ಬಿಗ್ ಬಾಸ್ 12 ವಿನ್ನರ್ ಧನುಷ್! ಗಿಲ್ಲಿ ಫ್ಯಾನ್ಸ್ ಗೆ ಟೆನ್ಷನ್ನೋ ಟೆನ್ಷನ್..
ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ ನಾಮಿನೇಷನ್ ಪ್ರಕ್ರಿಯೆ ನೆನ್ನೆ ನಡೆದಿದೆ. ಬಿಗ್ ಬಾಸ್ ಫಿನಾಲೆ ಹತ್ತಿರ ಆಗಿರುವುದರಿಂದ ಎಲ್ಲ ಸ್ಪರ್ಧಿಗಳಿಗೂ ಢವಢವ ಶುರುವಾಗಿದೆ. ಯಾರು ಎಲಿಮಿನೇಟ್ ಆಗುತ್ತಾರೆ? ಯಾರು ಫಿನಾಲೆಗೆ ಹೋಗುತ್ತಾರೆ ಎಂಬುದು ತಿಳಿಯಲು ವೀಕ್ಷಕರು ಕುತೂಹಲಕ್ಕೆ ಕಾರಣವಾಗಿದೆ.
ಧ್ರುವಂತ್, ರಾಶಿಕಾ ಶೆಟ್ಟಿ, ಅಶ್ವಿನಿ , ಗಿಲ್ಲಿ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ರಘುಕೊನೇ ಹಂತದ ತನಕ ಬಂದಿದ್ದಾರೆ. ಈ ಸೀಸನ್ನ ಫಿನಾಲೆ ಶೀಘ್ರದಲ್ಲೇ ಬರಲಿದೆ. ಕೊನೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇರುವುದು ಕೇವಲ 8 ಜನರು ಆದ್ದರಿಂದ ಅವರ ನಡುವೆಯೇ ಜಗಳ ಜೋರಾಗಿದೆ. ಧನುಷ್ ಅವರು ಕ್ಯಾಪ್ಟನ್ ಆದ್ದರಿಂದ ನಾಮಿನೇಷನ್ನಿಂದ ಸೇಫ್ ಆಗಿದ್ದಾರೆ. ಇನ್ನುಳಿದ ಎಲ್ಲರೂ ಈ ವಾರ ನಾಮಿನೇಟ್ ಆಗಿದ್ದಾರೆ. ಕೇವಲ ಒಂದೇ ವೋಟ್ನಿಂದ ಗಿಲ್ಲಿ ನಟ ಕೂಡ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಅವರಿಗೆ ಶಾಕ್ ಆಗಿದೆ.
ಅಶ್ವಿನಿ ಮಾತ್ರ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದರು. ಒಬ್ಬರೇ ನಾಮಿನೇಟ್ ಮಾಡಿದ್ದರಿಂದ ತಾವು ಈ ವಾರ ನಾಮಿನೇಷನ್ನಿಂದ ಪಾರಾಗಬಹುದು ಎಂದು ಗಿಲ್ಲಿ ನಟ ಅವರು ಭಾವಿಸಿದ್ದರು. ಆದರೆ ಅವರು ಕೂಡ ನಾಮಿನೇಟ್ ಆಗಿದ್ದಾರೆ. ವೀಕ್ಷಕರ ಬೆಂಬಲದಿಂದ ತಾನು ಖಂಡಿತಾ ಸೇಫ್ ಆಗುತ್ತೇನೆ ಎಂಬ ಆತ್ಮವಿಶ್ವಾಸ ಕೂಡ ಅವರಿಗೆ ಇದೆ.
ಬಿಗ್ ಬಾಸ್ ಆಟದಲ್ಲಿ ನೂರು ದಿನಗಳು ಕಳೆದಿವೆ. ಇಲ್ಲಿಯ ತನಕ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವುದು ಎಂದರೆ ತಮಾಷೆಯ ವಿಷಯ ಅಲ್ಲ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳ ಜೊತೆ ಪೈಪೋಟಿ ನೀಡಬೇಕು. ಹಲವಾರು ಟಾಸ್ಕ್ ಗೆಲ್ಲಬೇಕು. ಆ ಎಲ್ಲ ಹಂತಗಳನ್ನು ದಾಟಿಕೊಂಡು ಈ 8 ಮಂದಿ ಸ್ಪರ್ಧಿಗಳು ಕೊನೇ ವಾರದ ನಾಮಿನೇಷನ್ ತನಕ ಬಂದಿದ್ದಾರೆ.ಸಧ್ಯಕ್ಕಿರೋ ಮಾಹಿತಿಯ ಪ್ರಕಾರ ಬಿಗ್ ಮನೆಯ ವಿನ್ನರ್ ಧನುಷ್ ಎನ್ಮಲಾಗ್ತೀದೆ..!