ʼಬಲರಾಮನ ದಿನಗಳುʼ ಶುರು ಶುರು ಸಾಂಗ್ ಬಿಡುಗಡೆ
ʼಬಲರಾಮನ ದಿನಗಳುʼ ಪ್ರಸ್ತುತ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು.ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೆ. ಎಂ. ಚೈತನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹಾಗೂ ಪ್ರಿಯ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಇದೀಗ ಸಿನಿಮಾದ ‘ಶುರು ಶುರು ‘ ಹಾಡೊಂದು ರಿಲೀಸ್ ಆಗಿದೆ. ಹಾಡಿಗೆ ಸಂತೋಷ್ ನಾರಾಯಣ ಸಂಗೀತ ನೀಡಿದ್ದು,ಜಯಂತ್ ಕುಲಕರ್ಣಿ ಹಾಡನ್ನು ಬರೆದಿದ್ದಾರೆ. ಅದರ ಜೊತೆಗೆ ಕನ್ನಡದ ರೈಸಿಂಗ್ ಸ್ಟಾರ್ ಸಂಚಿತ್ ಹೆಗ್ಡೆ ಹಾಗೂ ಪುಣ್ಯ ಧನಿಯಾಗಿದ್ದಾರೆ.
ಟಿ – ಸೀರೀಸ್ ಕನ್ನಡದ ಯೌಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು ಅದ್ಭುತ ಸಾಲು ಹಾಗೂ ಸಂಗೀತವನ್ನು ಹಾಡು ಹೊಂದಿದೆ.