ಆಸ್ಕರ್ ಅವಾರ್ಡ್ಸ್ ರೇಸ್ ನಲ್ಲಿ ಹೊಂಬಾಳೆ ಫೀಲ್ಮ್ ನ ಎರಡು ಸಿನಿಮಾ!
ಹೊಂಬಾಳೆ ಫಿಲ್ಮ್ಸ್ ನಮ್ಮ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಕಳೆದ ಹಲವಾರು ವರ್ಷಗಳಿಂದ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಇದೀಗ ಮತ್ತೊಂದು ದಾಪು ಗಾಲನ್ನು ಇಟ್ಟಿದೆ. 98ನೇ ಆಸ್ಕರ್ ಜನರಲ್ ಎಂಟ್ರಿ ಪಟ್ಟಿಗೆ ಹೊಂಬಾಳೆ ಫಿಲ್ಮ್ಸ್ ನ ಎರಡು ಸಿನಿಮಾಗಳು ಸೇರಿವೆ.
ಆಸ್ಕರ್ ಅವಾರ್ಡ್ ವಿಶ್ವದ ಸಿನಿ ರಂಗದ ಅತ್ಯಂತ ಪ್ರತಿಷ್ಟಿತ ಗೌರವಗಳಲ್ಲಿ ಒಂದು.ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಮತ್ತು ಸೈನ್ಸಸ್ ಅವರ ವತಿಯಿಂದ 1929 ರಿಂದ ನಡೆದುಕೊಂಡು ಬಂದಿದೆ.ಈ ವರ್ಷ ಕಳೆದ 2025 ರಲ್ಲಿ ಅತ್ಯದ್ಭುತ ಪ್ರದರ್ಶನ ಕಂಡ ಸಿನಿಮಾಗಳಿಗೆ ಗೌರವವನ್ನು ನೀಡಲು ಈ ಸಮಾರಂಭ ನಡೆಯುತ್ತಿದೆ.
ಇಡೀ ವಿಶ್ವಕ್ಕೆ ಕರಾವಳಿಯ ಸೊಗಡನ್ನು ಪರಿಚಯಿಸಿ ರೆಕಾರ್ಡ್ ಮೇಲೆ ರೆಕಾರ್ಡ್ ಬರೆದಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತರ ಚಾಪ್ಟರ್ 1 ಹಾಗೂ ಮಹಾವತಾರ ನರಸಿಂಹ ಎನ್ನುವ ಅನಿಮೇಟೆಡ್ ಸಿನಿಮಾ ಎಂಟ್ರಿ ಲಿಸ್ಟ್ ಗೆ ಸೇರಿದೆ.ಈ ಎರಡು ಸಿನಿಮಾವು ಅದ್ರ ಕಥೆ,ನಟನೆ, ಡೈರೆಕ್ಷನ್, ಮೇಕಿಂಗ್ ಎಲ್ಲಾ ವಿಚಾರಗಳಲ್ಲಿ ಜನರ ಮೆಚ್ಚುಗೆಯನ್ನು ಪಡೆದಿತ್ತು. ಇದೀಗ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಮೂಲ ಚಿತ್ರಕತೆ / ಬರವಣಿಗೆ, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಸಿನಿಮಾಟೋಗ್ರಫಿ ಸೇರಿ ಅನೇಕ ಪ್ರಮುಖ ಆಸ್ಕರ್ ಪ್ರಶಸ್ತಿಯ ವಿಭಾಗಗಳಿಗೆ ಶಾರ್ಟ್ ಲಿಸ್ಟ್ ಮತ್ತು ಪರಿಗಣನೆ ಹೊಂದಿದೆ.
ಭಾರತದಿಂದ 5 ಸಿನಿಮಾಗಳು ಎಂಟ್ರಿ ಲಿಸ್ಟ್ ಗೆ ಸೇರಿದ್ದು ಹೊಂಬಾಳೆ ಫಿಲ್ಮ್ಸ್ ನ ಎರಡು ಸಿನಿಮಾಗಳು ಸೇರಿವೆ. ಇದು ನಮ್ಮ ಭಾರತೀಯ ಸಿನಿ ರಂಗಕ್ಕೆ ಹೆಮ್ಮೆ ಪಡುವಂತಹ ವಿಚಾರ.