ಬಿಗ್ ಮನೆಯಲ್ಲಿ ನಾಮಿನೇಷನ್ ಕಿಚ್ಚು:ರಾಶಿಕಾ ಶೆಟ್ಟಿ VS ರಕ್ಷಿತಾ ಶೆಟ್ಟಿ
ಬಿಗ್ ಮನೆ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಫಿನಾಲೆ ಹತ್ರ ಬರೋ ಹೊತ್ತಿಗೆ ಮನೆಯಲ್ಲಿ ನಾಮಿನೇಷನ್ ಭೂತ ಎಲ್ಲರಿಗೂ ಕಾಡ್ತಿದೆ. ಬಿಗ್ ಬಾಸ್ ಪ್ರತಿ ವಾರ ವಿಭಿನ್ನ ಶೈಲಿಯಲ್ಲಿ ನಾಮಿನೇಷನ್ ಪ್ರಕ್ರಿಯೆಯನ್ನು ಮಾಡುತ್ತೆ. ಈ ವಾರ ಕೂಡ ಸ್ಪರ್ಧಿಗಳಿಗೆ ವಿಶೇಷ ರೀತಿಯ ನಾಮಿನೇಷನ್ ಟಾಸ್ಕ್ ಅನ್ನು ನೀಡಲಾಗಿದೆ.
ನಾಮಿನೇಷನ್ ಪ್ರಕ್ರಿಯೆ
ಟಾಸ್ಕ್ ಪ್ರಕಾರ ತಾವು ಮನೆಯಿಂದ ಆಚೆ ಹಾಕುವ ವ್ಯಕ್ತಿಗಳ ಭಾವಚಿತ್ರವನ್ನು ಚೆಂಡಿನ ಮೇಲೆ ಅಂಟಿಸಿ ನಂತರ ಫುಟ್ಬಾಲ್ ಒದಿಯುವ ರೀತಿ ಚೆಂಡನ್ನು ಮುಖ್ಯ ದ್ವಾರದಿಂದ ಹೊರಗೆ ಕಿಕ್ ಔಟ್ ಮಾಡಬೇಕು.
ರಾಶಿಕ ಶೆಟ್ಟಿ vs ರಕ್ಷಿತಾ ಶೆಟ್ಟಿ
ಇದೆ ಪ್ರಕ್ರಿಯೆಯಲ್ಲಿ ರಾಶಿಕ ಶೆಟ್ಟಿ, ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡುತ್ತಾ “ವಾರ ಪೂರ್ತಿ ಚೆನ್ನಾಗಿ ಮಾತಾಡ್ತಿರ, ವೀಕೆಂಡ್ ಬಂದಾಗ ಮಾತ್ರ ಎನ್ ಮಾತಾಡ್ಬೇಕು ಅಂತ ಗೊತ್ತಾಗಲ್ಲ.ಆಚೆ ಕಡೆನೂ ಗೊತ್ತಾಗಿದೆ, ನಮ್ಮ ಮನೆಯವರಿಗೂ ಗೊತ್ತಾಗಿದೆ, ನೀವು ಎಷ್ಟು ಮ್ಯಾನ್ಯುಪಿಲೇಟಿವ್ ಅಂತ” ಎಂದು ಖಡಕ್ ಆಗಿ ಹೇಳಿದರು. ಇದಕ್ಕೆ ರಕ್ಷಿತಾ ಅವರು “ನಿಮ್ ಫ್ಯಾಮಿಲಿ ಇದನ್ನು ನಿಮಗೆ ಹೇಳಿ ಕೊಟ್ರ?” ಎಂದು ಕೇಳಿದ ತಕ್ಷಣ ರಾಶಿಕ ಚೆಂಡನ್ನು ಕೆಳಕ್ಕೆ ಬಿಸಾಕಿ ನನ್ನ ಫ್ಯಾಮಿಲಿ ಬಗ್ಗೆ ಮಾತಾಡ್ಬೇಡ ಎಂದು ರೊಚ್ಚಿಗೆದ್ದಿದ್ದಾರೆ. ಈ ಕಿತ್ತಾಟ ಎಲ್ಲಿಗೆ ಹೋಗಿ ತಲುಪುತ್ತೆ, ನಿಜವಾಗಿಯೂ ಇಲ್ಲಿ ಯಾರ ತಪ್ಪು ಏನು? ಅನ್ನೋದನ್ನ ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.