new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಲೇಡಿ ಸೂಪರ್‌ ಸ್ಟಾರ್‌ ‌‌ʼಟಾಕ್ಸಿಕ್ʼ ಲುಕ್‌ ರಿಲೀಸ್

ಲೇಡಿ ಸೂಪರ್‌ ಸ್ಟಾರ್‌ ‌‌ʼಟಾಕ್ಸಿಕ್ʼ  ಲುಕ್‌ ರಿಲೀಸ್
  • PublishedDecember 31, 2025

ಯಶ್ ನಟನೆಯ ʼಟಾಕ್ಸಿಕ್ʼ ಫಿಲಂ ಬಗ್ಗೆ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ.ಈ ತಿಂಗಳಲ್ಲಿ ಇಬ್ಬರು ಕಲಾವಿದರ ಫರ್ಸ್ಟ್ ಲುಕ್ ಅನ್ನು ಚಿತ್ರ ತಂಡ ರಿಲೀಸ್ ಮಾಡಿತ್ತು. ಇಂದು 2025 ರ ಕೊನೆಯ ದಿನದಂದು ನಯನ ತಾರ ಅವರ ಪೋಸ್ಟರ್ ಹಾಗೂ ಪಾತ್ರದ ಹೆಸರನ್ನು ಚಿತ್ರ ತಂಡ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

ನಯನ ತಾರ ಟಾಕ್ಸಿಕ್ ಚಿತ್ರದಲ್ಲಿ ಗಂಗಾ ಪಾತ್ರದಲ್ಲಿ ಮಿಂಚಲಿದ್ದು,ಪೋಸ್ಟರ್ ನಲ್ಲಿ ನಯನ ತಾರ ಅವರು ಬ್ಲಾಕ್ ಡ್ರೆಸ್ ನಲ್ಲಿ ಸಕತ್ ಬೋಲ್ಡ್ ಆಗಿ ಕಾಣುತ್ತಿದ್ದು ನಯನತಾರ ಅವರು ಕ್ಯಾಸಿನೋದ ಪ್ರವೇಶ ದ್ವಾರದಲ್ಲಿ ಗನ್ ಹಿಡಿದು ನಿಂತಿದ್ದಾರೆ.ನಯನತಾರಾ ಅವರ ಈ ಪವರ್‌ಫುಲ್ ವೈಬ್ ನೋಡಿದ ಅಭಿಮಾನಿಗಳು, ಅವರು ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಹಾಗೂ ಖಡಕ್ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಈ ತಿಂಗಳಲ್ಲೇ ಚಿತ್ರತಂಡ ಮೂವರು ಕಲಾವಿದರ ಲುಕ್ ಬಿಡುಗಡೆ ಮಾಡಿರುವುದು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.


Written By
Kannada Picchar

Leave a Reply

Your email address will not be published. Required fields are marked *