ಬರ್ತಿದೆ ʼಕಲ್ಟ್ʼಸಿನಮಾ ಹೊಸ ಸಾಂಗ್
ಕಲ್ಟ್ 2026ರ ಬಹು ನಿರೀಕ್ಷಿತ ಸಿನಮಾಗಳಲ್ಲಿ ಒಂದು.ಸಚಿವ ಜಮೀರ್ ಅಹಮದ್ ಅವರ ಮಗ ಝೈದ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾದಲ್ಲಿ ರಚಿತಾ ರಾಮ್ ಹಾಗು ಮಲೈಕಾ ವಸುಪಾಲ್ ನಾಯಕಿಯರ ಕಾಣಿಸಿಕೊಳಲ್ಲಿದ್ದಾರೆ.ಸಿನಿಮಾವು 2026 ರ ಜನವರಿ 23 ರಂದು ತೆರೆ ಮೇಲೆ ಬರಲು ಸಿದ್ದವಾಗಿದೆ.ಇದೀಗ ಚಿತ್ರತಂಡವು ಹೊಸ ವರ್ಷದ ಸಲುವಾಗಿ ಸರ್ಪ್ರೈಸ್ ಒಂದನ್ನು ಸಿನಿ ಪ್ರಿಯರಿಗೆ ನೀಡಿದೆ.
ಇಗಾಗಲೆ ಕಲ್ಟ್ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು.ಇದೀಗ ಅಯ್ಯೋ ಶಿವನೇ ಹಾಗು ಪ್ಯಾತೋ ಸಾಂಗ್ ಹಾಡಿನ ನಂತರ ಸಿನಿಮಾ ತಂಡ ಮತ್ತೊಂದು ಹಾಡಿನ ರಿಲೀಸ್ ದಿನಾಂಕವನ್ನು ಘೋಷಿಸಿದೆ.ಜನವರಿ 4 ರಂದು ಆನಂದ್ ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬೆಳಗ್ಗೆ 10.10 ಕ್ಕೆ ಹೃದಯವು ಕೇಳದೆ ಹಾಡು ರಿಲೀಸ್ ಆಗಲಿದೆ.