ಅಪ್ಪು ಆಕಾಶ್ ರೀ-ರಿಲೀಸ್
ಮಾರ್ಚ್ 13 ರಂದು ಒವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿರುವ ಆಕಾಶ್ ಸಿನಿಮಾ ರೀ-ರಿಲೀಸ್ ಆಗುತ್ತಿದೆ.ಈ ವಿಷಯವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪು ಹಾಗೂ ರಮ್ಯಾ ಅಭಿನಯದ ಆಕಾಶ್ ಸಿನಿಮಾವು ಪುನೀತ್ ಅವರ ಜನ್ಮ ದಿನದ ಅಂಗವಾಗಿ ಬಿಡುಗಡೆಯಾಗುತ್ತಿದೆ.ಪುನೀತ್ ಅವರು ಮಾರ್ಚ್ 17 ರಂದು ಹುಟ್ಟಿದರು ಆದರೆ 4 ದಿನ ಮುಂಚಿತವಾಗಿ ಬಿಡುಗಡೆಗೊಳ್ಳಲಿದೆ.ಈ ಸಿನಿಮಾವನ್ನುಮಹೇಶ್ ಬಾಬು ನಿರ್ದೇಶಿಸಿದ್ದು 2005 ರಲ್ಲಿ ತೆರೆ ಕಂಡಿತ್ತು.ಈಗ ರೀ-ರಿಲೀಸ್ ಆಗುವ ಸುದ್ದಿ ಕೇಳಿ ಅಪ್ಪು ಅಭಿಮಾನಿಗಳು ಖುಷಿ ಆಗಿದ್ದಾರೆ.