ಯಶ್ ಯಶಸ್ಸಿಗೆ ‘ರಾ’ ಅನ್ನೋ ಪದಕ್ಕೆ ವಿಶಿಷ್ಟವಾದ ಶಕ್ತಿ, ಲಕ್ ಇದೆ ಅಂತಾನೆ ಅನ್ಬೋದು. ಹಾಗಾದ್ರೆ ರಾ ಯಶ್ ಬಾಳಿನಲ್ಲಿ ಮಾಡಿರುವ ಮೋಡಿಯ ಬಗ್ಗೆ ಒಂದು ವರದಿ ಇಲ್ಲಿದೆ.

ವೃತ್ತಿ ಜೀವನದಲ್ಲಿ ರಾ ಕಮಾಲ್!

ಯಶ್ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದು ಜಂಬದ ಹುಡುಗಿ ಇಂದ ಆದ್ರೆ ಅವರಿಗೆ ಬ್ರೇಕ್ ಕೊಟ್ಟಿದ್ದು ಮೊಗ್ಗಿನ ಮನಸು.ಈ ಸಿನಿಮಾದಲ್ಲಿ ಅವರು ರಾಹುಲ್ ಅನ್ನೋ ಒಂದು ಪಾತ್ರದಲ್ಲಿ ಗಮನ ಸೆಳೆದ ಯಶ್ ಬಳಿಕ ‘Mr and Mrs Ramachari’ ಅಲ್ಲಿ ರಾಮಾಚಾರಿ ಅನ್ನೋ ಪಾತ್ರದಲ್ಲಿ ಮಿಂಚಿದ್ರು. ಈ ಸಿನಿಮಾ ಆಗಿನ ಸ್ಯಾಂಡಲ್ವುಡ್ ಇತಿಹಾಸದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿತ್ತು.

ಇನ್ನು ರಾಕಿಯಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಈಗ ಭಾರತಕ್ಕೆ ರಾಕಿ ಭಾಯ್ ಅಂತಾನೆ ಫೇಮಸ್. ಇದೀಗ ರಾಯ ನಾಗಿ ಮತ್ತೆ ದೊಡ್ಡ ಅಲೆಯನ್ನ ಸೃಷ್ಟಿಸೋಕೆ ರೆಡಿ ಯಾಗಿರುವ ಯಶ್ ತಮ್ಮ ಮುಂಬರುವ ಇನ್ನೊಂದು ಸಿನಿಮಾ ರಾಮಾಯಣದಲ್ಲೂ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದಿಷ್ಟು ಅವರ ವೃತ್ತಿ ಜೀವನದಲ್ಲಿ ‘ರಾ’ ತಂದು ಕೊಟ್ಟ ಸಕ್ಸಸ್ ಆದ್ರೆ ಇನ್ನೊಂದು ಕಡೆ ವಯಕ್ತಿಕ ಜೀವನದಲ್ಲಿ ‘ರಾ ‘ ಅಕ್ಷರ ಇನ್ನು ಹೆಚ್ಚಿನ ಲಕ್ ಅನ್ನೇ ತಂದಿದೆ.

ವಯಕ್ತಿಕ ಜೀವನದಲ್ಲಿ ‘ರಾ’ ಲಕ್ಕಿ ಚಾರ್ಮ್

ಯಶ್ ಅವರ ಧರ್ಮ ಪತ್ನಿ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್.ಯಶ್ ಅವರ ಸೀರಿಯಲ್ ಜರ್ನಿ ಇಂದ ಹಿಡಿದು ಬೆಳ್ಳಿ ತೆರೆಯವರೆಗೆ ಜೊತೆಯಾಗಿ ಸಾಗಿದ್ದಾರೆ.ಈಗ ಬಾಳ ಸಂಗತಿಯಾಗಿ ಯಶ್ ಎಲ್ಲಾ ನಡೆಯಲ್ಲೂ ಅವರ ಜೊತೆ ರಾಧಿಕಾ ಅವರು ಇದ್ದಾರೆ. ಹಾಗಾಗಿ ಯಶ್ ಅವರ ಲಕ್ಕಿ ಚಾರ್ಮ್ ರಾಧಿಕಾ ಅಂದ್ರು ತಪ್ಪಾಗಲ್ಲ.

ಇನ್ನು ಅವರ ಮಕ್ಕಳಾದ ಯಥರ್ವ್ ಮತ್ತು ಆಯ್ರಾ ಹೆಸರಿನಲ್ಲೂ ರಾ ಮ್ಯಾಜಿಕ್ ಇದೆ. ಎಲ್ಲಾ ನೋಡ್ತಿದ್ರೆ ಯಶ್ ಅವ್ರಿಗೆ ಸಿನಿಮಾ ರಂಗದಲ್ಲಿ ಹಾಗೂ ವಯಕ್ತಿಕ ಬಾಳಿನಲ್ಲಿ ರಾ ಅನ್ನೋ ಅಕ್ಷರ ದೊಡ್ಡ ಯಶಸ್ಸೇ ತಂದು ಕೊಟ್ಟಿದೆ.

Written By
Kannada Picchar

Leave a Reply

Your email address will not be published. Required fields are marked *