new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ನಿಮ್ ಮನೆ ಬಾಗಿಲಿಗೆ ಬರ್ತಾರೆ ಶಿವಣ್ಣ, ಉಪ್ಪಿ & ರಾಜ್

ನಿಮ್ ಮನೆ ಬಾಗಿಲಿಗೆ ಬರ್ತಾರೆ ಶಿವಣ್ಣ, ಉಪ್ಪಿ & ರಾಜ್
  • PublishedDecember 19, 2025

ಅರ್ಜುನ್‌ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ ʼ45ʼ ಇದೇ ಡಿಸೆಂಬರ್‌ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.ಮೂರು ಸೂಪರ್‌ ಸ್ಟಾರ್‌ಗಳನ್ನು ಒಟ್ಟಿಗೆ ಕಾಣಲು ಸಿನಿ ಪ್ರೇಕ್ಷಕರು ಕಾತುರತೆಯಿಂದ ಕಾಯುತ್ತಿದ್ದಾರೆ.ಶಿವಣ್ಣನ ಲೇಡಿ ಗೆಟಪ್‌,ಉಪ್ಪಿ ಸ್ಟೈಲ್‌ ಮತ್ತು ಡೈಲಾಗ್ಸ್‌,ಜೊತೆಗೆ ರಾಜ್ ಬಿ.‌ ಶೆಟ್ಟಿಯವರ ನಟನೆ ಈ ಎಲ್ಲವೂ ಜನರ ನಿರೀಕ್ಷೆ ಹೆಚ್ಚಿಸಿದೆ . ಇದೀಗ ಚಿತ್ರದ ಪ್ರೊಮೋಷನ್‌ ನಡೆಯುತ್ತಿದ್ದು,ಪ್ರಚಾರದ ಒಂದು ವಿಧಾನ ಗಮನ ಸೆಳೆದಿದೆ .

ಕನ್ನಡ ಚಲನ ಚಿತ್ರತಂಡವು ಚಿತ್ರಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ,ಥಿಯೇಟರ್ ಗಳಲ್ಲಿ ಹಾಗು ಬಸ್‌ ನಿಲ್ದಾಣಗಳಲ್ಲಿ ಸಿನಿಮಾ ಪೋಸ್ಟರ್‌ ಹಾಕಿ ಪ್ರಚಾರ ಮಾಡುವುದು ಕಾಮನ್.ಪ್ರಸಿದ್ಧ ರಿಯಾಲಿಟಿ ಶೋಗಳಿಗೆ ಅತಿಥಿಯಾಗಿ ಬರುವುದು‌,ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರದ ಹಾಡು ಬಳಸಿ ‌ಇನ್ಫ್ಲ್ ಯೆನ್ಸರ್ ಅವರಿಂದ ಪೇಡ್ ಪ್ರಮೋಷನ್‌ ಮಾಡಿಸುವುದು ಹೀಗೆ ಅನೇಕ ರೀತಿಯಲ್ಲಿ ಪ್ರಚಾರ ಮಾಡುವುದು ಬಳುವಳಿಯಾಗಿ ಬಂದಿದೆ. ಇದೇ ರೀತಿ ಮತ್ತಿತರ ತಂತ್ರಗಳನ್ನು ಸಿನಿಮಾ ತಂಡಗಳು ಬಳಸುತ್ತಾ ಬಂದಿರುವುದ್ದನ್ನು ನಾವು ನೋಡಿದ್ದೇವೆ .

ಇದೀಗ ʼ45ʼ ಚಿತ್ರತಂಡ ವಿಭಿನ್ನವಾಗಿ ಪ್ರಚಾರ ಮಾಡಲು ಹೊರಟಿದೆ.ಅದುವೇ ಅಮೇಜಾನ್‌ ಮೂಲಕ ಚಿತ್ರದ ಪೋಸ್ಟರನ್ನು ಮನೆ ಮನೆಗೆ ತಲುಪಿಸುವುದು.ಅಮೇಜಾನ್‌ ಮೂಲಕ ಆರ್ಡರ್‌ ಮಾಡೋ ಗ್ರಾಹಕರಿಗೆ ಪಾರ್ಸಲ್‌ ಜೊತೆಗೆ ʼ45ʼಚಿತ್ರದ ಎಕ್ಸ್‌ ಕ್ಲೂಸಿವ್ ಪೋಸ್ಟರ್‌ ಅನ್ನು ಉಡುಗೊರೆಯಾಗಿ ನೀಡುವ ಹೊಸ ಪ್ರಯತ್ನಕ್ಕೆ ಚಿತ್ರ ತಂಡ ಕೈ ಹಾಕಿದೆ.ಇದರಿಂದ ಮನೆ ಮನೆಗೆ ಚಿತ್ರ ಚಿತ್ರಮಂದಿರಗಳಲ್ಲಿ ಡಿಸೆಂಬರ್‌ ನಲ್ಲಿ ಆಗಮಿಸುತ್ತಿರುವ ಸಂಗತಿಯನ್ನು ಹೇಳಲಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್‌,ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಪ್ರಸ್ತುತ ಸಿನಿ ರಂಗದಲ್ಲಿ ಅಲೆ ಮೂಡಿಸುತ್ತಿರುವ ರಾಜ್‌ ಬಿ.ಶೆಟ್ಟಿ ಯವರು ಇರುವ ಪೋಸ್ಟರ್‌ ಅಮೇಜಾನ್ ನಿಂದ ಎನನ್ನಾದಾರು ಆರ್ಡರ್‌ ಮಾಡುವ ಕಸ್ಟಮರ್ಸ್ ಗಳಿಗೆ ಗಿಫ್ಟ್‌ ಆಗಿ ನೀಡಲಾಗುತ್ತಿದೆ.ಈಗಾಗಲೇ ಅಮೇಜಾನ್‌ ನಿಂದ ಸಿನಿಮಾದ ಪೋಸ್ಟರ್‌ ಸಿಕ್ಕಿರುವ ಅಭಿಮಾನಿಗಳು ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದರ ಮೊದಲು ರಜನಿಕಾಂತ್‌ ನಟನೆಯ ʼಕೂಲಿʼ ಸಿನಿಮಾವು ಇದೇ ರೀತಿಯ ತಂತ್ರವನ್ನು ಉಪಯೋಗಿಸಿತ್ತು.ಇದೀಗ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ʼ45ʼ ಚಿತ್ರವು ಈ ವಿಧಾನವನ್ನ ಬಳಸಿದೆ.

Written By
Kannada Picchar

Leave a Reply

Your email address will not be published. Required fields are marked *