ಫ್ಯಾನ್ಸ್ ವಾರ್ ಬಗ್ಗೆ ನಟಿ ತಾರ ಏನಂದ್ರು?
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ‘ಫ್ಯಾನ್ ವಾರ್’ ಎನ್ನುವ ವಿಚಾರ ಮಿತಿ ಮೀರುತ್ತಿರುತ್ತಿದೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ವಿಚಾರದ ಬಗ್ಗೆ ಹಿರಿಯ ನಟಿ ತಾರ ಅವರು ಪ್ರತಿಕ್ರಿಯಿಸಿದ್ದಾರೆ.
“ನಮಗೆ ಎಲ್ಲರೂ ಒಂದೇ ಸ್ಟಾರ್. ಕನ್ನಡ ಸ್ಟಾರ್. ಇಬ್ಬರು ನಟರು ಒಳ್ಳೆಯವರು.ಇಬ್ಬರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ.ಸ್ಟಾರ್ ವಾರ್ ನಲ್ಲಿ ನನಗೆ ನಂಬಿಕೆ ಇಲ್ಲ.ಒಳ್ಳೆಯ ಸಿನಿಮಾ ಬರಬೇಕು ಅನ್ನೋದಷ್ಟೇ ನಮ್ಮ ಆಸೆ “ಎಂದು ಹೇಳಿದ್ದಾರೆ.