ಡೆವಿಲ್ Review ಮಾಡಿದ ದರ್ಶನ್ ಪತ್ನಿ ವಿಜಯ ಲಕ್ಷ್ಮೀ
ಕನ್ನಡ ಚಿತ್ರ ರಂಗದ ಅದ್ಭುತ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅತ್ಯಂತ ನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಈಗಾಗಲೇ ಚಿತ್ರ ಮಂದಿರಗಳಲ್ಲಿ ಹಲ್ ಚಲ್ ಎಬ್ಬಿಸಿದೆ.
ಚಿತ್ರದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ಮಂಗಳೂರಿನ ಹುಡುಗಿ ರಚನಾ ರೈ, ಬಿಗ್ ಬಾಸ್ ಖ್ಯಾತಿಯ ಗಿಲ್ಲಿನಟ, ಹುಲಿ ಕಾರ್ತಿಕ್,ಅಚ್ಯುತ್ ಕುಮಾರ್, ವಿನಯ್ ಗೌಡ, ಚಂದು ಗೌಡ, ಶರ್ಮಿಳಾ ಮಾಂಡ್ರೆ ಹೀಗೆ ಅನೇಕ ಕಲಾವಿದರಿರುವ ದೊಡ್ಡ ತಾರ ಬಳಗವೇ ಇದೆ.
ಚಿತ್ರದಲ್ಲಿರುವ ಹಾಡುಗಳು,ನಟರ ಸ್ಟೈಲಿಶ್ ಉಡುಪುಗಳು ಇಲ್ಲರ ಗಮನವನ್ನು ಸೆಳೆದಿತ್ತು. ಚಿತ್ರವು ರಾಜಕೀಯ ವಿಚಾರಗಳ ನಡುವೆ ನಡೆಯುವ ಕಥೆ ಎಂದು ಟೀಸರ್ ಅಲ್ಲೇ ಎಲ್ಲರೂ ಊಹಿಸಿದ್ದರು.
ಇದೀಗ ಚಿತ್ರ ಬಿಡುಗಡೆಗೊಂಡಿದೆ,ವಿಶೇಷವೆಂದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟನಲ್ಲಿ ಚಿತ್ರವನ್ನು ರಿವ್ಯೂ ಮಾಡಿದ್ದಾರೆ.ಚಿತ್ರ ಮಂದಿರದಿಂದ ಹೊರ ಬಂದ ಕ್ಷಣ ದಲ್ಲೇ ಹೃದಯ ತುಂಬಿ ಬಂದಿತ್ತು ಎಂದು ಹೇಳಿದ ಅವರು ನಿರ್ದೇಶಕ ಪ್ರಕಾಶ್ ವೀರ್ ಅವರ ದೃಷ್ಟಿ ಕೋನ, ಕಥೆಯ ವರ್ಣನೆ ಎಲ್ಲವನ್ನು ಹೊಗಳಿದ್ದಾರೆ. ಚಿತ್ರದ ನಾಯಕಿ ರಚನಾ ರೈ ಹಾಗೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಶರ್ಮಿಳಾ ಮಾತ್ರೆಯನ್ನು ಹೊಗಳಿರುವರು.
ನಂತರ ದರ್ಶನ್ ಅವರ ಪಾತ್ರವನ್ನು ಹೊಗಳಿದ ಅವರು “ಇಂದು ವಿಶೇಷವಾಗಿಸಲು ಸಹಾಯಕಾರ ಮಾಡಿದ ಎಲ್ಲಾ ಸೆಲೆಬ್ರಿಟಿ ಗಳಿಗೆ ಸಿನಿ ತಾರೆಯರಿಗೆ ಮತ್ತು ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು “ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.