ಜೋಗಿ ಪ್ರೇಮ್ ಕಂಠದಲ್ಲಿ ‘ಅಣ್ತಮ್ಮ ಜೋಡೆತ್ತು’
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ರಂಗ ನೀರಿಕ್ಷಣೆಯಿಂದ ಕಾಯುತ್ತಿರುವ ಕೇಡಿ : ದಿ ಡೆವಿಲ್ ಚಿತ್ರದ ‘ಅಣ್ತಮ್ಮ ಜೋಡೆತ್ತು’ ಹಾಡಿನ ರಿಲೀಸ್ ಡೇಟ್ ಅನ್ನು ಇಂದು ಚಿತ್ರತಂಡ ಅನೌನ್ಸ್ ಮಾಡಿದ್ದಾರೆ.ಇದೇ ತಿಂಗಳ 26 ರಂದು ಸಿನಿಮಾ ಸಾಂಗ್ ಬಿಡುಗಡೆಗೊಳ್ಳಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
‘ಅಣ್ತಮ್ಮ ಜೋಡೆತ್ತು’ ಸಾಂಗ್
ಈ ಹಾಡನ್ನು ಆನಂದ್ ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ. ಹಾಡಿಗೆ ಕನ್ನಡದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಜೋಗಿ ಪ್ರೇಮ್ ಅವರು ಈ ಹಾಡಿಗೆ ಧನಿಯಾಗಿದ್ದಾರೆ.ಇದು ಸಿನಿಮಾದ 3ನೇ ಹಾಡಾಗಿದೆ. ಈಗಾಗಲೇ ಈ ಸಿನಿಮಾದ ‘ಶಿವ ಶಿವ’ ಹಾಗೂ ‘ಸೆಟ್ಟಾಗಲ್ಲ ನಂಗು ನಿಂಗು’ ಹಾಡುಗಳು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ.
ಕಲಾವಿದರ ಬಳಗ
ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಸಂಜಯ್ ದತ್,ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿ ಸಿನಿಮಾ ನಾಯಕಿ ರೀಷ್ಮ ನಾಣಯ್ಯ ಎಲ್ಲರ ಬೃಹತ್ ಕಲಾವಿದರ ಬಳಗವೆ ಇದೆ.