ಸಂಗೀತ ಶೃಂಗೇರಿ ಅಭಿಮಾನಿಗಳಿಗೆ ಸರ್ಪ್ರೈಸ್!
ಬಿಗ್ ಬಾಸ್ ಹಾಗೂ ಚಾರ್ಲಿ 777 ಮೂಲಕ ಮನೆ ಮಾತಾದ ಸಂಗೀತ ಶೃಂಗೇರಿ ಮತ್ತೆಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ, ಇದೀಗ ಇವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
‘ಅಚೂ ‘ ಎನ್ನುವ ಆಲ್ಬಮ್ ಹಾಡಿನಲ್ಲಿ ಕಾಣಿಸಿಕೊಂಡಿರುವ ಸಂಗೀತ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.ಈ ಹಾಡಿನ ವಿಶೇಷವೆಂದರೆ ನಟಿ ಸಂಗೀತ ಅವರು ಖುದ್ದಾಗಿ ಹಾಡಿಗೆ ಧನಿಯಾಗಿದ್ದಾರೆ. ಇವರ ಜೊತೆಗೆ ಕನ್ನಡದ ಖ್ಯಾತ ರಾಪರ್ ಎಂಸಿ ಬಿಜ್ಜು (MC Bijju), ಕಿಯಾರಾ ತಾರಕ್ ಮತ್ತು ಸೂರಜ್ ಜೋಯಿಸ್ ಕೂಡ ಹಾಡಿಗೆ ಧನಿಯಾಗಿದ್ದಾರೆ.
ತಾರಕ್ ಮತ್ತು ರೂಪಾ ತಾರಕ್ ಅವರ ಕಾನ್ಸೆಪ್ಟ್ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಭಿಷೇಕ್ ಮತಡ್ ಸ್ಟೆಪ್ಸ್ ಹಾಕಿದ್ದಾರೆ.