new updates News ಪಿಚ್ಚರ್ stories ಪಿಚ್ಚರ್ UPDATE

ದರ್ಶನ್ ನಟನೆಯ ಡೆವಿಲ್ ಗೆ 25ರ ಸಂಭ್ರಮ.. ನಿಮ್ಮ ಪ್ರೀತಿಯೆ ನನ್ನ ಶಕ್ತಿ

ದರ್ಶನ್ ನಟನೆಯ ಡೆವಿಲ್ ಗೆ 25ರ ಸಂಭ್ರಮ.. ನಿಮ್ಮ ಪ್ರೀತಿಯೆ ನನ್ನ ಶಕ್ತಿ
  • PublishedJanuary 4, 2026


ದರ್ಶನ್ ನಟನೆಯ ಡೆವಿಲ್ ಸಿನಿಮಾ ಭರ್ಜರಿಯಾಗಿ 25 ದಿನ ಪೂರೈಸಿದೆ.. ಪೈರಸಿ ಅಬ್ಬರದ ಮಧ್ಯೆಯೂ ಡೆವಿಲ್ ಸಕ್ಸಸ್ ಫುಲ್ಲಿ 50 ಕೋಟಿ ದೋಚಿದೆ.. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡೆವಿಲ್ ಸಿನಿಮಾ ನೋಡಲು ಇಂದಿಗೂ ಫ್ಯಾನ್ಸ್ ಹಾತೋರೆಯುತ್ತಿದ್ದಾರೆ..

ಹೌದು.. ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳಿದ ಡೆವಿಲ್ ಸಿನಿಮಾಕ್ಕೆ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಗೆ ನಾಯಕಿಯಾಗಿ ರಚನಾ ಹೆಜ್ಜೆ ಹಾಕಿದ್ರು.. ರಿಲೀಸ್ ಆದ ದಿನವೇ 14 ಕೋಟಿ ಗಳಿಕೆ ಕಂಡು ಡೆವಿಲ್ ಗೆದ್ದು ಬೀಗಿತ್ತು.. ಸಿನಿಮಾ ನೋಡೋರ ಸಂಖ್ಯೆ ಕಡಿಮೆ ಆಗ್ತೀದೆ ಅನ್ನೋ ಅಷ್ಟರಲ್ಲಿ ಡೆವಿಲ್ ಸಿನಿಮಾ ನೋಡಲು ಫ್ಯಾನ್ಸ್ ಥಿಯೇಟರ್ ಕಡೆ ಮುಖ ಮಾಡಿದ್ರು..
ಅಂದಹಾಗೆ.. ಧುರಂಧರ್, ‘
ಅಖಂಡ- 2, ಮಾರ್ಕ್, 45 ಚಿತ್ರಗಳ ಆರ್ಭಟ ಕೂಡ ಹೆಚ್ಚಾಗಿದ್ರಿಂದ
ಡೆವಿಲ್ ಹಿನ್ನಡೆ ಆಗಬಹುಗುದು ಅಂತ ಸಿನಿಮಾ ಪಂಡಿತರು ಅಂದಾಜು ಮಾಡಿದ್ರು ಬಟ್ ಸಿನಿಮಾ ಪ್ರೇಕ್ಷಕರನ್ನ ತನ್ನತ್ತ ಸೆಳೆದಿದೆ ಡೆವಿಲ್..

ಇನ್ನೂ.. ಸ್ಟಾರ್ ವಾರ್, ಫ್ಯಾನ್ಸ್ ವಾರ್, ಪೈರಸಿ ನಡುವೆಯೂ ಸಿನಿಮಾ 25 ದಿನಕ್ಕೆ ಕಾಲಿಟ್ಟಿದೆ.. ಕನ್ನಡದ ಬೇರೆ ಬೇರೆ ಸಿನಿಮಾ ಬಿಡುಗಡೆಯಾಗಿದ್ರು ಕೂಡ ಡೆವಿಲ್ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರೋದು ಮಾತ್ರ ಡಿಫ್ಯಾನ್ಸ್ ಗೆ ಸಂತಸತಂದುಕೊಟ್ಟಿದೆ.. ಒಟ್ನಲ್ಲಿ.. ದರ್ಶನ್ ಇನ್ಸ್ಟಾ ಮೂಲಕ ತನ್ನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ..

Written By
Kannada Picchar

Leave a Reply

Your email address will not be published. Required fields are marked *