ಸೈಕೋ ಸೈತಾನ್ ಹವಾ ಶುರು : ‘ಮಾರ್ಕ್’ ಚಿತ್ರ ಬಿಡುಗಡೆ
ಕಿಚ್ಚ ಪ್ರೊಡಕ್ಷನ್ ಮತ್ತು ಸತ್ಯ ಜ್ಯೋತಿ ಫಿಲ್ಮ್ಸ್ ಜಂಟಿಯಾಗಿ ಪ್ರೊಡ್ಯೂಸ್ ಮಾಡಿರೋ ಈ ಫಿಲಂ ಅನ್ನು ನೋಡಲು ಕಿಚ್ಚನ ಅಭಿಮಾನಿಗಳು ಕಾತುರತೆ ಯಿಂದ ಕಾಯುತ್ತಿದ್ದರು. ಇದೀಗ ಈ ಕಾತುರತೆಗೆ ತೆರೆ ಬಿದ್ದಿದ್ದು ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಮಾರ್ಕ್ ಇಂದು ಬಿಡುಗಡೆಗೊಂಡಿದೆ.
ಸುದೀಪ್ ನಟನೆಯ ಈ ಸಿನಿಮಾವನ್ನು ವಿಜಯ ಕಾರ್ತಿಕೆಯ ಇವರು ಬರೆದು, ನಿರ್ದೇಶಿಸಿದ್ದಾರೆ. ಈಗಾಗಲೇ ಸಿನಿಮಾದ ‘ಸೈಕೋ ಸೈತಾನ್’, ‘ಮಸ್ತ್ ಮಲೈಕಾ’ ಹಾಗೂ ‘ಕಾಳಿ’ ಸಾಂಗ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿತ್ತು.ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು ಚಿತ್ರದ ಮೇಲಿರುವ ಕೌತುಕತೆಯನ್ನು ಹೆಚ್ಚಿಸಿತ್ತು.
ಇಂದು ಈ ಕ್ರಿಸ್ಮಸ್ ಹಬ್ಬದ ಜೊತೆಗೆ ಸಿನಿಮಾ ಬಿಡುಗಡೆಯಾಗಿದ್ದು, ‘ಮ್ಯಾಕ್ಸ್ ‘ ಚಿತ್ರದ ಒಂದು ವರ್ಷದ ವಾರ್ಷಿಕೋತ್ಸವದ ಜೊತೆಗೆ ಕಿಚ್ಚನ ಮತ್ತೊಂದು ಸಿನಿಮಾ ಥೀಯೇಟರ್ ಗೆ ಅಪ್ಪಳಿಸಿದ್ದು ಅಭಿಮಾನಿಗಳಿಗೆ ಸಕತ್ ಖುಷಿ ತಂದಿದೆ.
ತಾರ ಬಳಗ
‘ಮಾರ್ಕ್’ ಚಿತ್ರವು ದೊಡ್ಡ ತಾರ ಬಳಗವನ್ನು ಹೊಂದಿದ್ದು ಪ್ರಮೋದ್ ಶೆಟ್ಟಿ,ಸಂಯುಕ್ತ ಹೊರನಾಡು,ಶೈನ್ ಟಾಮ್,ನವೀನ್ ಚಂದ್ರ,ವಿಕ್ರಾಂತ್ ಹೀಗೆ ಅನೇಕ ಕಲಾವಿದರು ಮಾರ್ಕ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ.