new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಬೆಚ್ಚಿಬೀಳಿಸಿದ‌ 45 ಟ್ರೈಲರ್ ಶಿವಣ್ಣ V/S ಉಪ್ಪಿ

ಬೆಚ್ಚಿಬೀಳಿಸಿದ‌ 45 ಟ್ರೈಲರ್    ಶಿವಣ್ಣ V/S ಉಪ್ಪಿ
  • PublishedDecember 16, 2025

ಅರ್ಜುನ್ ಜನ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 45 ಸಿನಿಮಾದ ಟ್ರೈಲರ್ ಇಂದು ಬಿಡುಗಡೆಗೊಂಡಿದೆ.ಉಪ್ಪಿ, ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಈ ಚಿತ್ರವು ಅದ್ಭುತ ತಾರ ಬಳಗವನ್ನು ಹೊಂದಿದೆ. ಈ ಚಿತ್ರದ ಟ್ರೈಲರ್ ನಲ್ಲಿ ಏನಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಮೊದಲನೆಯದಾಗಿ ಚಿತ್ರವು ಸನಾತನ ಧರ್ಮದ ಪ್ರಕಾರ ಮನುಷ್ಯನ ಮರಣದ ನಂತರದ 45 ದಿನಗಳ ನಡುವೆ ನಡೆಯುವ ಕಥೆ ಇದಾಗಿದ್ದು, ಈ ವಿಷಯದ ಹೊರತು ಕಥೆಯ ಬಗ್ಗೆ ಸಣ್ಣ ಕುರುಹನ್ನು ಸಮೇತ ಚಿತ್ರ ತಂಡ ಬಿಟ್ಟು ಕೊಟ್ಟಿಲ್ಲ.

ಟ್ರೈಲರ್ ನೋಡಿದಾಗ ಅದರಲ್ಲಿ ಬಳಸಿರುವ ಗ್ರಾಫಿಕ್ಸ್ ಗಳು ಬಹಳ ಪ್ರಮಾಣದಲ್ಲಿ ಗಮನ ಸೆಳೆದಿವೆ.ಇನ್ನು ಮೂರು ನಟರ ಪಾತ್ರದ ಬಗ್ಗೆ ಬಹಳ ನೀರಿಕ್ಷೆ ಹೆಚ್ಚಿದೆ. ಟ್ರೈಲರ್ ನ ಪ್ರಕಾರ ಶಿವಣ್ಣ ವಿಭಿನ್ನ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಬಹುದು.ಆದರೆ ಸದ್ಯಕ್ಕೆ ಅವರ ಸ್ತ್ರೀ ವೇಷ ಕುತೂಹಲವನ್ನು ತಂದಿದೆ.ಬರೋಬ್ಬರಿ 33 ವರ್ಷಗಳ ಬಳಿಕ ಸ್ತ್ರೀ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ 1992 ರಲ್ಲಿ ಮೊದಲು ಮಿಡಿದ ಶೃತಿ ಯಲ್ಲಿ ಲೇಡಿ ಗೆಟಪ್ ನಲ್ಲಿ ಸದ್ದು ಮಾಡಿದ್ದರು.

ಇನ್ನು ಉಪ್ಪಿ ಅವರ ಯೂನಿಕ್ ಸ್ಟೈಲ್ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ.ಉಪ್ಪಿನೆ ಬೇರೆ ಅವರ ಸ್ಟೈಲೇ ಬೇರೆ ಅನ್ನೋದನ್ನ ಮತ್ತೆ ನಿರೂಪಿಸಿದ್ದಾರೆ. ಅವರ ಮ್ಯಾನರಿಸಮ್ ಮತ್ತು ಡೈಲಾಗ್ ಡೆಲಿವರಿ ಪಕ್ಕ ರಿಯಲ್ ಸ್ಟಾರ್ ಉಪೇಂದ್ರ ಅವರ ವೈಖರಿಯಲ್ಲಿದೆ. ಇದು ಅವರ ಅಭಿಮಾನಿಗಳಿಗೆ ಸಕ್ಕತ್ ಖುಷಿ ನೀಡಿದೆ.

ಇನ್ನು ರಾಜ್ ಬಿ. ಶೆಟ್ಟಿ ಈ ಕಥೆಯಲ್ಲಿ ಶಿವಣ್ಣ ಹಾಗೂ ಉಪೇಂದ್ರ ಅವರ ಪಾತ್ರಕ್ಕೆ ಹೋಲಿಸಿದರೆ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು ಮಾಡಿದ್ದಾರೆ. ರಾಜ್ ಗರುಡ ಗಮನ ವೃಷಭ ವಾಹನ, ಸು ಫ್ರಮ್ ಸೊ ಚಿತ್ರಗಳ ಮೂಲಕ ವರ್ಸಟೈಲ್ ನಟನೆಯನ್ನು ತೋರಿಸುವ ವ್ಯಕ್ತಿ. ಈ ಚಿತ್ರದಲ್ಲಿ ರಾಜ್ ಪಾತ್ರ ಯಾವ ರೀತಿ ಇರಬಹುದು ಎಂದು ಈಗಾಗಲೇ ಜನ ಯೋಚಿಸುತ್ತಿದ್ದಾರೆ.

ಒಟ್ಟಿನಲ್ಲಿ 25 ಡಿಸೆಂಬರ್ ಕನ್ನಡ ಸಿನಿ ಪ್ರೇಕ್ಷಕರಿಗಂತೂ ಔತಣಡೂಟ ಆಗೋದಂತೂ ಪಕ್ಕ.ಟ್ರೈಲರ್ ಈ ರೇಂಜ್ ಗೆ ಇರ್ಬೇಕಾದ್ರೆ ಮೂವಿ ಇನ್ನು ಹೆಂಗಿರ್ಬೇಡ ಎಂದು ಟ್ರೈಲರ್ ವೀಕ್ಷಿಸಿದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *