new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರಕ್ಕಸಪುರದೊಳ್ ಟೀಸರ್ ಗೆ ಸಿನಿ ಪ್ರಿಯರು ಫಿದಾ

ರಕ್ಕಸಪುರದೊಳ್ ಟೀಸರ್ ಗೆ ಸಿನಿ ಪ್ರಿಯರು ಫಿದಾ
  • PublishedDecember 30, 2025

ಒಂದು ಮೊಟ್ಟೆಯ ಕಥೆ ಇಂದ ಶುರುವಾಗಿ ಸು ಫ್ರಮ್ ಸೊ, 45 ಚಿತ್ರಗಳಲ್ಲಿ ತಮ್ಮ ಪ್ರತಿಭೆಯಿಂದ ಜನರ ಮನ ಗೆದ್ದ ನಟ ರಾಜ್ ಬಿ.ಶೆಟ್ಟಿ. ಇದೀಗ ಇವರ ನಟನೆಯ ‘ರಕ್ಕಸಪುರದೊಳ್’ ಚಿತ್ರವನ್ನ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಇನ್ನು ನಿನ್ನೆ ಈ ಸಿನಿಮಾದ ಟೀಸರ್ ಆನಂದ್ ಆಡಿಯೋ ಯೌಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದ್ದು, ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಇದು ಒಂದು ಕ್ರೈಂ ಥ್ರಿಲರ್ ಸಿನಿಮಾ ಆಗಿದೆ. ಮನುಷ್ಯನ ಮನದೊಳಗೆ ಎರಡು ರೀತಿಯ ಆಲೋಚನೆ ಇರುತ್ತೆ. ಅದುವೇ ಒಳ್ಳೇದು ಮತ್ತು ಕೆಟ್ಟದ್ದು. ಈ ಸಿನಿಮಾದಲ್ಲಿ ಕೆಟ್ಟ ರಕ್ಕಸನನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಈ ಚಿತ್ರ ಹೇಳುತ್ತದೆ.

ಇನ್ನು ಟೀಸರ್ ನಲ್ಲಿ ಪ್ರಕೃತಿಯ ಸೊಬಗನ್ನು ಬಲು ಅಂದವಾಗಿ ತೋರಿಸಿದ್ದಾರೆ.ಹಚ್ಚ ಹಸುರಿನ ಮಧ್ಯೆ ಇರುವ ಊರಿನಲ್ಲಿ ಟೀಸರ್ ಶುರುವಾಗುತ್ತದೆ. ಟೀಸರ್ ನಲ್ಲಿ ತೋರಿಸಿರುವ ಪ್ರಕಾರ ಸಾವು- ನೋವು ಜೊತೆಗೆ ಮಾಟ – ಮಂತ್ರ ಈ ಎಲ್ಲಾ ಅಂಶಗಳನ್ನು ನೋಡಬಹುದು. ಇದೆಲ್ಲದಕ್ಕಿಂತ ರಾಜ್ ಬಿ ಶೆಟ್ಟಿ ಯವರನ್ನ ನಾವು ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಬಹುದು.ಇನ್ನು ಚಿತ್ರದ ಟೀಸರ್ ಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಸಿನಿಮಾ 2026 ರ ಫೆಬ್ರವರಿ 6 ರಂದು ತೆರೆ ಕಾಣುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *