ರಾಕಿಂಗ್ ಸ್ಟಾರ್ ಯಶ್ ಅಭಿನಯದ 2026 ರ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್ ‘ ಮಾರ್ಚ್ 19 ರಂದು ರೆಕಾರ್ಡ್ ಬರೆಯಲು ಸಿದ್ದವಾಗಿದೆ. ಕೆಜಿಎಫ್ ಹಾಗೂ ಕೆಜಿಎಫ್ ಚಾಪ್ಟರ್ 2ರ ನಂತರ ಯಶ್ ನಟನೆಯ ಸಿನಿಮಾದ ಮೇಲೆ ಎಲ್ಲರ ಗಮನವಿತ್ತು.ಇದೀಗ ಈ ಸಿನಿಮಾದ ಬಿಗ್ ಅಪ್ಡೇಟ್ ಹೊರ ಬಂದಿದೆ.

ಮೊನ್ನೆ ಕಿಯಾರ ಅಡ್ವಾಣಿ ಫರ್ಸ್ಟ್ ಲುಕ್ ರಿವೀಲ್ ಆದ ಮೇಲೆ ಮುಂದೆ ಯಾರ ಲುಕ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡುತ್ತೆ ಎನ್ನುವ ಕುತೂಹಲ ಎಲ್ಲರಿಗಿತ್ತು. ಇದೀಗ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು ಹುಮಾ ಖುರೇಶಿ ಅವರ ಲುಕ್ ಜೊತೆಗೆ ಪಾತ್ರದ ಹೆಸರನ್ನು ಚಿತ್ರ ತಂಡ ರಿವೀಲ್ ಮಾಡಿದೆ.

ಹುಮಾ ಖುರೇಶಿ ಟಾಕ್ಸಿಕ್ ಚಿತ್ರದಲ್ಲಿ ಎಲಿಜಬೆತ್ ಪಾತ್ರದಲ್ಲಿ ಮಿಂಚುವ ಮೂಲಕ ಕನ್ನಡ ಸಿನಿ ರಂಗಕ್ಕೆ ಪಾದರ್ಪಣೆ ಮಾಡಲಿದ್ದಾರೆ.2012 ರಲ್ಲಿ ‘ಗ್ಯಾಂಗ್ಸ್ ಆಫ್ ವಾಸೇಪುರ್‘ ಎನ್ನುವ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿರುವ ಹುಮಾ ಮೋನಿಕಾ ಓ ಮೈ ಡಾರ್ಲಿಂಗ್, ತರ್ಲಾ ಹೀಗೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಪೋಸ್ಟರ್‌ನಲ್ಲಿ ಹುಮಾ ಅವರ ಹಿಂದೆ ಸ್ಮಶಾನ ಮತ್ತು ಕಲ್ಲಿನ ವಿಗ್ರಹಗಳಿದ್ದು, ಅವರು ಕಪ್ಪು ವಿಂಟೇಜ್ ಕಾರಿನ ಮುಂದೆ ಕಪ್ಪು ಬಣ್ಣದ ಉಡುಪಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.ಗಾತಿಕ್ ಶೈಲಿ,ಡಾರ್ಕ್ ವೈಬ್ ಈ ಪೋಸ್ಟರ್ ನಲ್ಲಿ ನಾವು ಕಾಣಬಹುದು.ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಅವರು ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಅಥವಾ ಅತ್ಯಂತ ಬೋಲ್ಡ್ ಆದ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು.

Written By
Kannada Picchar

Leave a Reply

Your email address will not be published. Required fields are marked *