ಯಶ್ ಕ್ರೇಜ್ ಅನ್ಸ್ಟಾಪಬಲ್! ಸಿನಿಮಾ, ಬರಲಿ ಬಿಡಲಿ ಸ್ಟಿಲ್ ನಂಬರ್ ಒನ್…
2025 ರಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಹತ್ತರ ಬೆಳವಣಿಗೆಗಳು ನಡೆದಿವೆ. ಅದ್ಭುತ ಸಿನಿಮಾಗಳಿಂದ ಹಿಡಿದು ಕಲಾವಿದರವರೆಗೂ ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್ ವುಡ್ ಬಗ್ಗೆ ಈ ಬಾರಿ ಚರ್ಚೆಗಳು ನಡೆದವು.
ಈ ವರ್ಷದ ಕೊನೆಯ ಹಂತದಲ್ಲಿ, ಈ ವರ್ಷದ ಗೂಗಲ್ ಟ್ರೆಂಡ್ಸ್ ಪ್ರಕಾರ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕನ್ನಡದ ನಟ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2022 ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ರ ಬ್ಲಾಕ್ ಬಸ್ಟರ್ ಹಿಟ್ ನಂತರ ಯಶ್ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಬರೋಬ್ಬರಿ ಮೂರು ವರ್ಷಗಳ ನಂತರ 2026 ರಲ್ಲಿ ಇಂಟರ್ನ್ಯಾಷನಲ್ ಸಿನಿಮಾ ಟಾಕ್ಸಿಕ್ ಮೂಲಕ ಬಾಕ್ಸ್ ಆಫೀಸ್ ಉಡೀಸ್ ಮಾಡಲು ಮರಳಿ ಬರುತ್ತಿದ್ದಾರೆ.
ಆದರೆ 2023 ರಿಂದ 2025 ರವರೆಗೆ ತೆರೆ ಮೇಲೆ ಬರದಿದ್ದರೂ ಗೂಗಲ್ ನ ʼಮೋಸ್ಟ್ ಸರ್ಚ್ಡ್ ಕನ್ನಡ ಆಕ್ಟರ್ ವರ್ಲ್ಡ್ ವೈಡ್ʼ ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇದು ಅವರ ಬ್ರಾಂಡ್ ವ್ಯಾಲ್ಯೂ ಅನ್ನು ಸಾಭೀತುಪಡಿಸುತ್ತದೆ.ಇದಕ್ಕೆ ಮೂಲ ಕಾರಣ ಯಶ್ ಅವರ ಮುಂಬರುವ ಚಿತ್ರದ ಮೇಲೆ ಇರುವ ಕುತೂಹಲ.
2026 ರಲ್ಲಿ ರಾಕಿಂಗ್ ಸ್ಟಾರ್ ಯಶ್ ʼಟಾಕ್ಸಿಕ್ʼ ಮತ್ತು ರಾಮಾಯಣ ಚಿತ್ರ ಗಳ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.ಮೊದಲನೆಯದಾಗಿ ಟಾಕ್ಸಿಕ್ ಸಿನಿಮಾ ಅನೌನ್ಸ್ ಆದ ಟೈಮ್ ನಿಂದಲೂ ಸಿನಿಮಾದಲ್ಲಿ ಯಾರ್ಯಾರು ಇದ್ದಾರೆ?ಯಶ್ ಅವರ ಪಾತ್ರ ಯಾವ ರೀತಿ ಇರುತ್ತೆ?ಕಥೆ ಏನಿರಬಹುದು? ಹೀಗೆ ಅನೇಕ ವಿಚಾರಗಳು ನಿರಂತರವಾಗಿ ಚರ್ಚೆ ಆಗುತ್ತಿದೆ.ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಕಿಯಾರ ಅಡ್ವಾಣಿ ಮತ್ತು ಇಂದು ಬಿಡುಗಡೆಯಾದ ಹುಮಾ ಖುರೇಶಿ ಪಾತ್ರದ ಪೋಸ್ಟರ್ ಗಳು ಮತ್ತು ಇಂಟರ್ನ್ಯಾಷನಲ್ ತಂತ್ರಜ್ಞರ ಪಾಲ್ಗೊಳ್ಳುವಿಕೆ ಸಖತ್ ಸದ್ದು ಮಾಡುತ್ತಿದೆ.
ಈ ʼಟಾಕ್ಸಿಕ್ʼ ಸಿನಿಮಾದ ಜೊತೆಗೆ ಯಶ್ ಅವರು ನಿತೇಶ್ ತಿವಾರಿ ನಿರ್ದಶಿಸುತ್ತಿರುವ ರಾಮಾಯಣ ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.ಹಾಗಾಗಿ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಭಾರಿ ಚರ್ಚಿತವಾಗಿತ್ತು.