new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರಿಲೀಸ್ ಆಗ್ದಿರೋ ಸಿನಿಮಾಗಳಿಗೆ ನೆಗೆಟಿವ್ ರಿವ್ಯೂ?

ರಿಲೀಸ್ ಆಗ್ದಿರೋ ಸಿನಿಮಾಗಳಿಗೆ ನೆಗೆಟಿವ್ ರಿವ್ಯೂ?
  • PublishedJanuary 7, 2026

ಕಳೆದ ವರ್ಷ ಡಿಸೆಂಬರ್ ನಲ್ಲಿ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟಾರ್ಸ್ ಗಳ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆದ್ವು. ಒಂದು ಕಡೆ ದರ್ಶನ್ ಅವರ ಡೆವಿಲ್ ಡಿಸೆಂಬರ್ 11 ಕ್ಕೆ ತೆರೆ ಕಂಡರೆ ಇನ್ನೊಂದು ಕಡೆ ಶಿವಣ್ಣ, ಉಪ್ಪಿ ದಾದ ಹಾಗೂ ರಾಜ್ ಬಿ ಶೆಟ್ಟಿಯವರ 45 ಮತ್ತು ಕಿಚ್ಚ ಸುದೀಪ್ ಅವರ ಮಾರ್ಕ್ ಡಿಸೆಂಬರ್ 25 ಕ್ಕೆ ಒಂದೇ ದಿನ ಬಿಡುಗಡೆ ಕಾಣಿತು.ಒಂದು ರೀತಿ ಮೂರು ಸಿನಿಮಾ ಕೂಡ ಬಹು ನಿರೀಕ್ಷಿತ ಚಿತ್ರಗಳು. ಆದರೆ ಈ ಸಿನಿಮಾಗಳು ಅಂದುಕೊಂಡಷ್ಟು ಗಳಿಕೆಯನ್ನ ಮಾಡಲಿಲ್ಲ.

ಪ್ರಯಾಷಃ ಸಿನಿಮಾದ ನಾಯಕರು, ನಿರ್ದೇಶಕರು ಪ್ರಮೋಷನ್ ಟೈಮ್ ಅಲ್ಲಿ ಹಲವಾರು ಮಾತುಗಳನ್ನ ಈ ಪೈರಸಿ ವಿರುದ್ಧ ಮಾತನಾಡಿದರು.ಅನೇಕ ಸ್ಟೆಪ್ಸ್ ಗಳನ್ನ ಇದರ ವಿರುದ್ಧ ತೆಗೆದುಕೊಂಡ್ರು ಕೂಡ, ಸಿನಿಮಾ ಪೈರಸಿ ಆಗುವುದನ್ನು ತಡೆಯಲು ಆಗ್ಲಿಲ್ಲ.ಅದ್ರಿಂದ ಇಂಡಸ್ಟ್ರೀಗೆ ಈ ವರ್ಷ ಹಲವಾರು ಲಾಸ್ ಗಳು ಆಗಿವೆ.

ಮೊದಲನೆಯದಾಗಿ ಡೆವಿಲ್ ಸಿನಿಮಾ, ಡೆವಿಲ್ ಸಿನಿಮಾ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆ ಆಯ್ತು.ಈ ಸಿನಿಮಾ ಭರ್ಜರಿ ಕಲೆಕ್ಷನ್ ಕೂಡ ಮಾಡ್ತು. ಆದ್ರೆ ಬರೀ ಪೈರಸಿ ಇಂದ ಸಿನಿಮಾ 10 ರಿಂದ 15 ಕೋಟಿ ಲಾಸ್ ಅನ್ನು ಅನುಭವಿಸ್ತು.ಇನ್ನು 45 ಸಿನಿಮಾ 15 ರಿಂದ 18 ಕೋಟಿ ಲಾಸ್ ಪಡೆದು ಕೊಂಡ್ರೆ ಮಾರ್ಕ್ ಸಿನಿಮಾ 15 ಕೋಟಿ ಕಳ್ಕೊಂಡಿದೆ.

ಸಾಮಾನ್ಯವಾಗಿ ಮೂವಿ ರಿಲೀಸ್ ಆದ ಕೆಲವೇ ಸಮಯದಲ್ಲಿ ಮೂವಿ ಲಿಂಕ್ ಗಳು ಕೆಲವೊಂದು ವೆಬ್ಸೈಟ್ ಗಳಲ್ಲಿ ಟೆಲಿಗ್ರಾಂ ನಲ್ಲಿ ಜನಗಳಿಗೆ ಸಿಗ್ತಿತ್ತು.ಆದ್ರೆ ನಮಗೆ ತಿಳಿಯದೆ ಹಲವಾರು ವೆಬ್ಸೈಟ್ ಗಳು ಪೈರಸಿಯನ್ನು ಮಾಡ್ತಿತ್ತು.

ಆದ್ರೆ ಇನ್ನೊಂದು ಕಡೆ ಸಿನಿಮಾಗಳ ಮೇಲೆ ನೆಗೆಟಿವ್ ಅಭಿಪ್ರಾಯವನ್ನ ಬೇಕು ಅಂತಲೇ ಕೊಡ್ತಾ ಇದೆ. ಸಿನಿಮಾ ಬಂದ ಮೇಲೆ ರಿವ್ಯೂ ಕೊಡೋದು ಬೇರೆ, ಆದ್ರೆ ಸಿನಿಮಾ ರಿಲೀಸ್ ಆಗದೆ ನೆಗೆಟಿವ್ ಅಭಿಪ್ರಾಯವನ್ನು ಜನರ ಮನಸಲ್ಲಿ ಹುಟ್ಟುವಂತೆ ಮಾಡ್ತಿದೆ. ಅದಕ್ಕಾಗಿಯೇ ಒಂದು ವರ್ಗ ಇರುವುದು ಕಂಡು ಬರ್ತಿದೆ.

ಉದಾಹರಣೆಗೆ ಲ್ಯಾಂಡ್ ಲಾರ್ಡ್ ಸಿನಿಮಾ ಇನ್ನು ಬಿಡುಗಡೆ ಆಗ್ಲಿಲ್ಲ. ಆದ್ರೆ ಅದಕ್ಕಿಂತ ಮುಂಚೆಯೇ ಸಿನಿಮಾ ಚೆನಾಗಿಲ್ಲ, ಅದು ಸರಿ ಇಲ್ಲ, ರಚಿತಾ ರಾಮ್ ಹಾಗೆ ಹೀಗೆ ಎಂತೆಲ್ಲ ಕಾಮೆಂಟ್ಸ್ ಮಾಡಿದ್ದಾರೆ. ಆದ್ರೆ ಇದ್ರಲ್ಲಿ ಒಂದು ವಿಚಾರ ಅಂದ್ರೆ ಒಂದೊಂದ್ದು ಸ್ಟಾರ್ ಹೆಸ್ರಲ್ಲಿ ಅಂದ್ರೆ ದರ್ಶನ್ ಫ್ಯಾನ್ಸ್, ಕಿಚ್ಚ ಫ್ಯಾನ್ ಅನ್ನೋ ಅಕೌಂಟ್ ಹೆಸರು ಆದ್ರೆ ಪ್ರೊಫೈಲ್ ಪಿಕ್ ಇಲ್ಲ. ಈ ತರಹದ ನಕಲಿ ಖಾತೆಗಳಿಂದ ಕಾಮೆಂಟ್ಸ್ ಗಳು ಕಾಣಿಕೊಳುತ್ತಿರುವುದು.

ಒಂದು ಕಡೆ ಪೈರಸಿ ಇನ್ನೊಂದು ಕಡೆ ಈ ತರದ ಸಿನಿಮಾ ರಿಲೀಸ್ ಆಗದಿರುವುದರ ನೆಗೆಟಿವ್ ರಿವ್ಯೂ ಗಳು ಎಲ್ಲವನ್ನು ನೋಡ್ತಾ ಇದ್ರೆ ಇದರ ಹಿಂದೆ ಯಾರಿದರೆ? ಯಾಕೆ ಮಾಡ್ತಿದ್ದಾರೆ ಅನ್ನೋದೇ ತಿಳಿಯುತ್ತಿಲ್ಲ. ಈಗಲಾದರೂ ಸ್ಯಾಂಡಲ್ ವುಡ್ ಹಾಗೂ ಸಿನಿ ಪ್ರಿಯರು ಎಚೆತ್ತುಕೊಳ್ಳಬೇಕು.

Written By
Kannada Picchar

Leave a Reply

Your email address will not be published. Required fields are marked *