ʼರಕ್ಕಸಪುರದೊಳ್ʼ ಟೀಸರ್ ಇಂದು ರಿಲೀಸ್!
ರಾಜ್ ಬಿ ಶೆಟ್ಟಿ ಯವರ ಬಹು ನಿರೀಕ್ಷಿತ ಸಿನಿಮಾ ʼರಕ್ಕಸಪುರದೊಳ್ʼ. ಈ ಸಿನಿಮಾವನ್ನು ರವಿ ಸಾರಂಗ್ ಅವರು ನಿರ್ದೇಶಿಸಿದ್ದಾರೆ.ಇದೀಗ ಚಿತ್ರತಂಡವು ಸಿನಿಮಾದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯವರ ಪಾತ್ರವನ್ನು ಕಾಣಲು ಸಿನಿ ಪ್ರಿಯರು ಕಾಯುತ್ತಿದ್ದಾರೆ. ಚಿತ್ರದ ಕಥೆ ಏನಿರಬಹುದು ಎಂಬ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಮೂಲ ಕಾರಣ ರಾಜ್ ಬಿ ಶೆಟ್ಟಿ ಅವರು. ಯಾಕಂದ್ರೆ ಪ್ರತಿ ಬಾರಿ ಹೊಸ ಹೊಸ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ.
ಇನ್ನು ಟೀಸರ್ ಅನಂದ್ ಆಡಿಯೋ ಯೌಟ್ಯೂಬ್ ಚಾನಲ್ ನಲ್ಲಿ ಸಂಜೆ 6.03 ಕ್ಕೆ ರಿಲೀಸ್ ಆಗಲಿದೆ. ಚಿತ್ರದ ಟೀಸರ್ ಗಾಗಿ ರಾಜ್ ಅಭಿಮಾನಿಗಳು ಕಾಯುತ್ತಿದ್ದಾರೆ.