‘ಮೇಘನಾ ಬಾ ಹೋಗಾನಾ’ ಸಾಂಗ್ ರಿಲೀಸ್
ಸ್ಯಾಂಡಲ್ ವುಡ್ ನ ನಟ ರಾಕ್ಷಸ ಎಂದೇ ಪ್ರಖ್ಯಾತಿ ಹೊಂದಿರುವ ಡಾಲಿ ಧನಂಜಯ ಅವರ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಬರುತ್ತಿರುವ ಸಿನಿಮಾವೇ ಈ ಜೆಸಿ ದಿ ಯೂನಿವರ್ಸಿಟಿ.ಡಾಲಿ ಪಿಕ್ಚರ್ಸ್ ಬ್ಯಾನರ್ ಸಾರಥ್ಯದಲ್ಲಿ ಬರುತ್ತಿರುವ 5 ನೇ ಸಿನಿಮಾ ಇದಾಗಿದ್ದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದೆ.
ಈ ಸಿನಿಮಾದ 2ನೇ ಹಾಡು ಇಂದು ಬಿಡುಗಡೆಗೊಂಡಿದೆ.’ಮೇಘನಾ ಬಾ ಹೋಗಾನಾ’ ಹಾಡು ಇಂದು ಡಾಲಿ ಪಿಕ್ಚರ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಂಡಿದ್ದು, ಈ ಹಾಡನ್ನು ಡಾ. ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ರೋಹಿತ್ ಸೋವರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪಂಚಮ್ ಜೀವ ಹಾಗೂ ಶ್ರೀಲಕ್ಷ್ಮಿ ಬೆಲ್ಮನ್ನು ಹಾಡಿದ್ದಾರೆ.
ಸಿನಿಮಾದ ನಾಯಕನಾಗಿ ‘ ನಡುವೆ ಅಂತರವಿರಲಿ’ ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದ ಪ್ರಖ್ಯಾತ್ ಕಾಣಿಸಿಕೊಳ್ಳಲಿದ್ದು, ಬರೋಬ್ಬರಿ 5 ವರ್ಷಗಳ ನಂತರ ಮತ್ತೆ ಸಿನಿ ಪ್ರೇಕ್ಷಕರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿಯಾಗಿ ಭಾವನ ರೆಡ್ಡಿ ಮಿಂಚಲಿದ್ದಾರೆ.