new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಟಾಕ್ಸಿಕ್ ಚಿತ್ರತಂಡದಿಂದ ಬಿಗ್ ಅಪ್ಡೇಟ್

ಟಾಕ್ಸಿಕ್ ಚಿತ್ರತಂಡದಿಂದ  ಬಿಗ್  ಅಪ್ಡೇಟ್
  • PublishedJanuary 3, 2026

ಟಾಕ್ಸಿಕ್ ಸಿನಿಮಾದ ಮತ್ತೊಂದು ಬ್ರೇಕಿಂಗ್ ಅಪ್ಡೇಟ್ ಈಗ ಚಿತ್ರ ತಂಡ ಬಿಟ್ಟಿದೆ. ಇದಾಗಲೇ ಕಿಯಾರ ಅಡ್ವಾಣಿ, ಹುಮ ಖುರೇಶಿ, ನಯನ ತಾರ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದ ಟಾಕ್ಸಿಕ್ ಫಿಲಂ ತಂಡ. ಇಂದು ತಾರ ಸುತೈರ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ತಾರ ಸುತೈರ ಅವರು ರೆಬೆಕ ಅನ್ನೋ ಪಾತ್ರದಲ್ಲಿ ಕಾಣಲಿದ್ದು, ಅವರ ಪೋಸ್ಟರ್ ಪ್ರಕಾರ ತಾರ ಆಕ್ಷನ್ ಸಿಕ್ವೆನ್ಸ್ ನಲ್ಲಿ ಕಾಣಬಹುದು ಎನ್ನುವ ಹಿಂಟ್ ಸಿಕ್ಕಿದೆ.

ತಾರ ಸುತೈರ ಪೋಸ್ಟರ್ ಬಿಡುಗಡೆಯ ಜೊತೆಗೆ ಅವರ ಬಗ್ಗೆ ತಮ್ಮ ಅನಿಸಿಕೆ ತಿಳಿಸಿರುವ ಗೀತು ಮೋಹನ್ ದಾಸ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಯಲ್ಲಿ ​ನಂಗೆ ಯಾಕೋ ತಾರಾ ಕಂಡ್ರೆ ಫಸ್ಟ್ ಇಂದಾನೂ ಪ್ರೊಟೆಕ್ಟಿವ್ ಫೀಲಿಂಗ್. ಅವಳು ಸ್ವಲ್ಪ ರಿಸರ್ವ್ಡ್ ಇರೋದಕ್ಕೆ ಇರಬಹುದು ಅಥವಾ ಅದು ಅವಳ ಕಂಫರ್ಟ್ ಜೋನ್ ಇರಬಹುದು, ಬಟ್ ಅದನ್ನ ಹೀಗೆ ಅಂತ ಹೇಳೋಕೆ ಆಗಲ್ಲ.

ನಂಗೆ ಸ್ಟಾರ್ಟಿಂಗ್‌ ನಲ್ಲೇ ಒಂದು ವಿಷಯ ಕ್ಲಿಯರ್ ಆಗಿ ಅರ್ಥ ಆಗಿತ್ತು.ಅವಳನ್ನು ಫೋರ್ಸ್ ಮಾಡಬಾರದು, ಸುಮ್ನೆ ಅವಳ ಪಾಡಿಗೆ ಅವಳನ್ನ ಇರೋಕೆ ಬಿಡಬೇಕು ಅಂತ. ಅದಕ್ಕೇ ನಮ್ಮಿಬ್ಬರ ಈಕ್ವೇಶನ್ ಇಷ್ಟು ಸ್ಮೂತ್ ಮತ್ತು ಪ್ರೊಫೆಷನಲ್ ಆಗಿ ಅಂಡ್ ಪರ್ಫೆಕ್ಟ್ ಆಗಿ ಸೆಟ್ ಆಯ್ತು. ಅವಳು ಮಾತಾಡೋದಕ್ಕಿಂತ ಜಾಸ್ತಿ ಗಮನಿಸಿತಿದ್ಲು. ಎಲ್ಲವನ್ನೂ ಕೇಳಿಸಿಕೊಳ್ತಿದ್ಳು. ನಾನೇನಾದ್ರೂ ಇನ್ನು ಸ್ವಲ್ಪ ಗೈಡ್ ಮಾಡ್ಬೇಕಿತ್ತಾ ಅಂತ ನನಗೂ ಆಗಾಗ ಅನ್ನಿಸ್ತಿತ್ತು.

ಆದ್ರೆ ಅವಳ ಆ ಸೈಲೆನ್ಸ್ ಹಿಂದೆ ಏನೋ ದೊಡ್ಡ ಸರ್ಪ್ರೈಸ್ ಕಾಯ್ತಿತ್ತು. ಯಾವಾಗ ಅವಳು ಆಕ್ಟ್ ಮಾಡೋಕೆ ಶುರು ಮಾಡಿದ್ಲೋ, ನಾನಂತೂ ಫುಲ್ ಫಿದಾ ಆಗ್ಬಿಟ್ಟೆ. ಅವಳು ಆ ಲೆವೆಲ್ ಗೆ ಪರ್ಫಾರ್ಮ್ ಮಾಡ್ತಾಳೆ ಅಂತ ಅನ್ಕೊಂಡಿರಲಿಲ್ಲ. ಆ ಒಂದು ಮೆಚುರಿಟಿ ಅವಳಲ್ಲಿ ಮೊದಲಿಂದ ಇತ್ತು ಅಂತ ಅವಾಗ ಅರ್ಥ ಆಯ್ತು. ಅವಳು ನನಗಂತೂ ದೊಡ್ಡ ಸರ್‌ಪ್ರೈಸ್ ಕೊಟ್ಟಿದ್ದಾಳೆ. ಡೆಫಿನೆಟ್ ಆಗಿ ಹೇಳ್ತೀನಿ, ಅವಳು ನಿಮ್ಮೆಲ್ಲರಿಗೂ ಇದೇ ತರ ಸರ್‌ಪ್ರೈಸ್ ಕೊಡೋದು ಗ್ಯಾರಂಟಿ.ತಾರ ಸುತೈರಾ ಐ ಲವ್ ಯೂ ಎಂದು ಬರೆದು ಸ್ಟೋರಿ ಹಾಕಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *