2025ರಲ್ಲಿ ಕನ್ನಡ ಚಿತ್ರರಂಗ ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ವಿಭಿನ್ನ ಕಥಾಹಂದರ, ಹೊಸ ಪ್ರಯೋಗಗಳು ಮತ್ತು ಭರ್ಜರಿ ಮೇಕಿಂಗ್‌ನಿಂದ ಸ್ಯಾಂಡಲ್‌ವುಡ್ ನಾ ಈ ವರ್ಷ 2025ರ ಹಿಟ್ ಕನ್ನಡ ಸಿನಿಮಾಗಳ ಪಟ್ಟಿ .


ಚೂಮಂತರ್

ಜನವರಿ 10ರಲ್ಲಿ ತೆರೆ ಗೆ ಬಂದ ಈ ಸಿನಿಮಾವನ್ನು ನವನೀತ್ ನವ್ರು ನಿರ್ದೇಶನ ಮಾಡಿದರು.ಈ ಸಿನಿಮಾದಲ್ಲಿ ನಟ ಶರಣ್, ಹಾಗೂ ಚಿಕ್ಕಣ್ಣಅವರ ಕಾಮಿಡಿ ಕಿಕ್ ಜನರಿಗೆ ಇಷ್ಟ ಆಗಿತ್ತು.ಹಾರರ್ ಯೂನಿವರ್ಸ್ ಹಿನ್ನೆಲೆಯ ಈ ಸಿನಿಮಾ ಭಯ, ನಗು ಮತ್ತು ನಲಿವನ್ನು ಒಟ್ಟುಗೂಡಿಸಿದೆ. ಅಸಾಧಾರಣ ಘಟನೆಗಳ ನಡುವೆ ಸಾಗುವ ಕಥೆ ಪ್ರೇಕ್ಷಕರಿಗೆ ಹೊಸ ರೀತಿಯ ಹಾರರ್ ಎಂಟರ್ಟೈನ್ಮೆಂಟ್ ಅನುಭವ ನೀಡಿ ಜನರಿಂದ ಭರ್ಜರಿ ಮೆಚ್ಚುಗೆ ಪಡೆದು ಹಿಟ್ ಸಿನಿಮಾ ಆಯಿತು.

ಫಾರೆಸ್ಟ್

ಫಾರೆಸ್ಟ್ ಸಿನಿಮಾವನ್ನು ಚಂದ್ರಮೋಹನ್ ನಿರ್ದೇಶನ ಮಾಡಿದರು.
ಚಿಕ್ಕಣ್ಣ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅನಿಶ್, ರಂಗಾಯಣ ರಘು, ಅರ್ಚನಾ ಮುಂತಾದವರು ನಟಿಸಿದ್ದಾರೆ.ಕಾಮಿಡಿ–ಥ್ರಿಲ್ಲರ್ ಶೈಲಿಯ ಈ ಸಿನಿಮಾ ತಾತನ ನಿಧಿ ಹುಡುಕುವ ಸಾಹಸ ಕಥೆ. ಹಾಸ್ಯ, ಥ್ರಿಲ್ ಮತ್ತು ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರಿಗೆ ಒಳ್ಳೆಯ ಕಿಕ್ ನೀಡಿದವು ಫ್ಯಾಮಿಲಿ ಆಡಿಯನ್ಸ್‌ಗೂ ಫೇವರಿಟ್ ಆಯಿತು.

ಮನದ ಕಡಲು

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಸಮ್ಯುಕ್ತಾ, ರಾಶಿಕ ಶೆಟ್ಟಿ, ರಂಗಾಯಣ ರಘು ಹಲವರು ನಟಿಸಿದ್ದು‘ಮುಂಗಾರು ಮಳೆ’ ಫ್ಲೇವರ್ ಇರುವ ರೊಮ್ಯಾಂಟಿಕ್ ಡ್ರಾಮಾ. MBBS ಹುಡುಗ ಮತ್ತು ಕ್ರಿಕೆಟರ್ ಹುಡುಗಿ ನಡುವಿನ ಪ್ರೇಮಕಥೆ ಯೂತ್‌ಫುಲ್ ಎಂಟರ್ಟೈನರ್ ಆಗಿ ಪ್ರೇಕ್ಷಕರ ಮನ ಸೆಳೆದು ಹಿಟ್ ಲಿಸ್ಟ್ ಸೇರಿತ್ತು

ಯುದ್ಧಕಾಂಡ 2

ನಟ ಅಜಯ್ ರಾವ್ ಮೊದಲನೇ ಬಾರಿಗೆ ಪ್ರೊಡ್ಯೂಸ್ ಮಾಡಿದ ಸಿನಿಮಾ ಇದಾಗಿದ್ದು,ಕೋರ್ಟ್ ಡ್ರಾಮಾ ಶೈಲಿಯ ಈ ಸಿನಿಮಾ ಸಣ್ಣ ಕೇಸ್‌ನಿಂದ ಆರಂಭಿಸಿ ಗಂಭೀರ ಪ್ರಕರಣದ ತನಿಖೆಯವರೆಗೆ ಸಾಗುತ್ತದೆ. ಸಂವೇದನಾಶೀಲ ವಿಷಯವನ್ನು ಜನಪ್ರಿಯ ರೀತಿಯಲ್ಲಿ ತೋರಿಸಿದ ಚಿತ್ರ. ಅಜಯ್ ರಾವ್ ಅವರ ಸ್ಕ್ರೀನ್ ಪ್ರೆಸೆನ್ಸ್ ಜನರಿಗೆ ತುಂಬಾ ಇಷ್ಟವಾಯಿತು.ಸಿನಿಮಾ ಹಿಟ್ ಆಗಿದೆ.

ಏಳು ಮಲೆ

2025ರಲ್ಲಿ ಹಿಟ್ ಆಗಿರೋ ಮತ್ತೊಂದು ಸಿನಿಮಾ ಎಂದರೆ ಏಳು ಮಲೆ ಸಿನಿಮಾ ರಕ್ಷಿತಾ ಅವರ ತಮ್ಮ ರಾಣಾ ಹಾಗೂ ಮಹಾನಟಿ ವಿನ್ನರ್ ಪ್ರಿಯಾಂಕಾ ಅವ್ರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಅದರ ಕಥೆ ಹಾಗೂ ನಟನೆಗೆ ಭಾರಿ ಪ್ರಶಂಸೆ ಪಡೆದು 2025 ರ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿತು

ಮಾದೇವ

ವಿನೋದ್ ಪ್ರಭಾಕರ್, ಸೋನಲ್ ಮೊಂತೇರಾ ನಟಿಸಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಮಿಂಚಿದರು. ಜೈಲಿನಲ್ಲಿ ಕೆಲಸ ಮಾಡುವ ಯುವಕನ ಜೀವನ ಮತ್ತು ಲವ್ ಡ್ರಾಮಾ ಕಥೆ ಇದಾಗಿದ್ದು,ವಿನೋದ್ ಪ್ರಭಾಕರ್ ಅವರ ಪರ್ಫಾರ್ಮೆನ್ಸ್ ಸಿನಿಮಾಕ್ಕೆ ಜೀವ ತುಂಬಿತು. ಸೀರಿಯಸ್ ಆಡಿಯನ್ಸ್‌ಗೆ ಮೆಚ್ಚುಗೆ ಪಡೆದು ಹಿಟ್‌ ಲಿಸ್ಟ್‌ ಸೇರಿತು.

ಎಕ್ಕ


ದೊಡ್ಮನೆ ಕುಡಿ ಯುವ ನಾಯಕನಾಗಿ ನಟಿಸಿದ ಈ ಸಿನಿಮಾ ಸಾಲ ಮಾಡಿ ಬೆಂಗಳೂರಿಗೆ ಬಂದ ಕ್ಯಾಬ್ ಡ್ರೈವರ್‌ನ ಸುತ್ತ ಸುತ್ತುವ ಕಥೆ . ಆಕ್ಷನ್ ಮತ್ತು ಭಾವನಾತ್ಮಕ ಅಂಶಗಳ ತಳಹದಿಯ ಸಿನಿಮಾ ಇದಾಗಿದ್ದು, ಅದ್ಭುತ ಸಂಗೀತ ಮತ್ತು ಹೈ ಆಕ್ಷನ್ ಸೀಕ್ವೆನ್ಸ್‌ಗಳಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಯಿತು.

ಸು ಫ್ರಮ್ ಸೋ
ಜೆಪಿ ತುಮ್ಮಿನಾಡು ಸ್ವತಃ ನಿರ್ದೇಶನ ಮಾಡಿ ನಟಿಸಿರುವ ಸಿನಿಮಾ.ಕರಾವಳಿ ಹಿನ್ನೆಲೆಯ ಕಾಮಿಡಿ ಸಿನಿಮಾ. ಸ್ಥಳೀಯ ಹಾಸ್ಯ ಮತ್ತು ನೈಸರ್ಗಿಕ ಕಥನದಿಂದ ಪ್ರೇಕ್ಷಕರು ಫಿದಾ ಆದರು. 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಕಾಮಿಡಿ ಸಿನಿಮಾ ಎಂದು ದಾಖಲೆ ಬರೆದಿತು. ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಹಿಟ್ ಕೂಡ ಆಯಿತು.

ಮಹಾವತಾರ ನರಸಿಂಹ
ಜೈಪುರ ದಾಸ್ ನಿರ್ದೇಶನದಲ್ಲಿ ಅಶ್ವಿನ್ ಕುಮಾರ್ ಅವರು ಸೇರಿ ಮಾಡಿದ್ದ ಈ ಸಿನಿಮಾ ಭಾರತೀಯ ಪುರಾಣ ಆಧಾರಿತ ಎಪಿಕ್ ಆಕ್ಷನ್ ಅನಿಮೇಟೆಡ್ ಸಿನಿಮಾ. ಮಹಾವತಾರ ಸಿನೆಮಾಟಿಕ್ ಯೂನಿವರ್ಸ್‌ನ ಮೊದಲ ಭಾಗ ಇದಾಗಿದೆ. ಹಿರಣ್ಯಕಶಿಪು ಕಥೆ ಪ್ರೇಕ್ಷಕರಿಗೆ ವಿಸ್ಮಯ ಉಂಟುಮಾಡಿತು. ₹320 ಕೋಟಿ ಕಲೆಕ್ಷನ್ ಮಾಡಿ ಇಂಡಸ್ಟ್ರಿಲಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು.

ಕಾಂತಾರ – ಚಾಪ್ಟರ್ 1
ನಟ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಈ ಸಿನಿಮಾವನ್ನು ಹೊಂಬಳೆ ಫಿಲ್ಮ್ಸ್ ಹೌಸ್ ನಿರ್ಮಾಪಿಸಿತು.
ಪಾನ್–ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆಯ ಸೀಕ್ವೆಲ್ ಇದಾಗಿತ್ತು. ಅದ್ಭುತ ಮೇಕಿಂಗ್ ಮತ್ತು ದೈವಿಕ ಕಥೆಯೊಂದಿಗೆ ₹800 ಕೋಟಿ ಕಲೆಕ್ಷನ್ ಮಾಡಿ ಕನ್ನಡದ ಗರ್ವದ ಸಿನಿಮಾ ಆಯಿತು.

ಡೆವಿಲ್‌

ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಇದಾಗಿತ್ತು. ಡಿಸೆಂಬರ್ 11 ಕ್ಕೆ ಫ್ಯಾನ್ಸ್ ಗಳಿಗೋಸ್ಕರ ಡಿಸೆಂಬರ್ 12 ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಒಂದು ದಿನ ಮುಂಚಿತವಾಗಿ ರಿಲೀಸ್ ಮಾಡಿದ್ರು. ಒಂದು ರೀತಿ ಯಲ್ಲಿ ಫ್ಯಾನ್ಸ್ ಗಳೇ ಪ್ರಚಾರ ಮಾಡಿದಂತಹ ಸಿನಿಮಾ ಇದು. ದರ್ಶನ್ ಅವರ ದ್ವಿ ಪಾತ್ರ ಹಾಗೂ ನಟನೆ ಜನಗಳಿಗೆ ಬಹಳ ಇಷ್ಟವಾಯಿತು. ಇದೀಗ ಇದು ಈ ವರ್ಷದ ಹಿಟ್ ಸಿನಿಮಾಗಳಲ್ಲಿ ಒಂದು.

45

ಮೂರು ನಟರ ಸಮ್ಮಿಲನವೇ ಈ 45 ಒಂದು ಕಡೆ ಶಿವಣ್ಣ ಮತ್ತೊಂದು ಕಡೆ ಉಪ್ಪಿ ದಾದ ಇನ್ನೊಂದು ಕಡೆ ರಾಜ್ ಬಿ ಶೆಟ್ಟಿ. ಸಿನಿಮಾದ ಕಥೆ ಹಾಗೂ ನಟರ ನಟನೆಗೆ ಜನ ಫಿದಾ ಆಗಿದ್ದಾರೆ. ಮೇನ್ ಆಗಿ ಶಿವಣ್ಣ ಅವರ ವಿಭಿನ್ನ ಪಾತ್ರಗಳಿಗೆ ಜನರು ಮನ ಸೋತು ಇದೀಗ ಚಿತ್ರ ಹಿಟ್ ಲಿಸ್ಟ್ ಸೇರಿದೆ.

ಮಾರ್ಕ್

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚನ ಮಾರ್ಕ್ ಚಿತ್ರವು ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಯ ಸ್ವಾಗ್, ಗತ್ತು, ಗಮ್ಮತ್ತು ಜನರಿಗೆ ಸಕ್ಕತ್ ಇಷ್ಟ ಆಗಿ ಸಿನಿಮಾ ಹಿಟ್ ಆಗಿದೆ

ವರ್ಷಾಂತ್ಯದ ಸ್ಪೆಷಲ್ ಹಿಟ್ಸ್ ಅಂತನೇ ಹೇಳಬಹುದು. ವರ್ಷ ಅಂತ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಡೆವಿಲ್’ ಸಿನಿಮಾ ಭರ್ಜರಿ ಹಿಟ್ ಆಗಿ ಥಿಯೇಟರ್‌ಗಳನ್ನು ತುಂಬಿಸಿತು.ಅದೇ ರೀತಿ ಕಿಚ್ಚ ಸುದೀಪ್ ಅವರ ಮಾರ್ಕ್ ಸಿನಿಮಾ,ಶಿವಣ್ಣ – ಉಪೇಂದ್ರ – ರಾಜ್ ಬಿ ಶೆಟ್ಟಿ ಅವರ ‘45’ ಕೂಡ ದೊಡ್ಡ ಹಿಟ್ ಆಗಿ ಕನ್ನಡ ಸಿನಿಪ್ರೇಕ್ಷಕರಿಗೆ ಖುಷಿ ನೀಡಿತು.

ಒಟ್ಟಿನಲ್ಲಿ 2025ಸ್ಟಾರ್ ಸಿನಿಮಾ ಹಿಟ್ ಆದ್ರೆ ಕೆಲ ಸಿನಿಮಾ ಭರವಸೆ ಮೋಡಿಸಿದ್ದು ಖುಷಿ ವಿಚಾರ ‘ಕಾಂತಾರ’ದಿಂದ ‘45’ರವರೆಗೆ ಸ್ಯಾಂಡಲ್‌ವುಡ್‌ಗೆ ಒಂದು ಒಳ್ಳೆ ವರ್ಷವಾಗಿತ್ತು.

Written By
Kannada Picchar

Leave a Reply

Your email address will not be published. Required fields are marked *