ಕಿಚ್ಚನ ಪಂಚಾಯ್ತಿ : ಯಾರಿಗಿದೆ ಕ್ಲಾಸ್?
ಬಿಗ್ ಬಾಸ್ ಅಭಿಮಾನಿಗಳು ಕುತೂಹಲದಿಂದ ಕಾಯುವುದು ಶನಿವಾರ ಹಾಗೂ ಭಾನುವಾರದ ಎಪಿಸೋಡ್ ಗೆ. ವೀಕೆಂಡ್ ಬಂದ್ರೆ ಸಾಕು ಕಿಚ್ಚ ಯಾರಿಗೆ ಕ್ಲಾಸ್ ತೊಗೊಳ್ತಾರೆ? ಯಾರಿಗೆ ಕಿಚ್ಚನ ಚಪ್ಪಾಳೆ ದೊರೆಯುತ್ತೆ ಅನ್ನೋದನ್ನ ನೋಡೋಕೆ ಎಲ್ಲರೂ ಕಾಯ್ತಿರ್ತಾರೆ.
ಇದರ ಜೊತೆಗೆ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದೆ.ಮಾಹಿತಿಗಳ ಪ್ರಕಾರ ನೆಕ್ಸ್ಟ್ ವೀಕ್ ಫಿನಾಲೆ ಆಗಿರುವುದರಿಂದ ಇವತ್ತಿನ ವಾರದ ಕಥೆ ಪ್ರತಿ ಸ್ಪರ್ದಿಗಳಿಗೂ ದೊಡ್ಡ ದಿನವಾಗಿದೆ.ಹಾಗಾದ್ರೆ ಈ ಕಿಚ್ಚನ ಈ ಸೀಸನ್ ನ ಕೊನೆಯ ವಾರದ ಕಥೆಯಲ್ಲಿ ಯಾವೆಲ್ಲ ವಿಚಾರದ ಬಗ್ಗೆ ಕಿಚ್ಚ ಮಾತಾಡಬಹುದು ಎನ್ನುವುದನ್ನು ನೋಡ್ತಾ ಹೋಗೋಣ…
ಕಿಚ್ಚ ಕಳೆದ ವಾರ ಮಾರ್ಕ್ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದರಿಂದ ಕಳೆದ ವಾರ ಹಾಗೂ ಈ ವೀಕ್ ನ ಒಟ್ಟು ಲೆಕ್ಕಾಚಾರ, ತಪ್ಪು ಒಪ್ಪುಗಳ ಬಗ್ಗೆ ಮನೆಯವರ ಜೊತೆ ಚರ್ಚೆ ಮಾಡಬಹುದು.ಮೊದಲನೆಯದಾಗಿ ಕಳೆದ ವೀಕ್ ಫ್ಯಾಮಿಲಿ ವೀಕ್ ಆಗಿದ್ದರಿಂದ, ಕಾವ್ಯ ಶೈವ ಅವರ ಕುಟುಂಬ ಮಾಡಿದ ಬಿಗ್ ಬಾಸ್ ನ ನಿಯಮ ಉಲ್ಲಂಘನೆ ಬಗ್ಗೆ ಮಾತಾಡಬಹುದು.ಜೊತೆಗೆ ಗಿಲ್ಲಿ vs ಅಶ್ವಿನಿ ಗೌಡ ಅವರ ಕಿತ್ತಾಟ ಮತ್ತೆ ಶುರುವಾಗಿರುವುದರಿಂದ ಯೋಗ್ಯತೆ ವಾರ್ ಮತ್ತೆ ಹೀರೋ ಜೋಕರ್ ವಿಷ್ಯದ ಬಗ್ಗೆ ಚರ್ಚೆ ಮಾಡಬೇಕು ಅನ್ನೋದು ಬಿಗ್ ಬಾಸ್ ನೋಡೋ ಜನರ ಅಭಿಪ್ರಾಯ.ಇದೆಲ್ಲದಕ್ಕಿಂತ ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್ ಬಗ್ಗೆನು ಕಿಚ್ಚನ ಕ್ಲಾಸ್ ಇರ್ಬೋದು. ಕೊನೆಯದಾಗಿ ಈ ವರ್ಷ ತುಂಬಾ ಚರ್ಚೆಗೆ ಬಂದ ವಿಷ್ಯ ಅಂದ್ರೆ ಉಸ್ತುವಾರಿ ಸರಿ ಮಾಡ್ತಿಲ್ಲ ಅನ್ನೋದು, ಹಾಗಾಗಿ ಉಸ್ತುವಾರಿ ಬಗ್ಗೆ ಪಕ್ಕ ಕ್ಲಾಸ್ ತೊಗೋಬೇಕು ಅಂತ ಅಂತಿದ್ದಾರೆ ಬಿಗ್ ಮನೆಯ ಆಡಿಯೆನ್ಸ್.
ಮುಂದಿನ ವಾರ ಫಿನಾಲೆ ಇರೋದ್ರಿಂದ ಇವತ್ತು ಸುದೀಪ್ ಅವರು ಸ್ಪರ್ಧಿಗಳಿಗೆ ಅವರು ಎಲ್ಲಿ ಎಡವುತ್ತಿದ್ದಾರೆ ಎನ್ನುವುದನ್ನು ಸಂಕ್ಷಿಪ್ತವಾಗಿ ಮನವರಿಕೆ ಮಾಡಿ ಕೊನೆಯ ಹಂತದಲ್ಲಿ ಗೆಲುವಿನತ್ತ ಸಾಗಲು ಬೂಸ್ಟ್ ಮಾಡುತ್ತಾರೆ.
ಇಂದು ಕನ್ನಡದ ಬಾದ್‌ಷಾ ಕಿಚ್ಚ ಸುದೀಪ್ ಅವರು ಯಾರಿಗೆ ಎನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.