ಇಂಗ್ಲೆಂಡ್ ನ ಸೆವೆನ್ ಸಿಸ್ಟರ್ಸ್ ಕ್ಲಿಫ್ಸ್ ನಲ್ಲಿ ಅಪ್ಪು ಪುತ್ರಿ!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುತ್ರಿ ಧೃತಿ ರಾಜಕುಮಾರ್ ಅವರ ಇಂಗ್ಲೆಂಡ್ ಪ್ರವಾಸದ ಫೋಟೋಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನ್ಯೂ- ಯಾರ್ಕ್ ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಧೃತಿಯವರು ಸದ್ಯಕ್ಕೆ ಇಂಗ್ಲೆಂಡ್ ನಲ್ಲಿದ್ದಾರೆ.ಇಂಗ್ಲೆಂಡ್ ಅದ್ಭುತ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಪ್ರದೇಶ. ಬಿಗ್ ಬೆನ್,ಲಂಡನ್ ಐ ಹೀಗೆ ಅನೇಕ ಪ್ರದೇಶಗಳಿರುವ ಇಂಗ್ಲೆಂಡ್ ನಲ್ಲಿ ಸೆವೆನ್ ಸಿಸ್ಟರ್ಸ್ ಕ್ಲಿಫ್ಸ್ ಕೂಡ ಒಂದು.ಇದೀಗ ದೃತಿ ಯವರು ಸೆವೆನ್ ಸಿಸ್ಟರ್ಸ್ ಕ್ಲಿಫ್ಸ್ ಗೆ ಭೇಟಿ ನೀಡಿದ್ದಾರೆ. ಆ ಕ್ಷಣವನ್ನು ಆನಂದಿಸುತ್ತಿರುವ ಫೋಟೋಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ .