News news updates ಪಿಚ್ಚರ್ stories ಪಿಚ್ಚರ್ UPDATE

ಮಾರ್ಕ್ Paid ಅಂದೋರಿಗೆ ಕಿಚ್ಚ ಖಡಕ್ ಕೌಂಟರ್..!!

ಮಾರ್ಕ್ Paid ಅಂದೋರಿಗೆ ಕಿಚ್ಚ ಖಡಕ್ ಕೌಂಟರ್..!!
  • PublishedDecember 15, 2025


ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರ್ತಾಯಿದೆ.. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟ್ರೇಲರ್ 15 ಮಿಲಿಯನ್ ವೀಕ್ಷಣೆ ಪಡೆದಿದೆ.. ಜಸ್ಟ್ ಕೆಲವೇ ಗಂಟೆಗಳಲ್ಲಿ ಚಿತ್ರದ ಟ್ರೇಲರ್ ಡೆವಿಲ್ ಟ್ರೇಲರ್ ವೀಕ್ಷಣೆಯನ್ನು ಹಿಂದಕ್ಕೆ ಹಾಕಿದೆ.. ಈ ಬಗ್ಗೆ ಚರ್ಚೆಗಳ ನಡೆಯುತ್ತಿವೆ. ಈ ಚರ್ಚೆಗಳಿಗೆ ಕಿಚ್ಚ ಸುದೀಪ್ ಸಂದರ್ಶನದಲ್ಲಿ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ..

ಟ್ರೈಲರ್ ನೋಡಿದ ಕೆಲವರು ಅಯ್ಯೋ ಇದೊಂದು ಪೇಯ್ಡ್ ವೀವ್ಸ್ ಅಂದಿದ್ರು ಹಣ ಕೊಟ್ಟು ಮಾರ್ಕ್ ಟ್ರೇಲರ್ ವೀಕ್ಷಣೆ ಹೆಚ್ಚಿಸಲಾಗಿದೆ ಎಂಬ ಮಾತು ಕೇಳಿ ಬಂದವು. ಇದಕ್ಕೆ ಸುದೀಪ್ ಅವರು ಪ್ರತಿಕ್ರಿಯಿಸಿದ್ದಾರೆ.

ಟ್ರೇಲರ್ ಪೇಯ್ಡ್ ವೀಕ್ಷಣೆ ಎಂಬ ಅಭಿಪ್ರಾಯ ಇದ್ದರೆ ಹಾಗೆ ಅನಿಸಲಿ ಬಿಡಿ ಎಂಬುದು ಕಿಚ್ಚನ ಮಾತು. ದಾಖಲೆ ಮಾಡೋದೇ ಉದ್ದೇಶ ಆಗಿದ್ದರೆ ಸುದೀಪ್ ಇನ್ನೂ ಹೆಚ್ಚು ದುಡ್ಡು ಕೊಟ್ಟು 30 ಮಿಲಿಯನ್ ಆಗೋ ರೀತಿ ಮಾಡುತ್ತಿದ್ದರಂತೆ. 15 ಮಿಲಿಯನ್ ಬೇಗ ಏಕೆ ಆಯಿತು ಎಂದರೆ ಅಷ್ಟು ಜನರು ಇದ್ದಾರೆ. ಅದಕ್ಕಾಗಿ ಅಷ್ಟು ವೀವ್ಸ್ ಆಗಿದೆ. ಉಣ ಬಡಿಸೋದು ಮಾತ್ರ ನಮ್ಮ ಕೆಲಸ. ಇಷ್ಟ ಇದ್ರೆ ಊಟ ಮಾಡಲಿ, ಇಲ್ಲದಿದ್ದರೆ ಎದ್ದು ಹೋಗಲಿ ಎಂಬುದು ಕಿಚ್ಚನ್ ಪಂಚಿಂಗ್ ಮಾತಾಗಿತ್ತು..

ಇನ್ನೂ.. ಫ್ಯಾನ್ಸ್ ಯಾವಾಗ ಡಿಸೆಂಬರ್ 25 ಬರುತ್ತೋ ನಾವು ಯಾವಾಗ ನೆಚ್ಚಿನ ನಟನ ಸಿನಿಮಾ ನೋಡಿ ಎಂಜಾಯ್ ಮಾಡ್ತೀವೋ ಅಂತ ವೇಟ್ ಮಾಡ್ತಿದ್ದಾರೆ..

Written By
Kannada Picchar

Leave a Reply

Your email address will not be published. Required fields are marked *