new updates News ಪಿಚ್ಚರ್ stories ಪಿಚ್ಚರ್ UPDATE

45, ಮಾರ್ಕ್ ಭರ್ಜರಿ ಗಳಿಕೆ.. 15ನೇ ದಿನ ಡೆವಿಲ್ ಕಲೆಕ್ಷನ್ ಏನು?

45, ಮಾರ್ಕ್ ಭರ್ಜರಿ ಗಳಿಕೆ.. 15ನೇ ದಿನ ಡೆವಿಲ್ ಕಲೆಕ್ಷನ್ ಏನು?
  • PublishedDecember 26, 2025


By Pallavi N Raj

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಡೆವಿಲ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.. ದರ್ಶನ್ ಜೈಲಿನಲ್ಲಿ ಇದ್ದರೂ, ಸಿನಿಮಾದ ಕಲೆಕ್ಷನ್ ಜೋರಾಗಿ ಆಗಿದೆ.. ಮೊದಲ ವಾರ ಸಿನಿಮಾ ಕಲೆಕ್ಷನ್ ಅದ್ಭುತವಾಗಿತ್ತು. ನಂತರ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಕೆಲವು ಕಡೆ ಡ್ರಾಪ್ ಕಂಡರೂ ಇಂದಿನ ವರೆರೂ ಕೂಡ ಡಿಬಾಸ್ ನೋಡಲು ಫ್ಯಾನ್ಸ್ ಥಿಯೇಟರ್ ನತ್ತ ಬರ್ತಿದ್ದಾರೆ..

ಹೌದು.. ಎರಡನೇ ವಾರದಿಂದ ಡೆವಿಲ್ ಸಿನಿಮಾ ಡ್ರಾಪ್ ಕಾಣುವುದಕ್ಕೆ ಶುರುವಾಗಿತ್ತು. ಈಗ ಸಿನಿಮಾ ರಿಲೀಸ್ ಆಗಿ 16ನೇ ದಿನಕ್ಕೆ ಕಾಲಿಟ್ಟಿದೆ. ಈ 15 ದಿನಗಳಲ್ಲಿ ಡೆವಿಲ್ ಕಲೆಕ್ಷನ್ ಹೇಗಿದೆ? ಮಾರ್ಕ್ ಹಾಗೂ 45 ಸಿನಿಮಾ ರಿಲೀಸ್ ಬಳಿಕ ದರ್ಶನ್ ಸಿನಿಮಾದ ಕಲೆಕ್ಷನ್ ಏನಾಯ್ತು?

ಅಂದಹಾಗೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕ್ರೇಜಿ ಫ್ಯಾನ್ಸ್ ಇದ್ದಾರೆ. ಈ ಬಾರಿ ಡೆವಿಲ್ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಪಣ ತೊಟ್ಟು ನಿಂತಿದ್ದರು. ಭರ್ಜರಿಯಾಗೇ ಸಿನಿಮಾದ ಕಲೆಕ್ಷನ್ ಕೂಡ ಆಗಿದೆ. ಸ್ಯಾಕ್ನಿಲ್ಕ್ ಪ್ರಕಾರ ಡೆವಿಲ್ ಸಿನಿಮಾ 15ನೇ ದಿನ ₹24 ಲಕ್ಷಕ್ಕೆ ಕಾಲಿಟ್ಟಿದೆ..
ಕಳೆದ ಎರಡು ವಾರಗಳಿಂದ ಡೆವಿಲ್ಗೆ ಟಕ್ಕರ್ ಕೊಡುವ ಸಿನಿಮಾಗಳು ಇರಲಿಲ್ಲ. ಆದರೆ, ಈ ವಾರದಿಂದ ಮಾರ್ಕ್ ಹಾಗೂ 45 ಸಿನಿಮಾ ರಿಲೀಸ್ ಆಗಿವೆ. ಹೀಗಾಗಿ ಈ ಎರಡೂ ಸಿನಿಮಾಗಳು ತೆರೆಕಂಡ ಬಳಿಕ ಡೆವಿಲ್ ಕಲೆಕ್ಷನ್ ಡ್ರಾಪ್ ಆಗಿಲ್ಲ. ಹೆಚ್ಚು ಕಡಿಮೆ 14ನೇ ದಿನ ಕಲೆಕ್ಷನ್ ಆದಂತೆ 15ನೇ ದಿನವೂ ಅಷ್ಟೇ ಕಲೆಕ್ಷನ್ ಮಾಡಿದೆ. ಹೀಗಾಗಿ ವೀಕೆಂಡ್‌ನಲ್ಲಿ ಮೇಲೆ ಕಣ್ಣೀಡಲಾಗಿದೆ..

Written By
Kannada Picchar

Leave a Reply

Your email address will not be published. Required fields are marked *