಣ ಧಾರವಾಹಿಯಲ್ಲಿ ಕರ್ಣನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.ಕೇವಲ ಕಿರುತೆರೆಯಲ್ಲೂ ಅಲ್ಲದೇ ಬೆಳ್ಳಿ ತೆರೆಯಲ್ಲು ಕಮಾಲ್ ಮಾಡಿರುವ ಕಿರಣ್ ನಟಿಸಿರುವ ‘ರಾನಿ‘ ಸಿನಿಮಾ ಇದೀಗ ಒಟಿಟಿಗೆ ಕಾಲಿಟ್ಟಿದೆ.
ಗುರುತೇಜ್ ಶೆಟ್ಟಿ ಡೈರೆಕ್ಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾದಲ್ಲಿ ಕಿರಣ್ ಅವರು ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಪಕ್ಕ ಅಕ್ಷನ್ ಡ್ರಾಮ ಶೈಲಿಯಲ್ಲಿರುವ ಸಿನಿಮಾ zee5 ನಲ್ಲಿ ಸ್ಟ್ರೀಮ್ ಆಗುತ್ತಿದೆ.ಈ ಚಿತ್ರವು 2024ರ ಜನವರಿ 12 ರಂದು ರಾಜ್ಯದಾದ್ಯಂತ ಬಿಡುಗಡೆ ಕಾಣಿತ್ತು.ಕಿರಣ್ ರಾಜ್ ಜತೆಗೆ ರಾಧಿಕಾ ರಾಮಚಂದ್ರ,ಸಮೀಕ್ಷಾ,ರವಿಶಂಕರ್ ಶರ್ಮಾ ಹೀಗೆ ಮುಂತಾದವರು ಅಭಿನಯಿಸಿದ್ದರು.ಇದೀಗ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು.