new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕನಕಾವತಿ ಈಗ ಮೆಲ್ಲೀಸಾ: ‘ಟಾಕ್ಸಿಕ್‌’ ಅಖಾಡದಲ್ಲಿ ರುಕ್ಕು

ಕನಕಾವತಿ ಈಗ ಮೆಲ್ಲೀಸಾ: ‘ಟಾಕ್ಸಿಕ್‌’ ಅಖಾಡದಲ್ಲಿ ರುಕ್ಕು
  • PublishedJanuary 6, 2026

ಯಶ್‌ ನಟನೆಯ ‘ಟಾಕ್ಸಿಕ್‌ -ಫೇರಿ ಟೇಲ್ ಫಾರ್‌ ಗ್ರೋನಪ್ಸ್‌’ ಸಿನಿಮಾದ ಬಗ್ಗೆ ಚಿತ್ರರಂಗ ಹಾಗು ಸಿನಿ ಪ್ರಿಯರಿಗೆ ಕುತೂಹಲ ಪ್ರತಿದಿನ ಹೆಚ್ಚಾಗ್ತಾನೆ ಇದೆ.ಸಿನಿಮಾದ ಪೋಸ್ಟರ್ ಗಳು ಬಿಡುಗಡೆ ಆದ ಮೇಲಂತ್ತೂ ಯಶ್‌ ಅಭಿಮಾನಿಳಿಗೆ ಟಾಕ್ಸಿಕ್‌ ಫೀವರ್‌ ಜಾಸ್ತಿನೇ ಆಗಿದೆ.ಕಿಯಾರ ಅಡ್ವಾಣಿ ,ಹುಮ ಖುರೇಶಿ ,ನಯನತಾರ ಮತ್ತು ತಾರ ಸುತಾರಿಯ ಪೋಸ್ಟರ್‌ ಆದ್ಮೇಲೆ ಜನರು ಕಾಯ್ತಿದಿದ್ದು ಕನ್ನಡಿಗರ ಕರೆಂಟ್‌ ಕ್ರಷ್‌ ರುಕ್ಮಿಣಿ ವಸಂತ್‌ ಗಾಗಿ.ಇದೀಗ ರುಕ್ಕು ಪೋಸ್ಟರ್‌ ಹಾಗು ಪಾತ್ರದ ಹೆಸರು ಕೂಡ ರಿವೀಲ್‌ ಆಗಿದೆ.

ಕನಕಾವತಿಯಾಗಿ ಭಾರತೀಯರ ಮನಸು ಕದ್ದ ರುಕ್ಕು ‘ಟಾಕ್ಸಿಕ್‌’ ಸಿನಿಮಾದಲ್ಲಿ ಮೆಲ್ಲೀಸಾ ಕ್ಯಾರೆಕ್ಟರ್‌ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.ಇಂದು ಚಿತ್ರತಂಡ ಪೋಸ್ಟರ್‌ ರಿಲೀಸ್‌ ಮಾಡಿದ್ದು,ಬ್ಲೂ ಡ್ರೆಸ್‌ ನಲ್ಲಿ ಪಾರ್ಟಿಗೆ ಎಂಟ್ರಿ ಕೊಡೊ ತರ ಪೋಸ್ಟರ್‌ ನಲ್ಲಿ ಕಾಣುತ್ತಿದೆ.ಜತೆಗೆ 60ನೇ ದಶಕದ ವೈಬ್‌ ಅನ್ನು ಕೂಡ ಕೊಡುತ್ತಾ ಇರೋ ಪೋಸ್ಟರ್‌ ನೋಡಿ ರುಕ್ಕು ಫ್ಯಾನ್ಸ್‌ ಖುಷ್‌ ಆಗಿದ್ದಾರೆ.

ಚಿತ್ರದ ನಿರ್ದೇಶಕಿಯಾದ ಗೀತು ಮೋಹನ್‌ ದಾಸ್‌ ತಮ್ಮ ಇನ್‌ ಸ್ಟಾಗ್ರಾಮ್‌ ನಲ್ಲಿ ” ನಾನು ರುಕ್ಮಿಣಿಯಲ್ಲಿ ಇಷ್ಟ ಪಡುವುದೇನಂದರೆ ಒಬ್ಬ ನಟಿಯಾಗಿ ಅವರ ಬುದ್ದಿವಂತಿಕೆ.ಅವರು ಬರೀ ನಟಿಸಲ್ಲ, ಆ ಪಾತ್ರವನ್ನ ಅರ್ಥ ಮಾಡ್ಕೊಂಡು ಅದಕ್ಕೆ ಜೀವ ತುಂಬುತ್ತಾರೆ. ಅವರು ಪ್ರಶ್ನೆಗಳನ್ನ ಕೇಳ್ತಾರೆ,ಆದ್ರೆ ಡೌಟ್‌ ಇಂದ ಅಲ್ಲ ಕುತೂಹಲದಿಂದ .ಅದು ನನ್ನನ್ನು ಇನ್ನು ಗಾಡವಾಗಿ ಯೋಚನೆ ಮಾಡುವಂತೆ ಮಾಡುತ್ತದೆ ಮತ್ತು ಕೆಲವೊಮ್ಮೆ ನನ್ನ ನಿರ್ಧಾರಗಳ ಬಗ್ಗೆನೇ ನಾನು ಮರುಚಿಂತನೆ ಮಾಡೋ ರೀತಿ ಮಾಡುತ್ತದೆ”.

“ಅವರನ್ನು ಸ್ಕ್ರೀನ್ ಮೇಲೆ ನೋಡಿದಾಗ ಒಂದು ವಿಷಯ ಅನಿಸುತ್ತೆ, ಅವರ ನಟನೆಯ ಜಾಣ್ಮೆ ಇರೋದೇ ಆ ಮೌನದಲ್ಲಿ,ಅವರು ಸುಮ್ಮನೆ ಕೂತು ಜರ್ನಲ್ ಬರೆಯೋದನ್ನ ನಾನು ಗಮನಿಸಿದ್ದೀನಿ. ಸೆಟ್‌ನಲ್ಲಿ ನಡೆಯೋ ಸಣ್ಣ ಪುಟ್ಟ ವಿಷಯಗಳನ್ನೆಲ್ಲಾ ಅವರು ಅದರಲ್ಲಿ ಬರೆದಿಡ್ತಾರೆ.ಆ ಕ್ಷಣಗಳೇ ಅವರ ಬಗ್ಗೆ ತುಂಬಾ ವಿಷಯಗಳನ್ನ ಹೇಳುತ್ತವೆ.ಯಾವಾಗ್ಲೂ ತಮ್ಮದೇ ಆದ ಒಂದು ಪ್ರಪಂಚವನ್ನ ಕಟ್ಟಿಕೊಳ್ತಿರ್ತಾರೆ.ಅವರ ಈ ಆಲೋಚನಾ ರೀತಿ ನನಗೆ ತುಂಬಾ ಇಷ್ಟ. ನಿಜ ಹೇಳ್ಬೇಕಂದ್ರೆ, ಆ ಪಾತ್ರದ ಹಿಂದಿರೋ ಅವರ ಆ ಅಲೋಚನೆಗಳನ್ನ ತಿಳ್ಕೊಳ್ಳೋಕೆ, ಆ ಡೈರಿಯ ಪುಟಗಳನ್ನ ಕದ್ದು ಓದಬೇಕು ಅಂತ ನನಗನ್ನಿಸುತ್ತೆ.ಐ ಲವ್‌ ಯೂ ರುಕ್ಮಿಣಿ ವಸಂತ್‌” ಎಂದು ಬರೆದು ಪೋಸ್ಟ್‌ ಹಾಕಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *